ಗದಗ-ಬೆಟಗೇರಿ,: ನಗರದ ಮಂಜು ಶಿಕ್ಷಣ ಸಂಸ್ಥೆಯ ಲಿಟಲ್ ಫಿಂಗರ್ಸ್ ಪೂರ್ವ ಪ್ರಾಥಮಿಕ ಮಂಜು ಪ್ರಾಥಮಿಕ/ ಪ್ರೌಢಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಯಿತು.
ಇದೇ ವೇಳೆ ನಿವೃತ್ತಿ ಶಿಕ್ಷಕಿಯಾದ ಶ್ರೀಮತಿ ಸರೋಜಾಬಾಯಿ ಹನುಮಾನಸಿಂಗ ರಜಪೂತ ರವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ನಿವೃತ್ತ ಶಿಕ್ಷಕಿ ಶ್ರೀಮತಿ ಸರೋಜಾಬಾಯಿ ಹೆಚ್. ರಜಪೂತ ರವರು ಮಾಲಾರ್ಪಣೆ ಮಾಡಿ ಸಂಸ್ಥೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರಾದವರು ತಮ್ಮ ವೃತ್ತಿ ಜೀವನದಲ್ಲಿ ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಯಾವ ರೀತಿಯಾಗಿ ಶ್ರಮಿಸಬೇಕು ಎಂದು ತಮ್ಮ ವೃತ್ತಿ ಜೀವನದ ಅನುಭವಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರಾದ ಶಂಕರಸಿಂಗ ಎಸ್. ರಜಪೂತ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಶಿಕ್ಷಕರನ್ನುದ್ದೇಶಿಸಿ ಜೀವನದಲ್ಲಿ ತಮ್ಮ ವೃತ್ತಿ ಜೀವನದ ಅನುಭವವನ್ನು ಶಿಕ್ಷಕರ ಜೊತೆ ಹಂಚಿಕೊಳ್ಳುವುದರ ಮೂಲಕ ಶಿಕ್ಷಕ ವೃತ್ತಿ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಮನದಟ್ಟು ಮಾಡಿದರು.ಶಿಕ್ಷಕರ ಪರವಾಗಿ ಸಹಶಿಕ್ಷಕಿಯಾದ ಶ್ರೀಮತಿ ಅನಿತಾ ಕೋರ್ಪಡೆ ಮಾತನಾಡಿ, ರಾಧಾಕೃಷ್ಣನ್ ಅವರ ಜೀವನ ಚರಿತ್ರೆ ಹಾಗೂ ಅವರು ನಡೆದು ಬಂದು ದಾರಿಯನ್ನು ತಮ್ಮ ನುಡಿಗಳ ತಿಳಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಂದ ಭಾಷಣ ಹಾಡು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರತಿ ವರ್ಷದಂತೆ ಶಿಕ್ಷಕರಿಗೆ ಸಂಸ್ಥೆಯ ವತಿಯಿಂದ ಕೊಡಮಾಡಲ್ಪಡುವ ಗೌರವವನ್ನು ಶಿಕ್ಷಕರಿಗೆ ಸಸಿಗಳನ್ನು, ಮೌಲ್ಯಯುತ ಪುಸ್ತಕ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆ ಮೇಲೆ ಸಂಸ್ಥೆಯ ಸಂಸ್ಥಾಪಕರಾದ ಶಂಕರಸಿಂಗ ಎಸ್. ರಜಪೂತ, ಶ್ರೀಮತಿ ಸರೋಜಾಬಾಯಿ ಹೆಚ್. ರಜಪೂತ, ಹನುಮಾನಸಿಂಗ ಟಿ. ರಜಪೂತ, ಪ್ರಾಥಮಿಕ ವಿಭಾಗದ ಪ್ರಧಾನ ಗುರುಗಳು, ವಿರೇಶ ಎಸ್. ಹುಳ್ಳಿ, ಪ್ರೌಢವಿಭಾಗದ ಪ್ರಧಾನ ಗುರುಮಾತೆ ಶ್ರೀಮತಿ ಲಕ್ಷ್ಮೀ ಎಸ್. ಮುಳ್ಳಾಳ, ಶಾಲಾ ಆಡಳಿತಾಧಿಕಾರಿಗಳಾದ ವಿನಾಯಕಸಿಂಗ ಎಸ್. ರಜಪೂತ, ವಿಶೇಷ ಶಾಲೆಯ ಪ್ರಧಾನ ಗುರುಗಳು, ವಿರೇಂದ್ರಸಿಂಗ ಎಸ್. ರಜಪೂತ ಉಪಸ್ಥಿತರಿದ್ದರು.
ಆರಂಭದಲ್ಲಿ ಸರ್ವರನ್ನು ಶ್ರೀಮತಿ ಶಿಲ್ಪಾ ಹರ್ಲಾಪೂರ ರವರು ಸ್ವಾಗತಿಸಿ ಹಾಗೂ ನಿರೂಪಿಸಿದರು. ಕೊನೆಯಲ್ಲಿ ಸಹಶಿಕ್ಷಕಿ ಶ್ರೀಮತಿ ಶುಕ್ಲಾ ಎಂ. ಕಮತರ ವಂದನಾರ್ಪಣೆಗೈದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ