December 23, 2024

AKSHARA KRAANTI

AKSHARA KRAANTI




ಗಣೇಶೋತ್ಸವ ಅಂಗವಾಗಿ ಗಣೇಶಗೆ ಪೂಜೆ, ಅನ್ನಸಂತರ್ಪಣೆ

ಗದಗ-ಬೆಟಗೇರಿ ನಗರಸಭೆಯಲ್ಲಿ ಗಣೇಶೋತ್ಸವ ಅಂಗವಾಗಿ ಶ್ರೀ ಗಣೇಶಗೆ ಪೂಜೆ ಮತ್ತು ಅನ್ನಸಂತರ್ಪಣೆ

ಗದಗ,: ಗದಗ-ಬೆಟಗೇರಿ ನಗರಸಭೆಯಲ್ಲಿ ಗಣೇಶೋತ್ಸವ ಅಂಗವಾಗಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರ ಸಾನಿಧ್ಯದಲ್ಲಿ ಶ್ರೀ ಗಣೇಶನಿಗೆ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಗದಗ, ಪೌರಾಯುಕ್ತರು ಗದಗ-ಬೆಟಗೇರಿ ನಗರಸಭೆ, ನಗರಸಭೆಯ ಮಾಜಿ ಅಧ್ಯಕ್ಷರು ಮತ್ತು ಹಾಲಿ ಸದಸ್ಯರು, ನಗರಸಭೆ ಕಚೇರಿ ವ್ಯವಸ್ಥಾಪಕರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನಗರಸಭೆ, ಲೆಕ್ಕಾಧೀಕ್ಷಕರು, ಕಂದಾಯ ಅಧಿಕಾರಿಗಳು ನಗರಸಭೆ ಗದಗ-ಬೆಟಗೇರಿ, ಟಿ. ಎಚ್. ದ್ಯಾವನೂರ ಲೆಕ್ಕಾಧೀಕ್ಷಕರು, ಪಿ. ಎಫ್. ಶೇರಖಾನೆ ಕಛೇರಿ ವ್ಯವಸ್ಥಾಪಕರು, ದ್ವಿ.ದ.ಸ. ಎಸ್.ಎಂ.ಗುಡಿ ದ್ವಿ.ದ.ಸ., ಎಲ್. ಜಿ. ಗಾಡಗೋಳಿ, ಎನ್.ಎಂ.ಗೋರಣ್ಣವರ, ಎಸ್.ಎ. ಅಗಸಿಮನಿ, ಆರ್.ಎಂ. ನಾಗಲೀಕರ ಸೇರಿದಂತೆ ನಗರಸಭೆ ಸಿಬ್ಬಂದಿ ವರ್ಗದವರು ಇದ್ದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!