26ನೇ ವರ್ಷದ ವಾರ್ಷಿಕ ಸರ್ವ ಸಭೆ
ಅಕ್ಷರಕ್ರಾಂತಿ ನ್ಯೂಸ್
ಗದಗ,: ಜ್ಯೋತಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಗದಗ 26ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯು ನಗರದ ಗಾಣಿಗ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಸಹಕಾರಿ ಸಂಘದ ಅಧ್ಯಕ್ಷರಾದ ಬಸವರಾಜ ಬಿಂಗಿ, ಗಾಣಿಗ ಸಮುದಾಯದ ಹಿರಿಯರಾದ ನಿಂಗಪ್ಪ ಕೆಂಗಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಸವರಾಜ ಬಿಂಗಿಯವರು ಮಾತನಾಡಿ, ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರವರು ಏಷ್ಯಾದಲ್ಲಿಯೇ ಪ್ರಥಮ ಸಹಕಾರಿ ಸಂಘವನ್ನು ಸ್ಥಾಪಿಸಿದ ಮಹಾನ ಚೇತನ ಅವರ ಹಾಕಿಕೊಟ್ಟ ಸಹಕಾರಿ ಹಾದಿಯಲ್ಲಿಯೇ ಜ್ಯೋತಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಗದಗ ಅಧ್ಯಕ್ಷರಾಗಿ ನಾನು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ವ ಸದಸ್ಯರು ಸಹಕಾರ ನೀಡುತ್ತಿದ್ದರಿಂದ ಬ್ಯಾಂಕ ಬೆಳವಣಿಗೆ ಉತ್ತಮ ರೀತಿಯಲ್ಲಿ ಆಗುತ್ತಿದ್ದು ಇದೂ ಎನ್ನೂ ಎತ್ತರಕ್ಕೆ ಬೆಳೆಸಲು ನನ್ನ ಅವಿರತವಾಗಿ ಶ್ರಮಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಾಣಿಗ ಸಮಾಜದ ಹಿರಿಯರು ಹಾಗೂ ಗದಗ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ನಿಂಗಪ್ಪ ಕೆಂಗಾರ ಮಾತನಾಡಿ, ಎಲ್ಲ ಸಮಾಜದ ಹಿರಿಯರು, ಕಿರಿಯರು ಸೇರಿ ಸಂಘವನ್ನು ಬೆಳೆಸೋಣ ಎಂದು ನುಡಿದರು. ಡಾ. ಶೇಖರ ಸಜ್ಜನರ ಮಾತನಾಡಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು ಬೆಳೆಯಬೇಕು, ಬೇರೆಯವರನ್ನು ಬೆಳೆಸಬೇಕು, ದೇಶದ ಪ್ರಗತಿಗಾಗಿ ಶ್ರಮಿಸೋಣ ಸಂಘದ ಸದಸ್ಯರ ಯಶಸ್ವಿನಿ ಕಾರ್ಡನ್ನು ಪಡೆದು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ಈಶ್ವರಪ್ಪ ಕಿರೇಸೂರ ಉಪಾಧ್ಯಕ್ಷರು, ಶಿವಪ್ಪ ಎಚ್. ಗಾಣಿಗೇರ ನಿದೇರ್ಶಕರು, ಷಣ್ಮುಖಪ್ಪ ಬಡ್ನಿ, ಅಶೋಕಪ್ಪ ಲಕ್ಕುಂಡಿ, ಶ್ರೀಮತಿ ಶಾಂತಾದೇವಿ ಗೌಡರ, ಶ್ರೀಮತಿ ರೇಣುಕಾ ಕಿರೇಸೂರ, ಪರಶುರಾಮ ವಾಸನ್ನವರ, ಬಸವರಾಜ ಕಿರೇಸೂರ, ಶಿವಾನಂದ ಹವಳಪ್ಪನವರ, ಶರಣಗೌಡ ಪವಾಡಿಗೌಡರ, ಬಸವರಾಜ ಹರಿಜನ, ರಮೇಶ ಮಂದಾಲಿ, ಗಿರಿಯಪ್ಪ ಅಸೂಟಿ, ಗಂಗಣ್ಣ ಗಾಣಿಗೇರ, ತೋಟಪ್ಪ ಗಾಣಿಗೇರ, ಶ್ರೀಕಾಂತಪ್ಪ ಲಕ್ಕುಂಡಿ ಸೇರಿದಂತೆ ಸಂಘದ ಸದಸ್ಯರು, ಸಂಘದ ಆಡಳಿತ ಮಂಡಳಿಯವರು ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಕುಮಾರಿ ಅನ್ನಪೂರ್ಣೇಶ್ವರಿ ಕರಿಯವರು ನೆರವೇರಿಸಿದರು. ಸ್ವಾಗತವನ್ನು ಜಯಕುಮಾರ ಬ್ಯಾಳಿ, ಅಶೋಕ ಹಾದಿ ನಿರೂಪಿಸಿದರು. ಕೊನೆಯಲ್ಲಿ ಎಸ್.ವ್ಹಿ. ಪವಾಡಿಗೌಡರ ವಂದನಾರ್ಪಣೆಗೈದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ