ಚಂದ್ರಶೇಖರ್ ತುಮ್ಮರಗುದ್ದಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ
ಅಕ್ಷರಕ್ರಾಂತಿ ನ್ಯೂಸ್
ಕುಷ್ಟಗಿ ,: ಪಟ್ಟಣದ ಚಂದ್ರಶೇಖರ್ ತುಮ್ಮರಗುದ್ದಿ ರವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘದ(ರಿ) ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶನಿವಾರ ದಂದು ಬೆಂಗಳೂರಿನ ಜ್ಞಾನಭಾರತಿ ಆವರಣದ ಪ್ರೊ ಕೆ. ವೆಂಕಟಗಿರಿಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ (ರಿ)ವಿಭೂಧನ್ -2024 ನಾಲೆಡ್ಜ್ ಕ್ರಿಯೇಟಿವ್ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿಯನ್ನು ಎಂ.ಇ.ಎಸ್ ಗ್ರೂಪ್ ಶೈಕ್ಷಣಿಕ ನಿರ್ದೇಶಕರಾದ ಎಚ್.ಎಸ್ ಗಣೇಶ್ ಭಟ್, ನಾಲೆಡ್ಡ ಪಬ್ಲಿಕೇಶನ್ ಸಂಸ್ಥಾಪಕರಾದ ಬಿ.ಎನ್. ಸುನಿಲ್, ಸಮಾಜ ಸೇವಕರಾದ ಮಹೇಂದ್ರ ಮನೋತ, ನ್ಯಾಕ್ ಸಲಹೆಗಾರರಾದ ಡಾ. ಸುಜಾತ ಶಾನುಭೋಗ, ಡೈಮಂಡ್ ಕಾಲೇಜು ಸಂಸ್ಥಾಪಕರಾದ ಅನಿಲಕುಮಾರ್ ಜೋಶಿ, ಖಾಸಗಿ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಸುರೇಶ್ ಎಸ್ ಗೊಲ್ಲ, ರಾಜ್ಯ ಉಪಾಧ್ಯಕ್ಷರಾದ ಪ್ರಮೀಳಾ ಎನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿಧಿ ಕೋಡಿಹಳ್ಳಿಯವರು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
More Stories
ಬಿತ್ತನೆ ಬೀಜಗಳ ವಿತರಣೆ ಹಾಗೂ ಬೀಜೋಪಚಾರದ ಕಾರ್ಯಕ್ರಮ
ಹೆಣ್ಣನ್ನು ಅಸಮಾನಳಂತೆ ಕಾಣುವ ಸಮಯ ಈಗಿಲ್ಲ : ಜ್ಯೋತಿ ಗೊಂಡಬಾಳ
ಹನುಮಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ಸ್ವೀಪ್ ಕಾರ್ಯಕ್ರಮ