December 23, 2024

AKSHARA KRAANTI

AKSHARA KRAANTI




ಸಂಭ್ರಮದಿಂದ ಜರುಗಿದ ಬನಶಂಕರಿ ದೇವಿ ರಥೋತ್ಸವ

ಕೊಪ್ಪಳ,: ತಾಲೂಕಿನ ಗೊಂಡಬಾಳ ಗ್ರಾಮದ ಶ್ರೀ ಬನಶಂಕರಿದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ಸಂಜೆ ಸಾವಿರಾರು ಭಕ್ತರ ನಡವೆ ಸಡಗರ-ಸಂಭ್ರಮದಿಂದ ರಥೋತ್ಸವ ಜರುಗಿತು.

ರಥಕ್ಕೆ ಭಕ್ತರು ಬಾಳೆಹಣ್ಣು ಮತ್ತು ಉತ್ತತ್ತಿ ಹೂ, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ಶನಿವಾರ ಬೆಳಿಗ್ಗೆ ಶ್ರೀದೇವಿಯ ಸನ್ನಿಧಾನದಲ್ಲಿ ಹೋಮ ಹವನ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ 12 ಗಂಟೆಯಿಂದ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಹತ್ತಿರ ಅನ್ನಸಂತರ್ಪಣೆ ನಡೆಯಿತು.
ಸಂಜೆ 5.30ಕ್ಕೆ ಶತಾಯುಷಿ ಕಲ್ಲಮ್ಮ ನಿಂಗಪ್ಪ ಕರ್ಕಿಹಳ್ಳಿ ಇವರು ಶ್ರೀದೇವಿಯ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ರಾತ್ರಿ 8 ಗಂಟೆಗೆ ಶಾಲಾ ಮಕ್ಕಳಿಂದ ಶ್ರೀ ಬನಶಂಕರಿದೇವಿ ದೇವಸ್ಥಾನದ ಹತ್ತಿರ ವಿವಿಧ ನೃತ್ಯ ಕಾರ್ಯಕ್ರಮಗಳು ಜರುಗಿತು. ಗೊಂಡಬಾಳ ಹಾಗೂ ಸುತ್ತ ಮುತ್ತಲಿನ ಸದ್ಭಕ್ತರು ಪಾಲ್ಗೊಂಡಿದ್ದರು. ಫೆ. 25 ರವಿವಾರ ಸಂಜೆ ಶ್ರೀದೇವಿಯ ಕಡುಬಿನ ಕಾಳಗ (ಛಟ್ಟು) ಹಾಗೂ ಮದ್ದು ಸುಡುವುದು ರಾತ್ರಿ 10-30 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ನಾಟ್ಯ ಸಂಘ ಗೊಂಡಬಾಳ ಇವರಿಂದ “ಅಣ್ಣನ ಅರಮನೆ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!