ಅ.7 ರಂದು ಶ್ರೀ ಗಾಯಿತ್ರಿ ಪತ್ತಿನ ಸಹಕಾರ ಸಂಘದ ನೂತನ ಶಾಖೆಗಳ ಪ್ರಾರಂಭೋತ್ಸವ
ಕೊಪ್ಪಳ : ಶ್ರೀ ಗಾಯಿತ್ರಿ ಪತ್ತಿನ ಸಹಕಾರ ಸಂಘದ ಭಾಗ್ಯನಗರ,ಕೊಪ್ಪಳದ ಶಾಖೆಗಳ ಪ್ರಾರಂಭೋತ್ಸವ ಅಕ್ಟೋಬರ್ 7 ರಂದು ಜರುಗುತ್ತದೆ ಎಂದು ಶ್ರೀ ಗಾಯಿತ್ರಿ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ರವೀಂದ್ರ .ಪಿ. ಕಲ್ಬುರ್ಗಿ ತಿಳಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಭಾಗ್ಯನಗರದಲ್ಲಿ 29ನೇ ಹಾಗೂ ಕೊಪ್ಪಳದಲ್ಲಿ 30ನೇ ಶಾಖೆ ಪ್ರಾರಂಭವಾಗುತ್ತಿದ್ದು ಇದು 1996ರಲ್ಲಿ ಪ್ರಾರಂಭವಾಗಿದ್ದು, ಜನತೆಯ ವಿಶ್ವಾಸದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು 200 ಕೋಟಿ ರುಾ.ಎಫ್ ಡಿ ಹೊಂದಿದ್ದು, ಎಲ್ಲಾ ಶಾಖೆಗಳು ಗಣಕಿಕೃತ ಹೆುಾಂದಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲಾ ಕಡೆ ಉತ್ತಮ, ವಿಶ್ವಾಸದಿಂದ ಗ್ರಾಹಕರನ್ನು ಸೆಳೆಯುತ್ತಿದೆ ಎಂದ ಅವರು ಕೊಪ್ಪಳ ಶಾಖೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕವಲಗೇರಿ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ನೆರವೇರಿಸುವರು, ಮಾಜಿ ಸಂಸದ ಸಂಗಣ್ಣ ಕರಡಿ ಜ್ಯೋತಿ ಬೆಳಗಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಪಿ ಕಲ್ಬುರ್ಗಿ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶೇಕರ ಗೌಡ ಮಾಲಿ ಪಾಟೀಲ್ ,ಕೆಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಜೇಂದ್ರ ಕುಮಾರ್ ಶೆಟ್ಟರ್ , ಬಸವರಾಜ್ ಗೌರ, ನಗರಸಭೆ ಅಧ್ಯಕ್ಷ ಪಟೇಲ್, ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ತುಕಾರಾಮಪ್ಪ ಗಡಾದ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು, ಸರ್ವರಿಗೂ ಆದರದ ಸ್ವಾಗತ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿರುಪಾಕ್ಷಿ ಗೂಳಿ, ಅಶೋಕ್ ಹೊನ್ನಳ್ಳಿ ,ಲುಮ್ಮಣ್ಣ ಕಣಗಿ, ಹನುಮಂತಪ್ಪ ವಡ್ಡೋಡಗಿ ಉಪಸ್ಥಿತರಿದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ