December 23, 2024

AKSHARA KRAANTI

AKSHARA KRAANTI




ಪ್ರತಿ ವರ್ಷ ಕೃಷಿ ಪತ್ತಿನ ಸಹಕಾರ ಸಂಘ ಲಾಭದಾಯದತ್ತ : ರಾಜಶೇಖರಗೌಡ ಆಡೂರು

ಕೊಪ್ಪಳ,: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರತಿ ವರ್ಷ ಲಾಭದಾಯದತ್ತ ನಡೆದಿದ್ದು ಸಂತಸ ಎನ್ನಿಸುತ್ತದೆ ಎಂದು ಕೊಪ್ಪಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರಗೌಡ ಆಡೂರು ಹೇಳಿದರು.

ಸೋಮವಾರ ನಗರದ ಶ್ರೀಕೇತೇಶ್ವರ ಕಲ್ಯಾಣ ಮಂಟಪದಲ್ಲಿ 2023-24ನೇ ಸಾಲಿನ 48ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

1976-77ರಿಂದ ಇಲ್ಲಿಯವರೆಗೆ 48 ವಸಂತಗಳನ್ನು ಪೂರೈಸಿ ಸರ್ವ ಸದಸ್ಯರ ಬಾಳಿಗೆ ಕಣ್ಣಾಗಿ ನಿಂತಿರುವ ಕೊಪ್ಪಳದ ವಿಎಸ್ಎಸ್ಎನ್ ಎಂದು ಹೇಳಲು ಹೆಮ್ಮೆ ಅನಿಸುತ್ತದೆ, 2631 ಸದಸ್ಯರಿದ್ದು, 65.34ಲಕ್ಷ ರೂ ಷೇರು ಬಂಡವಾಳ, 62.59 ಲಕ್ಷ ಠೇವುಗಳು,17.44 ನಿಧಿಗಳು, 5.42 ಕೋಟಿ ಸಾಲಗಳು, 60.42 ಕೋಟಿ ದುಡಿಯುವ ಬಂಡವಾಳ, 7.61 ಲಕ್ಷ ಲಾಭ, ಬೆೇಳೆ ಸಾಲ, ಹೈನುಗಾರಿಕೆ, ಜಮೀನು ಸಾಲ, ನಗದು ಪತ್ರ ಆಧಾರಿ , ವಾಹನ ಸಾಲ, ಮಹಿಳಾ ಗುಂಪುಗಳಿಗೆ ಸಾಲ ನೀಡುತ್ತಿದ್ದು ಎಲ್ಲಾ ರೀತಿಯಿಂದ ಲಾಭದಾಯಕ ಸಾಗಿದ್ದು, ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಾರಿ 7.61ಲಕ್ಷ ರೂ ಲಾಭದಾಯವಾಗಿದೆ, ಸರ್ವ ಸದಸ್ಯರ ಸಹಕಾರದೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರತಿ ವರ್ಷ ಮುನ್ನಡೆಯುತ್ತಿದ್ದು ಇದು ಎಲ್ಲರಿಗೂ ಸಲ್ಲುವ ಶ್ರೇಯಸ್ಸು ಎಂದರು.ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮರ್ದಾನಲಿ ಮುಜಾವರ, ಕೆಆರ್ ಡಿ ಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರಶೆಟ್ಟರ್ , ನಿರ್ದೇಶಕರಾದ ಮುಕ್ಕಣ್ಣ ಹೊಸಗೇರಿ, ಗವಿಸಿದ್ದನಗೌಡ ಅಂಗಡಿ, ಲೋಕನಗೌಡ ಮಾಲಿಪಾಟೀಲ, ಗಾಳೆಪ್ಪ ಗಂಟಿ, ಗವಿಸಿದ್ದಪ್ಪ ಕರ್ಕಿಹಳ್ಳಿ,ಅಣ್ಣಪ್ಪ ಅಂಗಡಿ, ಶಿವಮೂರ್ತಪ್ಪ ಬಿಡನಾಳ, ಪವಿತ್ರ ಹಿರೇಮಠ, ಚೈತ್ರ ಹುಡೇಜಾಲಿ, ಗಂಗಮ್ಮ ಚಿಕೇನಕೊಪ್ಪ, ಬ್ಯಾಂಕ್ ಪ್ರತಿನಿಧಿ ಶಿವಕುಮಾರ್ ಮೆಳ್ಳಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ವಿ. ಹಿರೇಮಠ ಸೇರಿದಂತೆ ಸರ್ವ ಸದಸ್ಯರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!