December 23, 2024

AKSHARA KRAANTI

AKSHARA KRAANTI




ನವರಾತ್ರಿ ಉತ್ಸವ ಉಡಿ ತುಂಬುವ ಕಾರ್ಯಕ್ರಮ

ಅಕ್ಷರಕ್ರಾಂತಿ ನ್ಯೂಸ್
ಗದಗ,: ಬೆಟಗೇರಿ ಎಸ್.ಎಸ್.ಕೆ. ಜಗದಂಬಾ ದೇವಸ್ಥಾನದಲ್ಲಿ ಎಸ್.ಎಸ್.ಕೆ. ಸಮಾಜ ಪಂಚ ಕಮೀಟಿ ಮತ್ತು ತರುಣ ಸಂಘ, ಮಹಿಳಾ ಮಂಡಳ ಇವರ ಸಹಯೋಗದಲ್ಲಿ ದಸರಾ ಹಬ್ಬದ ನಿಮಿತ್ತ ಗುರುವಾರ ಬೆಳಿಗ್ಗೆ ಶ್ರೀ ಜಗದಂಬಾ ದೇವಿಗೆ ಕಾಕಡರಾತಿ, ಭಜನೆಯೊಂದಿಗೆ ಈ ಪೂಜಾ ಕಾರ್ಯಕ್ರಮದಲ್ಲಿ ಸುಮಂಗಲೆಯರಿಗೆ ಬಾಳೆಹಣ್ಣು, ಎಲೆ, ಅಡಿಕೆ, ಸೇಬು ಹಣ್ಣುಗಳೊಂದಿಗೆ ಉಡಿ ತುಂಬಿ ಮತ್ತು ರಾಜ್ಯದಲ್ಲಿ ಪ್ರಸಿದ್ಧ ಪಡೆದ ಲೋಬಾಸಾ ಚಹಾಪುಡಿಯನ್ನು ಸಹ ಉಡಿಯೊಂದಿಗೆ ನೀಡಲಾಯಿತು.
ಉಡಿ ತುಂಬುವ ಕಾರ್ಯಕ್ರಮ ಲೋಬೋಸಾ ಕುಟುಂಬದವರಿಂದ ಮಂಜುನಾಥ ಎನ್. ಕಬಾಡಿ, ಮಾಯಾ ಕಬಾಡಿ, ಲೋಬೋಸಾ ಎನ್. ಕಬಾಡಿ, ಧನಲಕ್ಷ್ಮಿ ಲೋಬೋಸಾ ಕಬಾಡಿ, ನಾಗರಾಜ ಎನ್. ಕಬಾಡಿ, ಸಂಗೀತಾ ನಾಗರಾಜ ಕಬಾಡಿ ದಂಪತಿಗಳಿಂದ ಎಸ್.ಎಸ್.ಕೆ. ಸಮಾಜದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ದಿ. ನಾರಾಯಣಸಾ ಲೋಬೋಸಾ ಕಬಾಡಿ ಹಾಗೂ ದಿ. ಲಕ್ಷ್ಮೀಬಾಯಿ ನಾರಾಯಣಸಾ ಕಬಾಡಿ ಇವರು ಕಳೆದ 30 ವರ್ಷಗಳಿಂದ ಜಗದಂಬಾ ದೇವಸ್ಥಾನದಲ್ಲಿ ಧಾರ್ಮಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ ಅವರು ನಡೆದುಕೊಂಡು ಬರುತ್ತಿರುವ ಧಾರ್ಮಿಕ ಪ್ರವೃತ್ತಿಯನ್ನು ಅವರು ಕುಟುಂಬ ವರ್ಗದವರು ಮುಂದುವರೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ. ಸಮಾಜ ಸೇರಿದಂತೆ ಇತರೆ ಸಮಾಜದ ಸುಮಂಗಲೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಗೊಳಿಸಿದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!