December 23, 2024

AKSHARA KRAANTI

AKSHARA KRAANTI




ಪ್ರತಿಯೊಬ್ಬರು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ : ಡಾ. ಲಿಂಗರಾಜು .ಟಿ.

ಪ್ರತಿಯೊಬ್ಬರು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ : ಡಾ. ಲಿಂಗರಾಜು .ಟಿ.

ಅಕ್ಷರಕ್ರಾಂತಿ ನ್ಯೂಸ್

ಕೊಪ್ಪಳ,: ಹೃದಯವು ಮಾನವ ದೇಹದ ಪ್ರಮುಖ ಅಂಗಾಗಳಲ್ಲಿ ಒಂದಾಗಿದೆ ಅದರ ಅಸಮರ್ಪಕ ಕಾರ್ಯವು ಮಾರಣಾಂತಿಕತೆಗೆ ಕಾರಣವಾಗಬಹುದು ಆದಕಾರಣ ಪ್ರತಿಯೊಬ್ಬರು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಅವಶ್ಯಕವಾಗಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು. ಟಿ. ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಎನ್.ಸಿ.ಡಿ. ಕೋಶ ಕೊಪ್ಪಳ, ಜಿಲ್ಲಾ ಬೋಧಕ ಆಸ್ಪತ್ರೆ ಹಾಗೂ ಜಿಲ್ಲಾ ಎನ್.ಸಿ.ಡಿ. ಕ್ಲಿನಿಕ್ ಕೊಪ್ಪಳ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಸೋಮವಾರ ದಂದು ಹಮ್ಮಿಕೊಂಡಿದ್ದ “ವಿಶ್ವ ಹೃದಯ ದಿನ” ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹೃದಯ ರಕ್ತನಾಳದ ಆರೋಗ್ಯ ಮತ್ತು ಕೆಲವು ಜೀವನಶೈಲಿಯ ಅಭ್ಯಾಸಗಳ ಬಗ್ಗೆ ಅರಿವಿನ ಕೋರತೆಯಿಂದಾಗಿ ಹೃದಯ ರಕ್ತನಾಳದ ಕಾಯಿಲೆಗಳು ಮರಣಕ್ಕೆ ಪ್ರಮುಖ ಕಾರಣಗಳಾಗಿರುತ್ತವೆ. ಅರಂಭಿಕ ಚಿನ್ಹೆಗಳು ಮತ್ತು ರೋಗ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ತೊಡಕುಗಳನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಜಡ ಜೀವನ ಶೈಲಿಯನ್ನು ತಪ್ಪಿಸುವುದು, ಸಾಕ್ರೀಯ ಜೀವನ ಶೈಲಿಯ ತೊಡಗಿಸಿಕೊಳ್ಳುವುದು ಎಂದರು.

ಮುಖ್ಯ ಅಥಿತಿಗಳಾಗಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ. ನಂದಕುಮಾರ ಇವರು “ವಿಶ್ವ ಹೃದಯ” ದಿನಾಚರಣೆಯ ಹಾಗೂ ಚಟುವಟಿಕೆಗೆ ಹೃದಯವನ್ನು ಬಳಸಿ ಎಂಬ ಘೋಷವಾಕ್ಯಕ್ಕೆ ಪೂರಕವಾಗಿರುವ ಆಹಾರ ವಿಹಾರ ಮತ್ತು ದೈನಂದಿಕ ಜೀವನ ಶೈಲಿ ಕುರಿತು ಮಾತನಾಡಿದರು. ನಟ ಪುನೀತ್ ರಾಜಕುಮಾರ ಹೃದಯ ಜ್ಯೋತಿ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದು, ಅದರ ಸದುಪಯೋಗ ಕುರಿತು ಮಾಹಿತಿ ನೀಡಿದರು. ಹೃದಯ ಕಾಯಿಲೆಯ ಗಂಡಾಂತರ ಅಂಶಗಳು, ಅಹಿತಕರ ಆಹಾರ ಸೇವನೆ, ಅಧಿಕ ತೂಕ, ದೈಹಿಕ ಮತ್ತು ಕ್ರೀಡಾಚಟುವಟಿಕೆಗಳ ನೂನತೆ ಕುರಿತು ತಿಳಿಸಿದರು. 3೦ ವರ್ಷ ಹಾಗೂ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಲಮಾಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಡಾ. ಪ್ರದೀಪ್ ಕುಮಾರ್, ಜಿಲ್ಲಾ ಕುಷ್ಠ ನಿರ್ಮೂಲನ ಅಧಿಕಾರಿಗಳು ಡಾ. ಪ್ರಕಾಶ, ಡಾ. ಅಶೋಕ ಕುಮಾರ್ ಸಂಚಾಲಕರು, ಡಾ. ಹುಲಿಗೆಮ್ಮ ಬಿ, ಕನ್ನಡ ಸಹ ಪ್ರಾಧ್ಯಾಪಕರು, ಡಾ. ನರಸಿಂಹ ಸಹಾಯಕ ಪ್ರಾದ್ಯಾಪಕರು, ಲಕ್ಷ್ಮಣ ಸಜ್ಜನರ್ ಮೇಲ್ವಿಚಾರಕರು, ಎನ್.ಸಿ.ಡಿ. ಕ್ಲಿನಿಕ್ ಸಿಬ್ಬಂದಿಗಳು, ಜಿಲ್ಲಾ ಎನ್.ಟಿ.ಸಿ.ಪಿ ಕಾರ್ಯಕ್ರಮದ ಸಿಬ್ಬಂದಿಗಳು ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕದ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವಿಗೊಳಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ನಿರೂಪಿಸಿ, ಡಾ. ಜಯಶ್ರೀ .ಎಮ್.ಹೆಚ್. ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!