ಕಳಸಾಪೂರ ಬಸವಕೇಂದ್ರದಲ್ಲಿ 1526ನೇ ಶಿವಾನುಭವದಲ್ಲಿ ಮರೆಯದಮಾ ಣಿಕ್ಯ ಸರ್ ಸಿದ್ದಪ್ಪ ಕಂಬಳಿರವರ ಜನ್ಮದಿನಾಚರಣೆ
ಅಕ್ಷರಕ್ರಾಂತಿ ನ್ಯೂಸ್
ಗದಗ,: ತಾಲೂಕ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ 1526ನೇ ಶಿವಾನುಭವ ಕಾರ್ಯಕ್ರಮದಲ್ಲಿ ಸಿದ್ದಪ್ಪ ಕಂಬಳಿಯವರ ಜನ್ಮ ದಿನಾಚರಣೆಯನ್ನು ವಚನಗೋಷ್ಠಿಯೊಂದಿಗೆ ಪುಷ್ಪವೃಷ್ಟಿ ಸಲ್ಲಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಬಸವ ಕೇಂದ್ರದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಗ. ಖಂಡಮ್ಮನವರ ಮಾತನಾಡಿ, ಗದಗ ತೋಂಟದಾರ್ಯ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವಾಗ ಮುಂಬೈ ಸರಕಾರದಲ್ಲಿ ಕಂಬಳಿ ಸಿದ್ದಪ್ಪ ಅಂತ ಒಬ್ಬ ಮಂತ್ರಿ ಇದ್ದರು. ಅವರು ಏಳು ಖಾತೆ ನಿಭಾಯಿಸುತ್ತಿದ್ದ ದೊಡ್ಡ ಮನುಷ್ಯರು ಎಂದು ಅಲ್ಲಲ್ಲಿ ಹೇಳುತ್ತಿದ್ದರು. ಕಂಬಳಿ ಸಿದ್ದಪ್ಪ ಎನ್ನುವ ಹೆಸರು ನೆನಪಿನಲ್ಲಿ ಉಳಿಯಲು ಈ ಮಾತೇ ಕಾರಣವಾಯಿತು. ಸರ್ ಸಿದ್ದಪ್ಪ ಕಂಬಳಿಯವರು ಹುಟ್ಟಿದ್ದು ಸಿದ್ಧಾರೂಢರ ಪುಣ್ಯಭೂಮಿ ಹುಬ್ಬಳ್ಳಿಯಲ್ಲಿ 1882 ಸೆಪ್ಟೆಂಬರ 11 ರಂದು ತೋಟಪ್ಪ ಮತ್ತು ತಾಯಿ ಗಂಗಮ್ಮ ಮನೆಯಲ್ಲಿ ಕಡುಬಡತನ, ಮೂರು ವರ್ಷದ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ಬಾಲಕ ಸಿದ್ದಪ್ಪನ ಹಿರಿಯಕ್ಕ ಹುಚ್ಚವ್ವವನನ್ನು ಲಕ್ಕುಂಡಿಯ ಸಣ್ಣಬಸಪ್ಪನವರಿಗೆ ವಿವಾಹ ಮಾಡಿಕೊಡಲಾಗಿತ್ತು. ಜಾಣನಾಗಿದ್ದ ಸಿದ್ದಪ್ಪನನ್ನು ಲಕ್ಕುಂಡಿಗೆ ಕರೆತರಲಾಯಿತು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಲಕ್ಕುಂಡಿಯಲ್ಲಿಯೇ ಪೂರೈಸಿದರು. ಮುಂದಿನ ವಿದ್ಯಾಭ್ಯಾಸವನ್ನು ಪುಣೆಯಲ್ಲಿ ಪೂರೈಸಿದ ಅವರು,1904 ರಲ್ಲಿ ಬಿ.ಎ ಪದವಿಯನ್ನು ಪಡೆದರು.106ರಲ್ಲಿ ಎಲ್.ಎಲ್.ಬಿ. ಪದವಿಯನ್ನು ಮುಂಬೈ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಿದ್ದಪ್ಪನವರು ತಮಗೆ ಒಲಿದು ಬಂದ ಜಡ್ಜ್ ಹುದ್ದೆಯನ್ನು ಬ್ರಿಟಿಷ್ ಅರಸೊತ್ತಿಗೆಯ ತುತ್ತಾಗಿರಲು ಮನ ಒಪ್ಪದೇ ತಿರಸ್ಕರಿಸಿದ್ದರು. ರಾಜಕೀಯ ಪ್ರವೇಶ 1917ರಲ್ಲಿ ಹುಬ್ಬಳ್ಳಿ ನಗರಪಾಲಕೆ ಚುನಾವಣೆಯಲ್ಲಿ ಆಯ್ಕೆಯಾದ ಸಿದ್ದಪ್ಪನವರು 1921 ರಿಂದ 1930ರವರೆಗೆ ಹುಬ್ಬಳ್ಳಿಯ ಮುನ್ಸಿಪಾಲಿಟಿ ಅಧ್ಯಕ್ಷರಾಗಿ ಸಿದ್ದಪ್ಪನವರು ಕಾರ್ಯನಿರ್ವಹಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಹಲವಾರು ಪ್ರಜಾಪ್ರಗತಿಯ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಸರ್ ಸಿದ್ದಪ್ಪ ಕಂಬಳಿಯವರ ಸೇವೆ ಅನನ್ಯ, ಅದ್ಭುತ ಸರ್ ಸಿದ್ದಪ್ಪ ಕಂಬಳಿಯವರನ್ನು ವಿದೇಶದಲ್ಲಿ ಬ್ಯಾರಿಸ್ಟರ್ ಪದವಿಯನ್ನು ಪಡೆದು ಭಾರತಕ್ಕೆ ಮರಳಿ ಡಾ. ಬಿ. ಆರ್. ಅಂಬೇಡ್ಕರ ಅವರು 1932 ರಲ್ಲಿ ಪ್ರತಿಪಾದಿಸಿದ ಪುಣೆ ಆ್ಯಕ್ಟ್ನ್ನು ಬೆಂಬಲಿಸಿ ಅವರಿಗೆ ಬೆಂಗಾವಲಾಗಿ ನಿಂತರು. 1937ರಲ್ಲಿ ಕಾಂಗ್ರೆಸ್, ಜವಾಹರಲಾಲ ನೆಹರು ಮತ್ತು ವಲಭಬಾಯಿ ಪಟೇಲರು ಸಿದ್ದಪ್ಪನವರು ವಿರುದ್ಧ ಪ್ರಚಾರಕ್ಕಾಗಿ ಧಾರವಾಡಕ್ಕೆ ಬಂದಿದ್ದರು. ಆದರೂ ಕೂಡಾ ಸಿದ್ದಪ್ಪನವರು ಅತ್ಯಧಿಕ ಮತಗಳಿಂದ ಗೆದ್ದಿದ್ದರು ಅಂದರೆ ಅವರ ಮೇಲೆ ಜನರ ಅಭಿಮಾನ ಎಂಥದ್ದು ಎಂಬುದನ್ನು ಊಹಿಸಿ ಸಿದ್ದಪ್ಪ ಕಂಬಳಿಯವರು ತಮ್ಮ ಮಂತ್ರಿ ಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದರು.
ಸಿದ್ದಪ್ಪ ಕಂಬಳಿಯವರ ಹಲವಾರು ರಾಜಕೀಯ ನಡೆಗಳು ಹಿಂದುಳಿದವರಿಗೆ, ಲಿಂಗಾಯತರಿಗೆ ಧೈರ್ಯವನ್ನು ಮತ್ತು ಮುಖಂಡತ್ವದ ವೈಖರಿಯನ್ನು ಗಮನಿಸಿದ ಅಂದಿನ ಬ್ರಿಟಿಷ್ ಸರ್ಕಾರ ಅವರಿಗೆ ಸರ್ ಎಂಬ ಪದವಿಯನ್ನು ನೀಡಿ ಗೌರವಿಸಿತು.
ಕನ್ನಡಿಗರ ಕಾಲಿಗೆ ನೆಲೆ ಮತ್ತು ಕಲೆಗೆ ಬೆಲೆ ಸಿಗಲೆಂದು ಸದಾ ಆಶಿಸುತ್ತಿದ್ದ ಸಿದ್ದಪ್ಪ ಕಂಬಳಿಯವರು 26-04-1959 ರಂದು ಚಿರಸ್ಥಾಯಿಯಾಧರು. ಆದ್ದರಿಂದಲೇ ಅವರ ಜ್ಞಾಪಕಾರ್ಥವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಸರ್ ಸಿದ್ದಪ್ಪ ಕಂಬಳಿಯವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಮತ್ತೊಮ್ಮೆ, ಮಗದೊಮ್ಮೆ ಅವರು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ ಬರಲಿ, ಅವರ ಆದರ್ಶ ಜೀವನವನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಬಸವಕೇಂದ್ರದ ಕಾರ್ಯಾಧ್ಯಕ್ಷರು, ಕನ್ನಡ ಅಭಿಮಾನಿ ಮಲ್ಲಿಕಾರ್ಜುನ ಖಂಡಮ್ಮನವರ ಪ್ರಾರ್ಥಿಸಿರುತ್ತಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಡಿವೆಪ್ಪ ಸಿ. ರಾಮನಗೌಡರ, ಮುಖ್ಯ ಅತಿಥಿಗಳಾಗ ಬಸವರಾಜ ಬ. ಕಣವಿ, ಅತಿಥಿಗಳಾಗಿ ಮಂಜುನಗೌಡ ಚ. ರಾಮನಗೌಡರ, ನಿಂಗಪ್ಪ ಹ. ಇನಾಮತಿ, ಶಿವಪ್ಪ ಹುಯಿಲಗೋಳ, ಮಹಾದೇವಿ ಮಡಿವಾಳರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷರಾದ ಅಡಿವೆಪ್ಪನವರು ಸಿದ್ದಪ್ಪ ಕಂಬಳಿಯವರ ಸಾಧನೆ, ಗುರಿ, ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗೋಣ ಎಂದು ಕರೆಯಿತ್ತರು. ಕಾರ್ಯಕ್ರಮ ಸ್ವಾಗತ, ನಿರೂಪಣೆ, ಶರಣಪ್ಪ ಹುಯಿಲಗೋಳ ನೆರವೇರಿಸಿದರು. ಕೊನೆಯಲ್ಲಿ ವಚನ ಮಂಗಲಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತೆಂದು ಬಸವರಾಜ ಕಣವಿ ತಿಳಿಸಿರುತ್ತಾರೆ.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ