ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ 1989-90ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ
ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಶಿಕ್ಷಕರು ಸಹನೆ, ತಾಳ್ಮೆಯನ್ನು ರೂಢಿಸಿಕೊಳ್ಳಬೇಕು ಅಂದಾಗ ವಿದ್ಯಾರ್ಥಿ ಉಜ್ವಲ ಭವಿಷ್ಯ ರೂಪಿಸುವಲ್ಲಿ ಸಹಕಾರವಾಗುತ್ತದೆ ಎಂದು ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತರು, ನಿವೃತ್ತ ಶಿಕ್ಷಕರಾದ ಟಿ.ವಿ.ಮಾಗಳದ ಹೇಳಿದರು.
ನಗರದ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆಯ 1989-90ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಬಳಗದಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ಒಂದೆ ಬಗೆಯ ಕಾಳಜಿಯನ್ನು ವಹಿಸಬೇಕು. ವಿದ್ಯಾರ್ಥಿಯ ಬಗ್ಗೆ ನಿರ್ಲಕ್ಷ್ಯತೆ, ಉದಾಸೀನತೆ ಸಲ್ಲದು, ಇದರಿಂದ ವಿದ್ಯಾರ್ಥಿಯ ಭವಿಷ್ಯಕ್ಕೆ ಕೊಡಲಿಪೆಟ್ಟು ಕೊಟ್ಟಂತಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ಶಿಕ್ಷಕರುವಹಿಸಿದಾಗಲೇ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯ. ಇಂದು ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯವಶ್ಯಕ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಹೆಚ್ಚಿನ ಆಸಕ್ತಿವಹಿಸಬೇಕು ಎಂದರು.ಈ ಗುರುವಂದನಾ ಕಾರ್ಯಕ್ರಮದಲ್ಲಿ ದಿವಂಗತ ಶಿಕ್ಷಕರ ಕುಟುಂಬಗಳನ್ನು ಕರೆದು ಸನ್ಮಾನಿಸುತ್ತಿರುವುದು ತೀವ್ರ ಹರ್ಷವನ್ನುಂಟು ಮಾಡಿದೆ. ಈ ನಿಮ್ಮ ಕಾರ್ಯದಿಂದ ಶಿಕ್ಷಕರ ಆತ್ಮಕ್ಕೆ ಶಾಂತಿ ನೀಡಿದಂತಾಗುತ್ತಿದೆ. ನೀವು ನೀಡಿದ ಶಿಕ್ಷಕರಿಗೆ ಗೌರವ ಇತರರ ವಿದ್ಯಾರ್ಥಿಗಳಿಗೂ ಮಾದರಿಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಅಮರೇಶಪ್ಪ ಕರಡಿ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಇದ್ದ ನಿವೃತ್ತ ಶಿಕ್ಷಕ ಬಳಗದ ಗವಿಸಿದ್ದಪ್ಪ ಕೊಪ್ಪಳ, ಎಂ.ಎಂ. ಕಂಬಾಳಿಮಠ, ಎಸ್.ಸಿ.ಹಿರೇಮಠ, ವಿ.ಕೆ.ಜಾಗಟಗೇರಿ, ಪಿ.ಡಿ.ಬಡಿಗೇರ, ಗವಿಸಿದ್ದಪ್ಪ ಚಲುವಾದಿ, ಬಿ.ವಿ.ರಾಮರೆಡ್ಡಿ ಮತ್ತಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಅಗಲಿದ ಶಿಕ್ಷಕರಿಗೆ ಮೌನಾಚಾರಣೆ ಮಾಡಿದರು. ವೇದಿಕೆ ಮೇಲಿದ್ದ ಎಲ್ಲಾ ಶಿಕ್ಷಕರನ್ನು ಗೌರವಿಸಿ ಸತ್ಕರಿಸಲಾಯಿತು.
ಪ್ರಾರಂಭದಲ್ಲಿ ಹೇಮಂತಕುಮಾರ ದೊಡ್ಡಮನಿ ಪ್ರಾರ್ಥಿಸಿದರೆ, ಗಂಗಾಧರ ಕೇಸರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸತ್ಯನಾರಾಯಣ ಕುಲಕರ್ಣಿ ನಿರ್ವಹಿಸದರೆ ಕೊನೆಯಲ್ಲಿ ಲಿಂಗರಾಜ ಗೆಜ್ಜಿ ವಂದಿಸಿದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ