December 23, 2024

AKSHARA KRAANTI

AKSHARA KRAANTI




ಮನು ಕುಲಕ್ಕೆ ಶ್ರೀರೇಣುಕಾಚಾರ್ಯರ ಕೊಡುಗೆ ಅಪಾರ : ಶ್ರೀಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು

ಕೊಪ್ಪಳ,: ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವಗಳು ಇಂದಿಗೂ ಪ್ರಚಲಿತವಾಗಿವೆ. ಶ್ರೀಸಿದ್ದಾಂತ ಶಿಖಾಮಣಿ ಗ್ರಂಥದಲ್ಲಿ ಸಮಾನತೆಯನ್ನು ಬೋಧಿಸಿದ ರೇಣುಕಾಚಾರ್ಯರರು ಮಾನವ ಕುಲಕ್ಕೆ ಮಹೋನ್ನತ ಕೊಡುಗೆ ನೀಡಿದ್ದಾರೆ ಎಂದು ಹರಗಿನದೋಣಿ ಪಂಚ ವಣ್ಣಗಿ ಸಂಸ್ಥಾನ ಹಿರೇಮಠದ ಶ್ರೀ108 ಷ.ಬ್ರ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ನಗರದ ಶ್ರೀವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ, ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವ ಕುಲಕ್ಕೆ ಧರ್ಮ ಎನ್ನುವುದು ಮುಖ್ಯವಾದದು. ಎಲ್ಲರೂ ಧರ್ಮದಿಂದ ನಡೆದುಕೊಂಡಾಗಲೇ ಮಾನವರಾಗಿ ಜನಿಸಿದ್ದಕ್ಕೆ ಸಾರ್ಥಕವಾಗುತ್ತದೆ. ಸರ್ವರಿಗೂ ಸಮಪಾಲು ಸಮಬಾಳು ಎಂಬ ಪರಿಕಲ್ಪನೆಗಳಿಗೆ ಶ್ರೀರೇಣುಕಾಚಾರ್ಯರ ಬೋಧನೆಗಳು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯೋಣ, ಎಲ್ಲರನ್ನೂ ಸಮಾನರಾಗಿ ಕಾಣೋಣ. ಶ್ರೀರೇಣುಕಾಚಾರ್ಯ ಅವರ ಬೊಧನೆಯ ಸಾರವನ್ನು ಶ್ರೀಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿ ಕೃತಿಯಲ್ಲಿ ಸಂಪಾದಿಸಿದ್ದಾರೆ. ಕಾಯಕವೇ ಕೈಲಾಸ ಎಂಬ ತತ್ವ ಈ ಕೃತಿಯಲ್ಲಿ ಅಡಕವಾಗಿದೆ. ಜಾತಿ, ಮತ, ಬೇದ ಭಾವಗಳಿಂದ ಮುಕ್ತವಾಗಿ ಮಾನವರೆಲ್ಲಾ ಒಂದೇ ಎನ್ನುವುದನ್ನು
ಶ್ರೀರೇಣುಕಾಚಾರ್ಯರು ತೋರಿಸಿಕೊಟ್ಟರು ಎಂದರು.

ಜಯಂತಿಯಲ್ಲಿ ಶ್ರೀನಾಗಯ್ಯಸ್ವಾಮಿಗಳು ಶಾಖಾಮಠ, ಕಂಪಸಾಗರ ಸಾನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ
ಮಹಾಸಭಾದ ಅಧ್ಯಕ್ಷ ಶರಣಪ್ಪ ಹ್ಯಾಟಿ, ಜಂಗಮ ಸಮಾಜದ ಅಧ್ಯಕ್ಷ ಸಿದ್ದಯ್ಯ ಹಿರೇಮಠ, ಸಮಾಜದ ಮುಖಂಡರಾದ ಹಂಪಯ್ಯ ಹಿರೇಮಠ, ವೀರಪಾಕ್ಷಯ್ಯ ಗದಗಿನಮಠ, ವಿರೇಶ ಮಹಾಂತನಯ್ಯಮಠ, ಕೊಟ್ರಬಸಯ್ಯ, ಗಿರೀಶ ಹಿರೇಮಠ, ನಾಗಭೂಷಣ ಸಾಲಿಮಠ, ಬಸಯ್ಯ ಹಿರೇಮಠ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಪಿಬಿ ಹಿರೇಮಠ, ಶಿವಕುಮಾರ್ ಹಿರೇಮಠ, ಸಿದ್ದು ಹಿರೇಮಠ, ಭಗತ್, ಶರಣಯ್ಯ ಹಿರೇಮಠ, ಕಲ್ಯಯ್ಯ ಕಲ್ಯಾಣಗೌಡ್ರು, ಮಂಜು ಗದಗಿನಮಠ, ಶೋಬಾ ಉಂಕಲಿಮಠ, ಶಾಂತಕ್ಕ, ಸವಿತಾ, ಶಾಂತ ಹಿರೇಮಠ, ಕವಿತಾ ಸೇರಿದಂತೆ ಅನೇಕ ಜಂಗಮ ಸಮಾಜ ಮುಖಂಡರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮೊದಲಿಗೆ ಕು. ಪುಟ್ಟರಾಜ ಹಿರೇಮಠ ಪ್ರಾರ್ಥಿಸಿ, ಜಗದೀಶ್ ಹಿರೇಮಠ
ಸ್ವಾಗತಿಸಿ, ನಿರೂಪಿಸಿದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!