December 23, 2024

AKSHARA KRAANTI

AKSHARA KRAANTI




ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ತಾಯಿ :ಮಹಾಲಿಂಗ ಪ್ರಭುಶ್ರೀ

ಕನಕಪುರ,: ಶ್ರೀದೇಗುಲಮಠದ ನಿರ್ವಾಣಸ್ವಾಮಿ ಕೃಪಾ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ನಿರ್ವಾಣಸ್ವಾಮಿ ಸಂಸ್ಕೃತ ಪಾಠಶಾಲೆ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಕಾರದೊಂದಿಗೆ “ಅಸ್ಮಾಕಂ ಸಂಸ್ಕೃತ ಭಾಷಾ” ಸಂಸ್ಕೃತೋತ್ಸವ ಕಾರ್ಯಕ್ರಮ ಮತ್ತು ಜನ ಜಾಗೃತಿ ಜಾತಕ್ಕೆ ಸಂಸ್ಥೆಯ ವಿಶೇಷ ಅಧಿಕಾರಿ ರವಿಶಂಕರ್‌ರವರು ಚಾಲನೆ ನೀಡಿದ ನಂತರ ಬೂದೀಕೆರೆ ರಸ್ತೆ ಎಂಜಿ ರಸ್ತೆಗಳಲ್ಲಿ ಜನ ಜಾಗೃತಿಯ ಜಾಥಾ ನಡೆಯಿತು.ನಙತರ ಅಸ್ಮಾಕಂ ಸಂಸ್ಕೃತ ಸಮಾರಂಭದ ದಿವ್ಯ ಸಾನಿಧ್ಯವನ್ನು ಮುಖ್ಯ ಶಿಕ್ಷಕರಾದ ವಿದ್ವಾನ್ ಮಹಾಲಿಂಗಪ್ರಭು ಸ್ವಾಮಿಗಳು, ವಹಿಸಿ ಮಾತನಾಡಿ, ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳಿಗೆ ತಾಯಿ, ನಮ್ಮ ಪರಂಪರೆಯಲ್ಲಿ ಪೂಜೆ ಪುನಸ್ಕಾರಗಳಲ್ಲಿ ಬಳಸುವಂತಹ ಭಾಷೆ ಸಂಸ್ಕೃತ ಅದನ್ನು ಸರಳಗೊಳಿಸಿ ಜನಸಾಮಾನ್ಯರು ಮಾತನಾಡುವಂತೆ ಆಗಬೇಕು ಎಂಬುದು ಜಾತ ಮತ್ತು ಜಾಗೃತಿ ಕಾರ್ಯಕ್ರಮದ ಉದ್ದೇಶ ನಮ್ಮ ಶ್ರೀಮಠದಲ್ಲಿ ಇಮ್ಮಡಿ ಮಹಾಲಿಂಗ ಸ್ವಾಮಿಗಳವರ ಕಾಲದಿಂದಲೂ ಎಲ್ಲಾ ಜನಾಂಗದವರು ಸಂಸ್ಕೃತವನ್ನು ಕಲಿತು ಇಂದು ಪ್ರಮುಖ ಸ್ಥಳಗಳಲ್ಲಿ ಶಿಕ್ಷಕರಾಗಿ ಪುರೋಹಿತರಾಗಿ ಸಂಸ್ಕಾರವಂತವರಾಗಿ ಎಲ್ಲಾ ಕಡೆ ಕಾಣುತ್ತಿರುವುದು ನಮ್ಮ ಶ್ರೀಮಠದ ಹೆಮ್ಮೆ ಎಂದರು.

ರಾಮನಗರ ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೆ ಪಿ ಯೋಗಿಶ್‌ರವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸಂಸ್ಕೃತ ಭಾಷೆಯು ಇಂದಿನ ವಿದ್ಯಾರ್ಥಿಗಳು ಅಧ್ಯಯನ ಮಾಡಿದರೆ ಮನಸ್ಸು ಶುದ್ಧವಾಗಿ, ನಿರ್ಮಲವಾಗಿ ಎಲ್ಲಾ ವಿಷಯಗಳಲ್ಲಿಯೂ ಆಸಕ್ತಿ ಮೂಡುತ್ತದೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾದ ಶ್ರೀ ದುರದುಂಡೇಶ್ವರ ಸ್ವಾಮಿಗಳು ಮಾತನಾಡಿ, ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಈ ಕಾರ್ಯಕ್ರಮ ಯಶಸ್ವಿ ಎಂದರು. ಅಧ್ಯಕ್ಷತೆಯನ್ನು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಆರ್. ಶಿವಯ್ಯನವರು ವಹಿಸಿದ್ದರು. ಉಪನ್ಯಾಸವನ್ನು ವಿದ್ಯಾನ್ ಶಿವಕುಮಾ‌ರ್ ಎಂ.ರವರು ನಡೆಸಿದರು ಸಮಾರಂಭದಲ್ಲಿ ವಿದ್ವಾನ್ ವೀರಭದ್ರಪ್ಪರವರು, ಮಂಜುನಾಥ ಮಲ್ಲಣ್ಣನವರು, ವಿದುಷಿ ವಿ ಎಲ್ ಧನಲಕ್ಷ್ಮಿರವರು, ಆನಂದ್ ಕುಮಾರ್‌ರವರು, ಸಂಸ್ಥೆಯ ಎಲ್ಲಾ ಶಿಕ್ಷಕರು ಮಕ್ಕಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!