December 23, 2024

AKSHARA KRAANTI

AKSHARA KRAANTI




ನವಲಿಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಆಚರಣೆ

ಕನಕಗಿರಿ,: ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಪ್ರಸಿದ್ದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾನ್ ಮಹಿಮಾ ಪುರುಷ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವವನ್ನು ಮಂಗಳವಾರ ಆಚರಿಸಲಾಯಿತು.

ಬೆಳಗ್ಗೆ ಮಹಾರುದ್ರಾಭಿಷೇಕ ಹಾಗೂ ಅಷ್ಠೋತ್ತರ ನಾಮವಳಿ ಪೂಜಾ ಕಾರ್ಯಗಳು ನೇರೆವೇರಿದವು.ದೇವಸ್ಥಾನದ ಪುರೋಹಿತರಾದ ಮಾರ್ಕಂಡಯ್ಯ ಸ್ವಾಮಿ ಮಾತನಾಡಿ, ಪೌರಾಣಿಕ ಹಿನ್ನೆಲೆ ಮತ್ತು ಪಂಡಿತ ವಿದ್ವಾಂಸರ ಗುರುಗಳ ಪ್ರಕಾರ, ವೀರಭದ್ರೇಶ್ವರ ಸ್ವಾಮಿ ಮಹಾನ್ ಶಕ್ತಿ ಶಾಲಿಯಾದ ಪರಮಶಿವನ ಕಡುಕೋಪದ ಪರಿಣಾಮವಾಗಿ ಉದಯಿಸಿದನು. ಪಂಚಭೂತಗಳಿಗೆ ಹಾಗೂ ಅಷ್ಟದಿಕ್ಕಪಾಲರಿಗೆ ವೀರಭದ್ರೇಶ್ವರ ಸ್ವಾಮಿ ಅಧಿಪತಿಯಾಗಿದ್ದಾನೆ, ವೀರಭದ್ರ ಸ್ವಾಮಿಯನ್ನು ಜಾಗೃತ ಹಾಗೂ ದೇವಾನು ದೇವತೆಗಳಲ್ಲಿ ಅತ್ಯಂತ ಶಕ್ತಿಯುಳ್ಳ ವೀರನನ್ನಾಗಿ ಬಣ್ಣಿಸಲಾಗಿದೆ. ಮಾರುತಿಗೆ ಲಿಂಗ ದೀಕ್ಷೆ ನೀಡಿ ಆಂಜನೇಯನ ಗುರುವಾಗಿರುವ ಹಿನ್ನೆಲೆ ತಿಳಿದು ಬರುತ್ತದೆ. ಹೀಗೆ ಧೈರ್ಯ, ಶಕ್ತಿಗಳಿಗೆ ಪ್ರತೀಕನಾಗಿರುವ ವೀರಭದ್ರನನ್ನು ಎಲ್ಲಾ ಸಮುದಾಯದವರು ಬಹಳ ಭಕ್ತಿ, ಶ್ರದ್ಧೆಗಳಿಂದ ಪೂಜಿಸುತ್ತಾರೆ. ಶ್ರೀವೀರಭದ್ರೇಶ್ವರನಿಗೆ ಮುಡಿಪಾದ ಹಲವಾರು ದೇವಸ್ಥಾನಗಳು ಭಾರತದಾದ್ಯಂತ ಕಂಡುಬರುತ್ತವೆ. ಇದರಲ್ಲಿ ಪುಣ್ಯ ಕ್ಷೇತ್ರ ನವಲಿ ಗ್ರಾಮವಾಗಿದ್ದು ಚಾಲುಕ್ಯರ ಶೈಲಿಯನ್ನ ಹೊಂದಿರುವ ದೇವಸ್ಥಾನವಾಗಿದೆ, ನಾನ ಜಿಲ್ಲೆಗಳು ಹಾಗೂ ಕೆಲ ರಾಜ್ಯಗಳ ಭಕ್ತರ ಸಮೂಹವನ್ನು ಹೊಂದಿದ್ದು ನವಲಿ ಅತ್ಯಂತ ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ ಎಂದರು.

ಜಯಂತೋತ್ಸವದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಈಶ್ವರಯ್ಯ ಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಭೀಮನಗೌಡ ಹರ್ಲಾಪೂರ, ದೇವಸ್ಥಾನದ ಅರ್ಚಕರಾದ ಜಡಿಸಿದ್ದಯ್ಯ , ವೀರೇಶ ಸ್ವಾಮಿ, ವೀರ ಗಂಗಾಧರಯ್ಯ, ಗ್ರಾಮದ ಹಿರಿಯರಾದ, ವೀರಭದ್ರಗೌಡ ಮಾಲಿಪಾಟೀಲ್, ಹಾಗೂ ಸದ್ಭಕ್ತರು ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!