ಕೊಪ್ಪಳ-ಭಾಗ್ಯನಗರ,: ಪಟ್ಟಣದ ಜ್ಞಾನ ಬಂಧು ಸಂಸ್ಥೆಯಲ್ಲಿ ಮಂಗಳವಾರ ದಂದು ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಕವಲೂರ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಿಜಾಮನ ದಬ್ಬಾಳಿಕೆಯಿಂದ ಈ ಭಾಗದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸ್ವಾತಂತ್ಯ ಕ್ಷೀಣಿಸಿತ್ತು. ಸರ್ದಾರ ಪಟೇಲರ್ ದಿಟ್ಟ ನಿಲುವಿನಿಂದ ವಿಮೋಚನೆ ಗೊಳ್ಳುವಂತಾಯಿತು. ಈ ಕಾರಣದಿಂದಾಗಿ ನಾವು ಇಂದು ಹಿಂದುಳಿದವರು ಎಂಬ ಪಟ್ಟ ತೊಡೆದುಹಾಕಲು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಾಧನೆ ಸಾಧಿಸುವ ಮಹತ್ತರವಾದ ಜವಬ್ದಾರಿ ನಿರ್ವಹಿಸೋಣ ಹಾಗೂ ಈ ವಿಮೋಚನೆಗೆ ಶ್ರಮಿಸಿದ ಹೋರಾಟಗಾರರನ್ನು ಸರಿಸುವುದು ನಮ್ಮ ಕರ್ತವ್ಯ ಎಂದರು.ಶಾಲಾ ಶಿಕ್ಷಕಿಯಾದ ಶ್ರೀಮತಿ ರಾಧಾ ಏಣಿ ಮಾತನಾಡಿ, ಸರ್ದಾರ್ ಪಟೇಲರು ಕಲ್ಯಾಣ ಕರ್ನಾಟಕ ಭಾರತದ ಒಕ್ಕೂಟಕ್ಕೆ ಒಳಪಡಿಸಲು ನಿಜಾಮನ ದಬ್ಬಾಳಿಕೆ ವಿರುದ್ದ ಸಂವಿಧಾನ ಬದ್ಧವಾದ ಮತ್ತು ಮಂತ್ರಿಮಂಡಳದ ಒಪ್ಪಿಗೆ ಮೇರೆಗೆ ಸೆಪ್ಟೆಂಬರ್ 13, 1948 ರಂದು ಪೋಲಿಸ್ ಕಾರ್ಯಚರಣೆಯನ್ನು 5 ಭಾಗಗಳಿಂದ ನಡೆಸಿ ನಿಜಾಮನ ಹುಟ್ಟುಡಗಿಸಿ, ರಜಾಕಾರರನ್ನು ಮಟ್ಟಹಾಕಲಾಗಿ ಕೊನೆಗೆ 17ನೇ ಸೆಪ್ಟೆಂಬರ್ 1948 ರಂದು ನಿಜಾಮನು ರೇಡಿಯೊ ಮೂಲಕ ಭಾರತದ ಒಕ್ಕೂಟಕ್ಕೆ ವಿಲೀನಗೊಳುತ್ತೇನೆ ಎಂದು ನಿರ್ಧಾರ ತಿಳಿಸುತ್ತಾನೆ. ಈ ಕಾರ್ಯ ಯಶಸ್ವಿಗೊಳಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಪ್ರಮುಖವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ಜಿ.ಎಸ್., ಶಾಲಾ ಪ್ರಾಂಶುಪಾಲರಾದ ಲಿಲಿಯನ್ ಆಂಟೋನಿ, ಉಪ-ಪ್ರಾಂಶುಪಾಲರಾದ ಜ್ಯೋತಿ ಎಸ್.ಎಸ್, ಶಾಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ನಾಗರಾಜ ಡಿ.ಎಸ್. ನಿರೂಪಿಸಿ, ವಂದಿಸಿದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ