December 23, 2024

AKSHARA KRAANTI

AKSHARA KRAANTI




ಶ್ರೀ ಬನಶಂಕರಿ ದೇವಿ ಅಮ್ಮನವರ ರಥೋತ್ಸವ

ಕೊಪ್ಪಳ,: ತಾಲೂಕಿನ ಕಿನ್ನಾಳ ಗ್ರಾಮದ ಆರಾಧ್ಯ ದೇವತೆ ಶ್ರೀ ಬನಶಂಕರಿ ದೇವಿ ಅಮ್ಮನವರ ಮಹಾರಥೋತ್ಸವ ಶನಿವಾರ ಭಾರತ ಹುಣ್ಣಿಮೆಯಂದು ಅದ್ದೂರಿಯಾಗಿ ಜರುಗಿತು. ಗ್ರಾಮದ ಎಲ್ಲಾ ಭಕ್ತರು ಸೇರಿಕೊಂಡು ರಥೋತ್ಸವ ನೆರವೇರಿಸಿ ದೇವಿ ಕೃಪೆಗೆ ಪಾತ್ರರಾದರು.
ರವಿವಾರ ಶ್ರೀ ಬನಶಂಕರಿ ದೇವಿ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಕಿನ್ನಾಳ ಗ್ರಾಮದ ದೇವಾಂಗ ಹಾಗೂ ಗ್ರಾಮದ ಸರ್ವ ಸರ್ವ ಜನಾಂಗದವರ ಸಮ್ಮುಖದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಗ್ರಾಮದ ಮಾರುತೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ದೇವಾಂಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶಿವಶಂಕರಪ್ಪ ಚೆನ್ನಿ ಅವರು ಹಾಗೂ ಕಿನ್ನಾಳ ಗ್ರಾಮದ ಸರ್ವ ಸಮಾಜದ ಬಂಧುಗಳೆಲ್ಲರೂ ರಕ್ತದಾನ ಶಿಬಿರವನ್ನು ಚಾಲನೆ ನೀಡಿದರು. ನಂತರ ಅನ್ನ ಸಂತರ್ಪಣೆ ನಡೆಯಿತು ಎಂದು ದೇವಾಂಗ ಸಮಾಜದ ಮಂಜುನಾಥ ಕಿನ್ನಾಳ ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!