December 23, 2024

AKSHARA KRAANTI

AKSHARA KRAANTI




ಘನತೆ ಗಂಭೀರತೆಯನ್ನು ಉಳಿಸಿಕೊಂಡ ಮುದ್ರಣ ಮಾಧ್ಯಮ

ಘನತೆ ಗಂಭೀರತೆಯನ್ನು ಉಳಿಸಿಕೊಂಡ ಮುದ್ರಣ ಮಾಧ್ಯಮ

ಅಕ್ಷರಕ್ರಾಂತಿ ನ್ಯೂಸ್

ರಾಜಸ್ಥಾನ ಮೌಂಟ್ ಅಬು,: ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನ ಮೌಂಟ್ ಅಬುವಿನ ಆನಂದ್ ಸರೋವರದಲ್ಲಿ ಇದೇ ದಿ.26 ರಿಂದ 30 ರವರೆಗೆ ಆಯೋಜಿಸಿರುವ ‘ಸ್ವಸ್ಥ, ಸುಖಿ ಸಮಾಜಕ್ಕೆ ಆಧ್ಯಾತ್ಮಿಕ ಸಶಕ್ತೀಕರಣದಲ್ಲಿ ಮಾಧ್ಯಮಗಳ ಪಾತ್ರ’ ಎಂಬ ವಿಷಯವಾಗಿ ರಾಷ್ಟ್ರೀಯ ಮಾಧ್ಯಮ ಸಮ್ಮೇಳನವನ್ನು ಶುಕ್ರವಾರ ಆನಂದ್ ಸರೋವರದ ಸಭಾಂಗಣದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಕೇಂದ್ರ ಸಚಿವ ಡಾ.ಎಲ್.ಮುರುಗನ್ ಅವರು ಮಾತನಾಡಿ, ಮೂಲಭೂತ ಕರ್ತವ್ಯದೊಂದಿಗೆ ಮಾದರಿ ದೇಶ ಕಟ್ಟುವ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲಿದೆ, ದೇಶದ ಕಠಿಣ ಕ್ಷಣಗಳಲ್ಲಿ ದೇಶದ ಘನತೆಯನ್ನು ಎತ್ತಿ ಹಿಡಿಯಬೇಕು ಅದರಲ್ಲೂ ಇಂದಿಗೂ ಮುದ್ರಣ ಮಾಧ್ಯಮಗಳು ಮೂಲಭೂತ ಘನತೆ ಗಂಭೀರತೆಯನ್ನು ಉಳಿಸಿಕೊಂಡಿದೆ. ಆದರೆ, ನಿರಂಕುಶವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಬಿಂಭಿತವಾಗುವ ಸುಳ್ಳು ಸುದ್ದಿಗಳ ನಿಯಂತ್ರಣ ಸರ್ಕಾರದ ಬೃಹದಾಕಾರದ ಸಮಸ್ಯೆಯಾಗಿದೆ ಎಂದು ಖೇಧ ವ್ಯಕ್ತಪಡಿಸಿದ ಅವರು ಮುಂಬರುವ ದಿನಗಳಲ್ಲಿ ನೂತನ ಪ್ರಸಾರ ನಿಯಂತ್ರಣ ಕಾಯ್ದೆ -2024 ಅನ್ನು ಜಾರಿಗೊಳಿಸುವ ಚಿಂತನೆ ಇದೆ ಎಂದರು.ಈ ಸಂದರ್ಭದಲ್ಲಿ ಬ್ರಹ್ಮಕುಮಾರಿಸ್ ನ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ಡಾ. ದಾದಿ ರತನ್ ಮೋಹಿನಿ, ಹೆಚ್ಚುವರಿ ಕಾರ್ಯದರ್ಶಿ ಬಿ.ಕೆ ಬ್ರಿಜ್ ಮೋಹನ್, ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಬಿಕೆ ಕರುಣಾ, ರಾಷ್ಟ್ರೀಯ ಸಂಯೋಜಕ ಡಾ.ಶಾಂತನ್, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ವಿವಿಧ ಕ್ಷೇತ್ರಗಳ ನುರಿತ ಪಂಡಿತರಿಂದ ದಿನವಿಡಿ ವಿಚಾರ ಸಂಕಿರಣ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಮ್ಮೇಳನದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ್, ಗುಜರಾತ್, ಹಿಮಾಚಲ್, ಬಿಹಾರ್, ಒರಿಸ್ಸಾ ಸೇರಿದಂತೆ ನೇಪಾಳದ ಪತ್ರಕರ್ತರು ಭಾಗಿಯಾಗಿರುವರು.

 

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!