December 23, 2024

AKSHARA KRAANTI

AKSHARA KRAANTI




ಮಾ.21 ರಂದು ಅಳವಂಡಿ-ಬೆಟಗೇರಾ ಮಾರ್ಗದ ಗ್ರಾಮಗಳಲ್ಲಿ ವಿದ್ಯುತ್ ಕಟ್

ಕೊಪ್ಪಳ,: ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ ಕೊಪ್ಪಳದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಾರ್ಚ್ 21 ಗುರುವಾರ ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
110/33/11 ಕೆ.ವಿ ಬೆಟಗೇರಾ ವಿದ್ಯುತ್ ಉಪ-ಕೇಂದ್ರದ ತ್ರೈಮಾಸಿಕ ಕೆಲಸ ನಡೆಸುತ್ತಿರುವ ಪ್ರಯುಕ್ತ, 33 ಕೆ.ವಿ ಅಳವಂಡಿ ಹಾಗೂ ಬೆಟಗೇರಾದಿಂದ ಹಾದು ಹೋಗುವ 11 ಕೆ.ವಿ ಮಾರ್ಗಗಳಿಗೆ ಒಳಪಡುವ ಗ್ರಾಮಗಳಿಗೆ ಮಾ.21ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎ.ಆರ್.ಸಲೀಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!