December 23, 2024

AKSHARA KRAANTI

AKSHARA KRAANTI




ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ : ಡಾ.ಬಸವರಾಜ

ಯಲಬುರ್ಗಾ,: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ತಂತ್ರಜ್ಞಾನಕ್ಕೆ ಬೆಂಬಲ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ‌ ಆಡಳಿತ ನಡೆಸಬೇಕಾಗಿದೆ. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಮತಯಾಚಿಸಿದರು.

ಗುರುವಾರ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ನಡೆದ ಮಹಾಶಕ್ತಿ ಕೇಂದ್ರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರೋತ್ಸಾಹ ಹಾಗೂ ಬೆಂಬಲದಿಂದ ಚಂದ್ರಯಾನ, ಆದಿತ್ಯ‌ ಎಲ್ 1 ಯೋಜನೆ ಯಶಸ್ಚಿಯಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವವೇ ಅಚ್ಚರಿ ಪಡುವಂತೆ ಈ ದೇಶದ ವಿಜ್ಞಾನಿಗಳಿಗೆ ಜೊತೆಯಾಗಿ ನಿಂತು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಬೆಂಬಲ ನೀಡಿದ್ದಾರೆ. ರಸ್ತೆ, ಜಲಮಾರ್ಗ, ಮೂಲಸೌಕರ್ಯ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ದೇಶದ ಅಭಿವೃದ್ಧಿ ಗೆ ಸಹಕಾರಿ. 2014ರ ಮೊದಲು ವಾಯುಪಡೆಗೆ ಸಂಬಂಧಿಸಿದ ಜೆಟ್‌ಗಳು ಹಾಗೂ ಬಿಡಿ ಭಾಗಗಳನ್ನು ವಿದೇಶದಿಂದ ಖರೀದಿ ಮಾಡುತ್ತಿದ್ದೆವು. 2014ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಚುಕ್ಕಾಣಿ ಹಿಡಿದ ಬಳಿಕ ಡಿಆರ್‌ಡಿಒ, ಎಚ್‌ಎಎಲ್ ಗೆ ಬಲ ತುಂಬಿದ್ದಾರೆ. ಭಾರತದ ವಿಜ್ಞಾನಿಗಳು ತಯಾರಿಸಿದ ವಾಯುಪಡೆಗೆ ಸಂಬಂಧಿಸಿ ಬಿಡಿ ಭಾಗಗಳನ್ನು ವಿದೇಶಗಳು ಖರೀದಿ ಮಾಡುವ ಹಂತಕ್ಕೆ ಭಾರತ ಬೆಳದಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ, ಯಲಬುರ್ಗಾ ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜ ಗುಳಗುಳಿ, ಕುಕನೂರು ತಾಲೂಕು ಜೆ.ಡಿ.ಎಸ್ ಅಧ್ಯಕ್ಷ ಕೆಂಚಪ್ಪ ಹಳ್ಳಿ, ಕುಷ್ಟಗಿ ಬಿಜೆಪಿ ಅಧ್ಯಕ್ಷ ಮಹಾಂತೇಶ್, ಪ್ರಮುಖರಾದ ಭೂಸನೂರಮಠ, ರತನ್ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಸಿಎಚ್ ಪಾಟೀಲ್, ಅರವಿಂದಗೌಡ ಪಾಟೀಲ್, ಶಿವಶಂಕರರಾವ ದೇಸಾಯಿ, ಮಲ್ಲನಗೌಡ ಕೋನನಗೌಡ್ರ, ಕಳಕಪ್ಪ ಕಂಬಳಿ, ಬಸವರಾಜ ರಾಜೂರ, ಸುಧಾಕರ ದೇಸಾಯಿ, ಶಂಕ್ರಪ್ಪ ಸುರಪುರ, ಶರಣಪ್ಪ ರಾಂಪೂರ, ಉಮೇಶ ಮೆಣಸಗೇರ, ಅಯ್ಯನಗೌಡ ಆರ್., ಅಮರೇಶ ಹುಬ್ಬಳ್ಳಿ, ಶರಣಪ್ಪ ಹೊಸಕೇರಿ, ಮಲ್ಲಣ್ಣ ಹರ್ಲಾಪೂರ ಹಾಗೂ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!