December 23, 2024

AKSHARA KRAANTI

AKSHARA KRAANTI




ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಆಧ್ಯತೆ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ 9.52 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಅಡಿಗಲ್ಲು

ಕೊಪ್ಪಳ,: ಕಳೆದ 11 ವರ್ಷಗಳಲ್ಲಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಪ್ರತಿ ಗ್ರಾಮಕ್ಕೂ ಕೂಡ ಸರಿ ಸಮನಾದ ಅನುದಾನ ಹಂಚಿಕೆ ಮಾಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಆಗಬೇಕಾದ ಕೆಲಸಗಳು ಬಹಳಸ್ಟಿದ್ದು ಅನುದಾನ ಮೀಸಲಿಟ್ಟು ಅವುಗಳನ್ನು ಹಂತ ಹಂತವಾಗಿ ಹಿಡೇರಿಸುವ ಪ್ರಯತ್ನವನ್ನು ಮಾಡುತ್ತೇನೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಬಂಡಿಹರ್ಲಾಪುರ ಜಿ.ಪಂ ವ್ಯಾಪ್ತಿಯ ಅಗಳಕೇರಿ, ಶಿವಪುರ, ಹೊಸ ಬಂಡಿಹರ್ಲಾಪುರ, ಹಳೇ ಬಂಡಿಹರ್ಲಾಪುರ, ಬಸಾಪುರ, ರಾಜಾರಾಮಪೇಟೆ, ನಾರಾಯಣಪೇಟೆ, ಅತ್ತಿವಟೆ, ಮಹಮದ್ ನಗರ ಹಾಗೂ ಕವಳಿ ಗ್ರಾಮಗಳಲ್ಲಿ ಅಂದಾಜು ಮೊತ್ತ 9.52 ಕೋಟಿ ಮೊತ್ತದಲ್ಲಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈ ವರ್ಷ 5 ಸಾವಿರ ಕೋಟಿ ಅನುದಾನ ಮಿಸಲಿಟ್ಟಿದೆ. ಇದರಿಂದ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿಗೆ ಕೂಡ ಸಹಕಾರಿ ಆಗುತ್ತಿದೆ ಎಂದರು.

ಡಿವೈಡರ್ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು : ಕೊಪ್ಪಳ ಮತಕ್ಷೇತ್ರದ ಅಗಳಕೇರಿ ಹಾಗೂ ಹೊಸ ಬಂಡಿಹರ್ಲಾಪುರ ಗ್ರಾಮಗಳಲ್ಲಿ ಬಹುದಿನಗಳ ಬೇಡಿಕೆ ಆಗಿದ್ದ ಡಿವೈಡರ್ ನಿರ್ಮಾಣಕ್ಕೆ ತಲಾ ಗ್ರಾಮಕ್ಕೆ 2 ಕೋಟಿ ಅನುಧಾನ ಮಿಸಲಿಟ್ಟು ಶಾಸಕರು ಭೂಮಿಪೂಜೆ ನೆರವೇರಿಸಿದ್ದಾರೆ. ಡಿವೈಡರ್ ನಿರ್ಮಿಸಿ ಬೀದಿ ದೀಪ ಅಳವಡಿಸುವ ಕಾಮಗಾರಿ ಇದಾಗಿದೆ ಎಂದು ಶಾಸಕರು ತಿಳಿಸದರು.
ಹಳೇ ಬಂಡಿಹರ್ಲಾಪುರ ವ್ಯಾಪ್ತಿಯಲ್ಲಿ ಜಂಪ್ ಸರ್ವೇ ಕುರಿತು ದೊಡ್ಡ ಸಮಸ್ಯೆ ಇದ್ದು ಹೀಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ ಶೀಘ್ರದಲ್ಲಿ ಇದನ್ನೂ ನಿಮ್ಮೆಲ್ಲರ ಜೊತೆಗೂಡಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.ಈ ಸಂದರ್ಭದಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ, ವಾಣಿಜ್ಯೋದ್ಯಮಿ ಚಂದ್ರಶೇಖರ್ ಐಎಲ್ಸಿ, ಮಾಜಿ ಜಿ.ಪಂ ಅಧ್ಯಕ್ಷರಾದ ಜನಾರ್ಧನ್ ಹುಲಿಗಿ, ವೆಂಕಟೇಶ್ ಕಂಪಸಾಗರ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ, ಎಸ್ ಸಿ ಘಟಕದ ಜಿಲ್ಲಾದ್ಯಕ್ಷ ಗಾಳೆಪ್ಪ ಪೂಜಾರ್, ಪಾಲಾಕ್ಷಪ್ಪ ಗುಂಗಾಡಿ, ವಿಶ್ವನಾಥ್ ರಾಜು, ಚಂದಕೃಷ್ಣ,ರಂಗನಾಥ್, ಯಮನೂರಪ್ಪ ಬೋವಿ, ನಾಗರಾಜ್ ಪಟವಾರಿ, ಕನಕಪ್ಪ ಅಗಳಕೆರಿ,ಈರಣ್ಣ ಹುಲಿಗಿ, ಸೋಮಶೇಖರ್ ಹಿಟ್ನಾಳ, ಅಶೋಕ ಇಳಿಗೇರ್, ಉಪ ವಿಭಾಗಧಿಕಾರಿ ಮಹೇಶ್ ಮಾಲಗಿತ್ತಿ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕಾ ಪಂಚಾಯತ್ ಇಓ ದುಂಡೇಶ್ ತುರಾದಿ, ಪಂಪಣ್ಣ ಪೂಜಾರ್, ಆಂಜನೇಯಲು, ಸಾರು ಬಂಡಿ ಹರ್ಲಾಪುರ, ಧರ್ಮಣ್ಣ ವಾಲ್ಮೀಕಿ, ರೂಪ್ಲಾ ನಾಯಕ್, ಸೀನ್ ಬಾಬು, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ್ ಸೇರಿದಂತೆ ಇತರರು ಇದ್ದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!