ಬಣ್ಣದ ಜೊತೆಗೆ ಗಿಡಗಳನ್ನು ಹಚ್ಚುವಂತೆ : ವಿಠ್ಠಲ್ ಚೌಗಲೆ ಸಲಹೆ
ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಹಚ್ಚುವ ಕಾರ್ಯವನ್ನು ಕಲರವ ಶಿಕ್ಷಕರ ಸೇವಾ ಬಳಗವು ಪ್ರತಿ ತಿಂಗಳು ಮಾಡುತ್ತಿದ್ದು, ಈ ಸೇವಾ ಕಾರ್ಯ ಶ್ಲಾಘನೀಯ ಎಂದು ತಹಶಿಲ್ದಾರರಾದ ವಿಠ್ಠಲ್ ಚೌಗಲೆ ಹೇಳಿದರು.
ತಾಲೂಕಿನ ದದೇಗಲ್ಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲರವ ಶಿಕ್ಷಕರ ಸೇವಾ ಬಳಗವು ಹಮ್ಮಿಕೊಂಡ
ಬಣ್ಣ ಹಚ್ಚುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಸರಕಾರಿ ಸೇವೆಯಲ್ಲಿ ಕೆಲಸ ಮಾಡುವ ನೌಕರರು ಒಂದಲ್ಲ ಒಂದು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಇಂತಹ ಒತ್ತಡಗಳ ಮಧ್ಯಯು ಕೂಡಾ ಕಲರವ ಶಿಕ್ಷಕರ ಸೇವಾ ಬಳಗವು ತಮ್ಮ ಸ್ವಂತ ಹಣದ ಮೂಲಕ ಸರ್ಕಾರಿ ಶಾಲೆಗಳ ಅಂದ-ಚೆಂದ ಹೆಚ್ಚು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಅಲ್ಲದೇ ಶಾಲೆಗೆ ಬಣ್ಣ ಹಚ್ಚುವ ಮೂಲಕ ಚೆಂದ ಹೆಚ್ಚಿಸುವುದರ ಜೊತೆಯಲ್ಲಿ ಗಿಡಗಳನ್ನು ಹಚ್ಚುವುದರಿಂದ ಪರಿಸರದ ರಕ್ಷಣೆಯನ್ನು ಮಾಡಿದಂತೆ ಆಗುತ್ತದೆ ಎಂದು ಸಲಹೆ ನೀಡಿದರು.ಸೇವಾ ಕಾರ್ಯಕ್ಕೆ ಆಗಮಿಸಿದ ತಹಸಿಲ್ದಾರರಾದ ವಿಠ್ಠಲ್ ಚೌಗಲೆ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿದರು.
ಈ ಸಮಯದಲ್ಲಿ ಕಲರವ ಶಿಕ್ಷಕರ ಸೇವಾ ಬಳಗದ ಸದಸ್ಯರಾದ ಬೀರಪ್ಪ ಅಂಡಗಿ, ಅಣ್ಣಪ್ಪ ಹಳ್ಳಿ, ಸರೇಶ ಕಂಬಳಿ, ಗುರುಸ್ವಾಮಿ.ಆರ್., ಶರಣಪ್ಪ ರಡ್ಡೇರ, ಮಲ್ಲಪ್ಪ ಗುಡದನ್ನವರ, ವಿರೇಶ ಕೌಟಿ, ಮರ್ಧಾನಪ್ಪ, ಹುಲುಗಪ್ಪ ಭಜಂತ್ರಿ, ಶಾಲೆಯ ಮುಖ್ಯೋಪಾಧ್ಯಾಯರಾದ ಶಂಕ್ರಪ್ಪ ಬಿನ್ನಾಳ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಹನುಮಂತಪ್ಪ ಬಂಡಿ, ದೇವೇಂದ್ರಪ್ಪ ಪೂಜಾರ ಮುಂತಾದವರು ಹಾಜರಿದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ