ಕುಷ್ಟಗಿ.: ದೇಶಕ್ಕೆ ಮೋದಿ ಜಿಲ್ಲೆಗೆ ಡಾ.ಬಸವರಾಜ ಆಯ್ಕೆಗೆ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಸೋಮವಾರ ಕುಷ್ಟಗಿಯಲ್ಲಿ ಬುತ್ತಿ ಬಸವೇಶ್ವರ ಸಭಾ ಭವನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ
ಬೂತ್ ವಿಜಯ ಅಭಿಯಾನ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಅವಶ್ಯಕತೆ ಇದೆ. ನರೇಂದ್ರ ಮೋದಿಯವರು ದೇಶ,ವಿದೇಶ ಮೆಚ್ಚುವಂತ ಅಭಿವೃದ್ಧಿ ಕೆಲಸ ಮಾಡಿದ್ದಾರೆ.
ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕಾದರೆ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರಿಗೆ ಹೆಚ್ಚಿನ ಮತ ನೀಡುವ ಮೂಲಕ ಆಯ್ಕೆಗೆ ಪ್ರತಿಯೊಬ್ಬರು ಶ್ರಮವಹಿಸಿಬೇಕು ಎಂದರು.
ಬಿಜೆಪಿ ಲೋಕಸಭಾ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಮಾಡುವ ಕನಸು ಕಟ್ಟಿಕೊಂಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ದೇನೆ ನಿಮ್ಮೇಲರ ಸಹಕಾರ ಬಹುಮುಖ್ಯ ಪ್ರಸಕ್ತ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು. ನರೇಂದ್ರ ಮೋದಿಯವರ ದೇಶದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅವರ ಸಾಧನೆ ನನಗೆ ಶ್ರೀರಕ್ಷೆಯಾಗಲಿದೆ ಎಂದರು.
ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕರಾದ ಬಸವರಾಜ ದಡೇಸೂಗೂರು, ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ನಾಗಪ್ಪ ಸಾಲೋಣಿ, ಸಿವಿ ಚಂದ್ರಶೇಖರ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್ ಗುಳಗಳಣ್ಣನವರ ಮುಖಂಡರಾದ ಕೆ.ಶರಣಪ್ಪ ವಕೀಲರು, ಪ್ರಭಾಕರ ಚಿಣಿ, ಚಂದ್ರಶೇಖರ್ ಪಾಟೀಲ ಹಲಗೇರಿ, ಮಹಾಂತೇಶ ಬದಾಮಿ, ಮಲ್ಲಣ್ಣ ಪಲ್ಲೇದ, ಪ್ರಭು ಶಂಕರಗೌಡ ಪಾಟೀಲ್, ಶಶಿಧರ ಕವಲಿ, ನಭಿಸಾಬ ಕುಷ್ಟಗಿ, ಪಕ್ಕಿರಪ್ಪ, ವೀರೇಶ ಮಾಹಂತಯ್ಯಮಠ, ನಾಗರಾಜ ಮೇಲಿನಮನಿ, ಪ್ರಮೀಳಾ ಶೆಟ್ಟರ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
More Stories
ಚಂದ್ರಶೇಖರ್ ತುಮ್ಮರಗುದ್ದಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ
ಬಿತ್ತನೆ ಬೀಜಗಳ ವಿತರಣೆ ಹಾಗೂ ಬೀಜೋಪಚಾರದ ಕಾರ್ಯಕ್ರಮ
ಹೆಣ್ಣನ್ನು ಅಸಮಾನಳಂತೆ ಕಾಣುವ ಸಮಯ ಈಗಿಲ್ಲ : ಜ್ಯೋತಿ ಗೊಂಡಬಾಳ