December 23, 2024

AKSHARA KRAANTI

AKSHARA KRAANTI




ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ

ಲೋಕಸಭೆ ಚುನಾವಣೆ :
ದೇಶದ ಭವಿಷ್ಯಕ್ಕೆ ಕಾಂಗ್ರೆಸ್ ಅವಶ್ಯ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ,: ಬಿಜೆಪಿ ಪಕ್ಷದ ಸರ್ವಾಧಿಕಾರ ಧೋರಣೆ, ದುರ್ಬಲ ಆಡಳಿತ ಕೊನೆಗೊಳಿಸಿ ಪ್ರಜಾಪ್ರಭುತ್ವ ರಕ್ಷಿಸುವ ಮಹತ್ತರ ಜವಾಬ್ದಾರಿ ಮತದಾರರ ಮೇಲಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಭಾನುವಾರ ತಾಲೂಕಿನ ಹಲಗೇರಿ, ಕೋಳೂರು, ಹೀರೆಸಿಂದೋಗಿ, ಮಾದಿನೂರು, ಓಜನಹಳ್ಳಿ ಮತ್ತು ಕಲಕೇರಿ ಗ್ರಾಮದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಹಮ್ಮಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಪರ ಮತಯಾಚಿಸಿ ಅವರು ಮಾತನಾಡಿದರು.

ದೇಶದ ಭವಿಷ್ಯದ ದೃಷ್ಟಿಯಿಂದ ನಾಡಿನ ಪ್ರಜೆಗಳ ರಕ್ಷಣೆಗಾಗಿ ಅರಾಜಕತೆ ವಿರುದ್ಧ ಹೋರಾಡಲು ನಾವೆಲ್ಲರೂ ಸಿದ್ದರಾಗಬೇಕಿದೆ. ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಗೆ ಈ‌ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಬೇಕಿದೆ. ಸರ್ವಾಧಿಕಾರಿ ಆಡಳಿತವನ್ನು ಎಲ್ಲರೂ ಒಗ್ಗೂಡಿ ಕೊನೆಗಾಣಿಸಿದಾಗ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲರಿಗೂ ಮತ ಚಲಾಯಿಸುವ ಅಧಿಕಾರ ನೀಡಿದ್ದಾರೆ. ಆದರೆ ಬಿಜೆಪಿಯವರು ಮತ್ತೇ ಅಧಿಕಾರಕ್ಕೆ ಬಂದರೇ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಇಂತವರು ಮತ್ತೇ ಅಧಿಕಾರಕ್ಕೆ ಬಂದರೇ ಸಂವಿಧಾನಕ್ಕೆ ಉಳಿಗಾಲವಿಲ್ಲ. ಒಂದೊಂದು ಮತ ದೇಶದ ಭವಿಷ್ಯವನ್ನೇ ಬದಲಾಯಿಸಲಿದೆ. ಈ ನಿಟ್ಟಿನಲ್ಲಿ ಮತದಾರರು ಎಚ್ಚೇತ್ತುಕೊಂಡು ಮೇ.7 ರಂದು ಮತ ಚಲಾವಣೆ ಮಾಡಬೇಕು ಎಂದರು.

ಬಿಜೆಪಿಯವರು ನಡೆಸಿದ ಸರ್ವೇ ವರದಿಯಲ್ಲಿ ಈ ಹಿಂದೆ 400 ಸ್ಥಾನ ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿದ್ದರು. ಆದರೆ, ಇತ್ತೀಚೆಗೆ ನಡೆಸಿದ ಮತ್ತೊಂದು ಸರ್ವೇದಲ್ಲಿ 200 ಸ್ಥಾನಕ್ಕಿಂತ ಕಡಿಮೆ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವರದಿ ಅವರ ಕೈ ಸೇರಿದೆ. ಹೀಗಾಗಿ ಬಿಜೆಪಿಯವರಿಗೆ ಸೋಲುವ ಭಯ ಕಾಡತೊಡಗಿದೆ. ರಾಜ್ಯದಲ್ಲಿ 28ಸ್ಥಾನದಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ, ಲೋಕಸಭಾ ಚುನಾವಣೆ ಮಹತ್ತರವಾಗಿದ್ದು, ಬಡಜನರ, ದೀನದಲೀತರ, ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ಅನೇಕ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ಕೇಂದ್ರದಲ್ಲಿ ಮತ್ತೇ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೇ ಎಲ್ಲ ಘೋಷಣೆ ಈಡೇರಿಸುತ್ತೇವೆ ಎಂದರು. ಕೊರೊನಾ ಸೋಂಕಿನ ಭೀತಿಯಲ್ಲಿ ಬಡಜನರ ಹಣ ಲೂಟಿ ಮಾಡಿದ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತೆ. ಇವರ ಹಸಿ ಸುಳ್ಳುಗಳಿಗೆ ಯಾರು ಕಿವಿಗೊಡಬೇಡಿ. ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸಿ ಸೋಲಿಸಿದ ಬಿಜೆಪಿಯವರಿಗೆ ಈ ಬಾರಿ ತಕ್ಕಪಾಠ ಕಲಿಸಿ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಹನುಮರೆಡ್ಡಿ ಹಂಗನಕಟ್ಟಿ, ಮುಖಂಡರಾದ ವೈಜನಾಥ ದಿವಟರ್, ವೀರಣ್ಣ ಗಾಣಿಗೇರ್, ವಿರೂಪಾಕ್ಷಯ್ಯ ಗದಗಿನಮಠ, ಪ್ರಸನ್ನ ಗಡಾದ, ಶಂಕ್ರಪ್ಪ ಅಂಗಡಿ, ಕೇಶವ್ ರೆಡ್ಡಿ, ಗಾಳೆಪ್ಪ ಪೂಜಾರ್, ರಾಜಶೇಖರ ಆಡೂರು, ಅಮರೇಶ ಉಪಲಾಪುರ, ಪಾಲಾಕ್ಷಪ್ಪ ಗುಂಗಾಡಿ, ಗವಿಸಿದ್ದಪ್ಪ ಚಿನ್ನೂರು, ವೀರುಪಣ್ಣ ನವೋದಯ, ತೋಟಪ್ಪ ಕಾಮನೂರು, ರಾಮಣ್ಣ ಚೌಡ್ಕಿ, ಲತಾ ಗವಿಸಿದ್ದಪ್ಪ ಚಿನ್ನೂರು, ಜ್ಯೋತಿ ಗೊಂಡಬಾಳ, ಯಲ್ಲಪ್ಪ ಮಾದಿನೂರು ಸೇರಿದಂತೆ ಇತರರು ಇದ್ದರು.

ಸಂಸದ ಸಂಗಣ್ಣ ಕರಡಿಯವರು ಮತ್ತೇ ಗೆದ್ದು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಾರೋ ಅನ್ನೋ ಭಯದಿಂದ ಬಿಜೆಪಿಯವರೇ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ. ಸೋಲಿನ ಭೀತಿಯಿಂದ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.

– ಕೆ.ರಾಘವೇಂದ್ರ ಹಿಟ್ನಾಳ, ಶಾಸಕರು, ಕೊಪ್ಪಳ

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!