December 23, 2024

AKSHARA KRAANTI

AKSHARA KRAANTI




ಮಾ.23: ಜಗದ್ಗುರು ಶ್ರೀರೇಣುಕಾಚಾರ್ಯ ಜಯಂತಿ ಆಚರಣೆ

ಕೊಪ್ಪಳ,: ವೀರಶೈವ ದರ್ಮದ ಸಂಸ್ಥಾಪಕ ಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತಿಯನ್ನು ಮಾ.23 ಶನಿವಾರ ರಾಜ್ಯದಾದ್ಯಂತ ಆಚರಿಸಲು ಸರ್ಕಾರ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ನಗರಸಭೆ, ಪುರಸಭೆಗಳಲ್ಲಿ ಜಯಂತಿಯನ್ನ ಆಚರಿಸಲಾಗುತ್ತಿದೆ. ಅದರಂತೆ ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿರುವ ಶ್ರೀರೇಣುಕಾಚಾರ್ಯ ಮಂದಿರ ಸಭಾ ಭವನದಲ್ಲಿ ಜಯಂತಿ ಬೆಳಗ್ಗೆ ಆಚರಿಸಲಾಗುತ್ತಿದೆ.

ಆಗಿನ ಆಂದ್ರದ, ಈಗಿನ ತೆಲಂಗಾಣದ ರಾಜ್ಯದ ಕೊಲ್ಲಿಪಾಕಿ ಸೋಮೇಶ್ವರ ಲಿಂಗದಲ್ಲಿ ಉದ್ಬವಿಸಿ, ಸಮಾಜದ ಸರ್ವಜನಾಂಗದ ಶ್ರೇಯಸ್ಸಿಗಾಗಿ 18 ಮಠಗಳನ್ನು ಸ್ಥಾಪಿಸಿ, ದರ್ಮದ ಪ್ರಚಾರ ಮಾಡುತ್ತ, ಇಡೀ ಭೂಮಂಡಲವನ್ನ ಅಂತರಿಕ್ಷದಲ್ಲಿ ಸುತ್ತುತ್ತ ಜ್ಞಾನ ಭೋದನೆ ನಡೆಸಿದ ಆರ್ಚಾಯರು. ಮಲಯಾಚಲದ ಗಿರಿಶ್ರೇಣಿಯಲ್ಲಿ ವಾಸವಾಗಿದ್ದ, ಮಹಾಮುನಿ ಅಗಸ್ತ್ಯ ಋಷಿಗಳಿಗೆ ‘ ಶಿವಾದ್ವೈತ’ ಸಿದ್ದಾಂತವನ್ನ ಭೋದಿಸಿದರು. ಶಿವಚಾರ್ಯ ರೇಣುಕಾಗ್ರಸ್ಥ್ಯ ಸಂವಾದ ರೂಪದಲ್ಲಿ ರಚಿಸಿರುವ ಶಿಖಾಮಣಿಯು ವೀರಶೈವ ದರ್ಮಗ್ರಂಥವೆಂದು ಒಪ್ಪಿ ಕೊಳ್ಳಲಾಗಿದೆ. ಜಗದ್ಗುರು ರೇಣುಕಾಚಾರ್ಯ ಸಂಸ್ಥಾಪಿಸಿದ ‘ವೀರಸಿಂಹಾಸನ’ ಮಹಾಪೀಠವೇ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ಶ್ರೀಮದ್ ರಂಭಾಪುರಿ ಪೀಠ. ಆನಂತರ ಈ ಪೀಠದಲ್ಲಿ ಇಲ್ಲಿಯವರೆಗೆ 121 ಜಗದ್ಗುರುಗಳು ಪೀಠಾಧಿಪತಿಗಳಾಗಿದ್ದಾರೆ. 119ನೇ ಪೀಠಾದಿಪತಿಗಳಾಗಿದ್ದ ಜಗದ್ಗುರು ವೀರಗಂಗಾದರ ಭಗವಾತ್ಪದರು ‘ ಮಾನವದರ್ಮಕ್ಕೆ ಜಯವಾಗಲಿ, ದರ್ಮದಿಂದಲೇ ಶಾಂತಿ’ ಎನ್ನುವ ಮಂತ್ರಘೋಷಣೆ ಮೊಳಗಿಸಿ ಇಡೀ ಮನುಕುಲಕ್ಕೆ ಉತ್ತಮ್ಮ ಸಂದೇಶ ನೀಡಿ. ವೀರಶೈವ ಧರ್ಮದ ಆಚಾರವನ್ನ ಉನ್ನತೀಕರಿಸಿದರು. 121ನೇ ಜಗದ್ಗುರುಗಳಾದ ವೀರಸೋಮೇಶ್ವರ ಭಗವಾತ್ಪಾದರು ಮೂರು ದಶಕಗಳಿಂದ ಪೀಠವನ್ನು ಸರ್ವಾಂಗೀಣ ಅಭಿವೃದ್ದಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ.

ಮಾ.23 ರಂದು ಶ್ರೀರೇಣುಕಾಚಾರ್ಯ ಜಯಂತಿಯನ್ನು ರಾಜ್ಯದಾದ್ಯಂತ ಆಚರಿಸಲಾಗುತ್ತದೆ.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!