ಅ. 2 ರಂದು ಸಾಮೂಹಿಕ ಪಿಂಡ ಪ್ರಧಾನ ಹಾಗೂ ಪಿತೃತರ್ಪಣ ಕಾರ್ಯಕ್ರಮ
ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಸರ್ವಪಿತ್ರ ಅಮಾವಾಸ್ಯೆ ಯಂದು ಪ್ರತಿ ವರ್ಷದಂತೆ ಈ ವರ್ಷವೂ ಹಿಂದೂ ಸಮಾಜದಿಂದ ಸಾಮೂಹಿಕ ಪಿತೃ ತರ್ಪಣ ಕಾರ್ಯಕ್ರಮ ಅ.2 ರಂದು
ಕೊಪ್ಪಳ ನಗರದ ಶ್ರೀ ಶಿವರಾತ್ರೇಶ್ವರ ದೇವಸ್ಥಾನದ ಬಳಿ ಆಯೋಜಿಸಲಾಗಿದೆ. ಹರಿಚಂದ್ರ ಮುಕ್ತಿಧಾಮ ಟ್ರಸ್ಟ್ ಕೊಪ್ಪಳದಿಂದ ಈ ಕಾರ್ಯಕ್ರಮ ಆಯೊಜಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದು. ಈ ವರ್ಷ ತರ್ಪಣ ಕಾರ್ಯದಲ್ಲಿ ಭಾಗವಹಿಸಲು ಇಚ್ಚಿಸುವವರು ಪಿತೃತರ್ಪಣದಲ್ಲಿ ಭಾಗವಹಿಸುವವರು 500=00 ಶುಲ್ಕವನ್ನು ಪಾವತಿಸಬೇಕು (ಒಂದು ಕುಟುಂಬ), ತರ್ಪಣ ಕಾರ್ಯಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ಇಲ್ಲಿಯೇ ಕೊಡಲಾಗುತ್ತದೆ ತಾವುಗಳು ಈ ಕೆಳಗೆ ತಿಳಿಸಿರುವ ತರ್ಪಣ ಸಾಮಾನುಗಳನ್ನು ( ತಾಮ್ರ/ಹಿತ್ತಾಳೆ ತಂಬಿಗೆ ಥಾಲಿ/ಲೊಟಾ) ತೀರ್ಥದ ಸೌಟು ) ಮಾತ್ರ ತರಬೇಕು. ಪಿತೃ ಕಾರ್ಯ ಸ್ಥಳದಲ್ಲಿ ಬೆಳಿಗ್ಗೆ 9 ಗಂಟೆ ಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಉಪಸ್ಥಿತ ಇರಬೇಕು. ಕಾರ್ಯ ಸಮಯದಲ್ಲಿ ಶುಭ್ರ ವಸ್ತ್ರ(ಬಿಳಿ ಲುಂಗಿ ಅಥವಾ ಬಿಳಿ ದೋತ್ರ ಧರಿಸಬೇಕು
ಪಿತೃ ತರ್ಪಣ ಕಾರ್ಯದಲ್ಲಿ ಭಾಗವಹಿಸುವ ಎಲ್ಲಾ ಕುಟುಂಬಗಳಿಗೂ ತೀರ್ಥ ಪ್ರಸಾದ ವ್ಯವಸ್ಥೆ ಇರುತ್ತದೆ. ತರ್ಪಣ ಕಾರ್ಯದಲ್ಲಿ ಭಾಗವಹಿಸುವವರು ಶುಲ್ಕವನ್ನು ಪಾವತಿಸಿ ಹೆಸರನ್ನು ಅ.1 ರ ಒಳಗಾಗಿ ನೋಂದಾಯಿಸಲು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : ದಾಮೋದರ್ ವರ್ಣೇಕರ್ 9448480972 ಸಂಪರ್ಕಿಸಲು ಕೋರಲಾಗಿದೆ.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ