December 23, 2024

AKSHARA KRAANTI

AKSHARA KRAANTI




ಅಕ್ಕನ ಬಳಗದಿಂದ ಸಂಭ್ರಮದ ನವರಾತ್ರಿ ಉತ್ಸವ

ಅಕ್ಷರಕ್ರಾಂತಿ ನ್ಯೂಸ್
ಗದಗ,: ಹಿಂದೂ ಸನಾತನ ಧರ್ಮದಲ್ಲಿ ಪ್ರಕೃತಿ ಪೂಜೆ ಮಾಡುವ ವಾಡಿಕೆ ಇದೆ. ಶಮೀ ವೃಕ್ಷವನ್ನು ನವರಾತ್ರಿಯಲ್ಲಿ ಪೂಜಿಸುತ್ತೇವೆ ಬನ್ನಿ ಗಿಡದಲ್ಲಿ ಶ್ರೀ ದುರ್ಗಾದೇವಿ ವಾಸವಾಗಿದ್ದಾಳೆ ಅನ್ನುವ ನಂಬಿಕೆ ನಮ್ಮದು. ದುಷ್ಟ ಶಕ್ತಿಗಳನ್ನು ಸಂಹಾರ ಮಾಡುವುದೇ ನವರಾತ್ರಿ ಪೂಜೆಯ ಸಂಕೇತ. ರಾಕ್ಷಸರ ಸಂಹಾರ ಮಾಡಿ ಸಾಧಿಸುವ ವಿಜಯವೇ ವಿಜಯದಶಮಿ ಹಬ್ಬಗಳು ತಮ್ಮದೇ ಆದ ಮಹತ್ವವನ್ನು ಪಡೆದುಕೊಂಡಿರುತ್ತವೆ. ಅವುಗಳನ್ನು ಕೇವಲ ಪೌರಾಣಿಕ ಅಥವಾ ಸಂಪ್ರದಾಯಿಕ ಹಿನ್ನಲೆಯಿಂದ ನೋಡದೆ ವಾಸ್ತವಿಕ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ಅವುಗಳ ಮಹತ್ವದ ಅರಿವು ನಮಗಾಗುತ್ತದೆ ಎಂದು ಅಕ್ಕನ ಬಳಗದಲ್ಲಿ ವಿಜಯ ದಶಮಿಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಶ್ರೀಮತಿ ರುಕ್ಮಿಣಿಬಾಯಿ ದ್ವಾರಪಾಲಕ ಅವರು ದೇವಿಯ ಬಗ್ಗೆ ಹೇಳುತ್ತ ತಮ್ಮ ಮಾತುಗಳನ್ನು ಹಂಚಿಕೊಂಡು ದೇವಿಯ ಬಗ್ಗೆ ಹಾಗೂ ನವರಾತ್ರಿ ಆಚರಣೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ರುಕ್ಷ್ಮೀಣಿ ಬಾಯಿ ದ್ವಾರಪಾಲಕ ಅವರು ಆಧ್ಯಾತ್ಮ ಚಿಂತಕರು ಹಾಗೂ ದೇವಿಭಕ್ತರು.
ಅಧ್ಯಕ್ಷರಾದ ಶ್ರೀಮತಿ ಲಲಿತಾ ವಿ. ಬಾಳಿಹಳ್ಳಿಮಠ ಸರ್ವರನ್ನೂ ಸ್ವಾಗತಿಸಿದರು. ಪ್ರಸಾದದ ಭಕ್ತಿ ಸೇವೆಯನ್ನು ಶ್ರೀಮತಿ ಶಾಂತಾ ವಿ. ಸಂಕನೂರ ವಹಿಸಿಕೊಂಡಿದ್ದರು. ದೀಪಾ ಪಟ್ಟಣಶೆಟ್ಟಿ ನಿರೂಪಿಸಿದರು. ಲಲಿತಾ ಇಂಗಳಳ್ಳಿ ಪ್ರಾರ್ಥಿಸಿದರು. ರೇಣುಕಾ ಅಮಾತ್ಯ ವಂದಿಸಿದರು. ಲತಾ ಮುತ್ತಿನಪೆಂಡಿಮಠ ಹಾಗೂ ಮಂಗಲಾ ನಾಲವಾತ್ವಡಮಠ ಸದಸ್ಯನಿಯರಿಗಾಗಿ ಆಟಗಳನ್ನು ಆಡಿಸಿದರು.
ಜಯಶ್ರೀ ಬಾಳಿಹಳ್ಳಿಮಠ, ಬೀನಾ ಮಾನ್ವಿ, ಆರತಿ ಜೀರಂಕಳ ಬಹುಮಾನ ಪಡೆದರು. ಹಿರಿಯ ಟ್ರಸ್ಟಿಗಳಾದ ಶ್ರೀಮತಿ ಶಿವಲೀಲಾ ಕುರಡಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖಜಾಂಚಿಗಳಾದ ಶ್ರೀಮತಿ ಜಯಲಕ್ಷ್ಮೀ ಬಳ್ಳಾರಿ ಅವರು ಕಾರ್ಯಕ್ರಮ ಸಂಯೋಜಿಸಿದರು ಉಮಾ ರಾಮನಕೊಪ್ಪ ಪರಿಚಯಿಸಿದರು.
ನಾಗರತ್ನ ಹುಬಳಿಮಠ, ಮಂಜುಳಾ ಹುಬಳ್ಳಿಮಠ, ಗಿರಿಜಾ ನಾಲವಾತ್ವಾಡಮಠ, ಮಂಗಲಾ ಗೊಡಚಿ, ಸುಜಾತಾ ಮಾನ್ವಿ, ರೇಖಾ ಉಮೇಶ ಶಗ್ಲಿಮಠ, ಶೈಲಾ ಭೂಸನೂರಮಠ, ನಿರ್ಮಲಾ ಹುಬಳಿಮಠ, ಕಲಾವತಿ ಪಟ್ಟಣಶೆಟ್ಟಿ, ಪುಷ್ಪಾ ಬಳ್ಳಾರಿ, ನೀತಾ ದುಂದೂರ, ಪುಷ್ಪಾ ಹಿರೇಮಠ, ಉಮಾ ಲಕ್ಷ್ಮೇಶ್ವರಮಠ, ಬೀನಾ ಮಾನ್ವಿ, ಪಾರ್ವತಿ ಮಾಳೆಕೊಪ್ಪಮಠ, ದಾನೇಶ್ವರಿ, ಸುಗಲಾ, ಸುವರ್ಣ ಹೊಸಂಗಡಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯನಿಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಅಕ್ಕನ ಬಳಗಕ್ಕೆ ಹೊಸದಾಗಿ ಆರತಿ ಜೀರಂಕಳೆ, ಲಕ್ಷ್ಮೀ ಕುರುಗೋಡ, ವಾಣಿ ಮುನವಳ್ಳಿ ಇವರು ಸದಸ್ಯತ್ವವನ್ನು ಪಡೆದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!