ಸೌಹಾರ್ದ ಸಹಕಾರಿ ಕಾರ್ಯಾಗಾರ
ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಅಂತರ್ಜಾಲದಲ್ಲಿ ಅತಿ ಹೆಚ್ಚು ಮೋಸ ವಂಚನೆ ಒಳಗಾಗುತ್ತಿರುವವರು ಅಕ್ಷರಸ್ತರೇ ಹೊರತು ಅನಕ್ಷರಸ್ತರಲ್ಲ ಹೀಗಾಗಿ ಸೈಬರ್ ಕ್ರೈಮದಿಂದ ತಪ್ಪಿಸಿಕೊಳ್ಳಬೇಕಾದರೆ ಕನ್ನಡದಲ್ಲಿ ಮಾತನಾಡಿ ಎಂದು ಡಿವೈಎಸ್ ಪಿ ಯಶವಂತ ಕುಮಾರ್ ಹೇಳಿದರು.
ಮಂಗಳವಾರ ನಗರದ ಗಂಗಾ ಯಮುನಾ ಸೌಹಾರ್ದ ಸಹಕಾರಿ ಸಭಾಂಗಣದಲ್ಲಿ ನಡೆದ ಸಂಯುಕ್ತ ಸಹಕಾರಿಯ ಕಲಬುರಗಿ ಪ್ರಾಂತೀಯ ಕಛೇರಿಯ ವತಿಯಿಂದ ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರಿಗೆ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ ಕೊಪ್ಪಳದಲ್ಲಿ 1500 ಸೈಬರ್ ಕ್ರೈಮ್ ಗಳು ನೋಂದಣಿಯಾಗಿವೆ. ಮೊಬೈಲ್ ಬ್ಯಾಂಕಿಂಗ್, ಲೋನ್ ಆಫರ್, ಟೂರ್ ಪ್ಯಾಕೆಜ್ ಆಪರ್, ಷೇರ್ ಮಾರ್ಕೆಟಿಂಗ್, ನಕಲಿ ಅಪ್ಲಿಕೇಶನ್, ನಕಲಿ ಆಪ್, ಇನ್ನಿತರ ಸೋಶಿಯಲ್ ಮೀಡಿಯಾಗಳನ್ನ ಸರಿಯಾದ ಮಾಹಿತಿ ಇಲ್ಲದೆ ಬಳಕೆ ಮಾಡಿದರೇ ವಂಚನೆಗೆ ಒಳಗೆ ಆಗುತ್ತವೆ. ಹೀಗಾಗಿ ಅತ್ಯಂತ ಜಾಗರುಕತೆಯಿಂದ ಇರಬೇಕು. ವಂಚನೆಗೆ ಒಳಗದವರು ಸೈಬರ್ ಕ್ರೈಮ್ ಸಹಾಯವಾಣಿ 1930ಗೆ ಕರೆ ಮಾಡಿ ನಿಮ್ಮ ದೂರನ್ನು ನೋಂದಣಿ ಮಾಡಿಕೊಂಡರೇ ಸಾಧ್ಯವಾದಷ್ಟು ಪರಿಹಾರ ಸಿಗಬಹುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ರಾಜ್ಯ ನಿರ್ದೇಶಕ ಶ್ರೀಧರ್ ಕೆಸರಟ್ಟಿ ವಹಿಸಿ ಸೌಹಾರ್ದ ಸಹಕಾರಿ ಚಳುವಳಿ ಕುರಿತು ಮಾತನಾಡಿದರು. ನಂತರ ಡಿಜಿಟಲ್ ಬ್ಯಾಂಕಿಂಗ್ ಕುರಿತು ಉಪನ್ಯಾಸಕ ಡಾ.ಸಾತ್ವಿಕ್ ಅವರು ಮಾಹಿತಿ ನೀಡಿದರು, ಸಾಲ ವಸೂಲಾತಿ ಆಮಲ್ಜಾರಿ ಕುರಿತು ದಾವ ಪಂಚಾಯತ ಅಧಿಕಾರಿಗಳಾದ ಚಂದ್ರಶೇಖರಯ್ಯ ಅವರು ಉಪನ್ಯಾಸ ನೀಡಿದರು, ಪ್ರತಿ ವರ್ಷ ವಾರ್ಷಿಕ ಸಾಮಾನ್ಯ ಸಭೆಯ ನಂತರ ಕೈಗೊಳ್ಳಬಹುದಾದ ಕಾರ್ಯಗಳ ಕುರಿತು ಪ್ರಾಂತಿಯ ಅಧಿಕಾರಿ ಸೂರ್ಯಕಾಂತ್ ರಾಕ್ಲೆ ಅವರು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಗಂಗಾ ಯಮುನಾ ಸೌಹಾರ್ದ ಸಹಕಾರಿ ಅಧ್ಯಕ್ಷ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಕಡ್ಡಿಪುಡಿ, ಉಪಾಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ನಿರ್ದೇಶಕರುಗಳಾದ ಶಂಕರಗೌಡ ಹಿರೇಗೌಡ್ರು, ಮುದ್ದಪ್ಪ ಬೇವಿನಹಳ್ಳಿ, ನಾಗರಾಜ್ ನಾಗನೂರ್, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಓಂಕಾರ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಿನ ಸೌಹಾರ್ದ ಸಹಕಾರಿಗಳ ನೂರಾರು ಮುಖ್ಯ ಕಾರ್ಯನಿರ್ವಾಹಕರು ಈ ತರಬೇತಿಯಲ್ಲಿ ಭಾಗಿಯಾಗಿದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ