ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ತಾಲೂಕಿನ ಬೂದುಗುಂಪ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪುರುಷ ಖೋ ಖೋ ಕೀಡ್ರಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೊಪ್ಪಳ ನಗರದಲ್ಲಿ ಇತ್ತೀಚೆಗೆ ನಡೆದ ಕಲ್ಬುರ್ಗಿ ವಿಭಾಗದ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಬೂದುಗುಂಪ ಸರ್ಕಾರಿ ಪ್ರೌಢಶಾಲೆ ಪುರುಷ ವಿಭಾಗದ ಖೋ- ಖೋ ಕೀಡ್ರಾಕೂಟದಲ್ಲಿ
ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಶಾಲೆಯಲ್ಲಿ ಅಭಿನಂದನೆ ಕಾರ್ಯಕ್ರಮದಲ್ಲಿ ಕೆ. ಮಧುಸೂದನ್ ಡೊಳ್ಳಿನ ಮಾತನಾಡಿ, ಬೂದಗುಂಪ ಇತಿಹಾಸದಲ್ಲಿ ಇದೇ ಮೊದಲು ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರು. ಈ ಮಕ್ಕಳು ಅತ್ಯುತ್ತಮವಾದ ಆಟ ಆಡಲು ಮಾರ್ಗದರ್ಶನ ಮಾಡಿದ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಹಾಗೂ ಊರಿನ ಹಳೆಯ ವಿದ್ಯಾರ್ಥಿಗಳು ಸಹಕಾರವೇ ಈ ಗೆಲುವಿಗೆ ಮೂಲ ಕಾರಣ ಹಾಗೆಯೇ ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಆಟದಲ್ಲಿ ತೊಡಗಿದ ಮಕ್ಕಳಿಗೆ ಉಡುಪುಗಳನ್ನು ನೀಡಬೇಕೆಂದು ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯರಾದ ಗುರುರಾಜ್ ಚಕ್ರಸಾಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯಮನೂರಪ್ಪ ಸಂಘಟಿ, ಪ್ರಾಥಮಿಕ ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಗೋವಿಂದ್ ರಾಜ್ ಈಳಿಗೇರ್, ಹುಲುಗಪ್ಪ ಬೋವಿ, ಯಮನೂರ್ ಸ್ವಾಮಿ ವಾಲ್ಮೀಕಿ, ಬಸವರಾಜ್ ಲಿಂಗಾಯತ, ಮಾರ್ಗದರ್ಶನ ನೀಡಿದ ಶಾಲೆಯ ಶಿಕ್ಷಕರಾದ ರಮೇಶ್ ಫಿರಂಗಿ, ನಾಗೇಶ್ ಕಂಬಳಿ, ಗ್ರಾಮದ ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.
More Stories
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ
ಅ. 24 ರಂದು ಒಳ ಮೀಸಲಾತಿ ಜಾರಿ ಮಾಡಿ : ವೈ.ಜಯರಾಜ್