December 23, 2024

AKSHARA KRAANTI

AKSHARA KRAANTI




ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಸಂಕಲ್ಪ ಮಾಡಿ

ನೂತನವಾಗಿ ಕೊಪ್ಪಳದಲ್ಲಿ
ಸಂಕಲ್ಪ ಕೋಚಿಂಗ್ ಕ್ಲಾಸ್ಸಸ್ ಪ್ರಾರಂಭ

ಕೊಪ್ಪಳ,: ಈ ನೆಲದ ಮಹಿಮೆ ಅಪಾರವಾದದ್ದು, ಭೂಮಿಗೆ ಬಿದ್ದ ಬೀಜ ಎದೆಗೆ ತಾಗಿದ ಅಕ್ಷರ ಮುಂದೊಂದು ದಿನ ಫಲ ನೀಡುತ್ತದೆ, ನಾವು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಸಂಕಲ್ಪ ಮಾಡಬೇಕು ಸೇoಟ್ ಫಾಲ್ಸ್ ಪದವಿ ಕಾಲೇಜ್ ಅದ್ಯಕ್ಷ ಬಸವರಾಜ ಸಂಕನಗೌಡ್ರ ಹೇಳಿದರು.

ಶನಿವಾರ ನಗರದ ಕಿನ್ನಾಳ‌ ರಸ್ತೆಯಲ್ಲಿರುವ
ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ಸಂಕಲ್ಪ ಕೋಚಿಂಗ್ ಕ್ಲಾಸ್ಸಸ್ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅಥಿತಿಗಳಾಗಿ ಸೇಂಟ್ ಫಾಲ್ಸ್ ಡಿಗ್ರಿ ಕಾಲೇಜ್ ಪ್ರಾಂಶುಪಾಲರಾದ ನೀಲಪ್ಪ ಮಾತನಾಡಿ, ಬುದ್ಧಿ ಮತ್ತು ಭಾವಗಳ ವಿಕಾಸವೇ ಶಿಕ್ಷಣ. ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ಪೂರಕ ವಾತಾವರಣ ಈಗಿನ ಸಂದರ್ಭದಲ್ಲಿ ಅತಿ ಅವಶ್ಯವಿದೆ ಎಂದರು.

ಪ್ರೋ. ಶರಣಪ್ಪ ಎಸ್. ಗೋಗೇರಿ, ಮಾತನಾಡಿ, ನಾನು ಪಿಯುಸಿಯಲ್ಲಿ ವಿಜ್ಞಾನ ವಿದ್ಯಾರ್ಥಿ. ನಂತರ ಎಂ.ಬಿ.ಎ., ಎಲ್.ಎಲ್.ಬಿ. ಮಾಡಿದೆ. ನನಗೆ ಗಣಿತ ಮತ್ತು ವ್ಯವಹಾರ, ಮತ್ತು ಮ್ಯಾನೇಜ್ಮೆಂಟ್ ವಿಷಯ ಅಂದರೆ ಬಹಳ ಇಷ್ಟ, ನಾನು ಕೆಲವು ವರ್ಷಗಳ ಹಿಂದೆ ಎಸ್.ಜಿ.ಕಾಲೇಜ್‌ನಲ್ಲಿ ಉಪನ್ಯಾಸ ಕೊಟ್ಟು ಬರುತ್ತಿದ್ದೆ ಎಂದು ಮೆಲಕು ಹಾಕಿದರು. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಲು ಸಲಹೆ ನೀಡಿದರು.

ಉಪನ್ಯಾಸಕರಾದ ರಾಘವೇಂದ್ರ ಮಾತನಾಡಿ, ಪ್ರಾಥಮಿಕ ಶಾಲಾ ಹಂತ ವಿದ್ಯಾರ್ಥಿಗಳಿಗೆ ಭದ್ರ ಬುನಾದಿ ಹಾಕಲು ಈಗಿನ NEP / SEP / State / CBSE ಪಠ್ಯಕ್ರಮ ಬೊeಧಿಸಲು ಅನುಭವ ಹೊಂದಿರುವ ಶಿಕ್ಷಕರ ಅವಶ್ಯಕತೆ ಇದೆ ಎಂದರು. ಶ್ರೀಮತಿ ಎ.ಎಂ. ಶ್ರೀದೇವಿ ಮಾತನಾಡಿ, ಶಿಕ್ಷಣವೆ ಜೀವನ, ಜೀವನವೇ ಶಿಕ್ಷಣ ಎಂದರು.

ಸಂಗೀತ ಶಿಕ್ಷಕರಾದ ಪರಶುರಾಮ್ ದಲಬಂಜನ್ ಸಂಗೀತ ಸೇವೆಸ್ಸಲ್ಲಿಸಿದ ನಂತರ ಮಾತನಾಡಿ, ಸಂಕಲ್ಪ ಅನ್ನುವ ಹೆಸರು ಬಹಳ ಚೆನ್ನಾಗಿದೆ ತಾವೆಲ್ಲರೂ ದೃಢ ಸಂಕಲ್ಪ ದೊಂದಿಗೆ ಮುನ್ನುಗ್ಗಿ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ, ನಿಮ್ಮ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಮಹೇಶ್ವರ ಪ. ಪೂ.ಕಾಲೇಜ್,ಇಟಗಿಯ ನಿವೃತ್ತ ಮುಖ್ಯೋಪಾಧ್ಯಯ ಬಿ.ಎಂ.ಹಳ್ಳಿ ಮಾತನಾಡಿ, ಡಿವಿಜಿ ರವರ ಮಂಕುತಿಮ್ಮನ ಕಗ್ಗದಲ್ಲಿನ ಮಾತನ್ನು ಉದ್ದರಿಸಿ, ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆ ಯಾಗು, ದೀನ ದುರ್ಬಲರಿಗೆ ಬೆಲ್ಲ ಸಕ್ಕರೆಯಾಗು, ಎಲ್ಲರೊಳಗೊಂದಾಗು ಮಂಕುತಿಮ್ಮ, ಖಡ್ಗಕ್ಕಿಂತ ಹರಿತವಾದದ್ದು ಲೇಖನಿ, ಒಂದು ಹನಿ ಮಷಿ ಕೋಟಿ ಜನರಿಗೆ ಬಿಸಿತಲುಪಿಸಬಲ್ಲದು ಅದು ನೀವು KAS,/ IAS / KPSC / UPSC ಪರೀಕ್ಷೆಯಲ್ಲಿ ತೇರ್ಗಡೆ ಯಾಗಬೇಕಾದರೆ ಇಂತಹ ಕೋಚಿಂಗ್ ಕ್ಲಾಸಸ್ ಅವಶ್ಯಕತೆ ಇದೆ. ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ಕೊಡುವ ಸಂಕಲ್ಪ ಮಾಡಿರುವ ಸಂಕಲ್ಪ ಶಿಕ್ಷಣ ಸಂಸ್ಥೆಯ ಸಿಬ್ಬಂದಿಯವರನ್ನು ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಸಂತೋಷ ಬಿ.ಹಳ್ಳಿ ಮಾತನಾಡಿ, ಶಿಕ್ಷಕ -ವಿದ್ಯಾರ್ಥಿಗಳು ತರಗತಿಯಲ್ಲಿ ಇರಬೇಕು ಇಲ್ಲವೇ ಇಂತಹ ಬೇಸಿಗೆ ತರಬೇತಿಯಲ್ಲಿ ತರಬೇತಿ ಪಡೆಯಬೇಕು. ನಂತರ ರೆಗ್ಯುಲರ್ ಆಗಿ ಅಭ್ಯಾಸ ಮಾಡಬೇಕು. ನಾವು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟಿದ್ದು, ಈಗಾಗಲೇ ನನ್ನ ಕೈಯಲ್ಲಿ ಧಾರವಾಡದಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು, ಸೈನಿಕ್, ಕೊಡಗು ಸೈನಿಕ, ಕಿತ್ತೂರು ಹಾಗೂ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಎಂ.ಕೆ.ಹಿರೇಮಠ್, ಎವರ್ ಈಟ್ ಮಸಾಲಾ ಫ್ಯಾಕ್ಟರಿ ಭಾಗ್ಯನಗರ ಶ್ರೀಮತಿ ಗೀತಾ ಎಸ್. ಗೋಗೇರಿ, ಶಿಕ್ಷಕರಾದ ಶ್ರೀದೇವಿ ಅರಳೆಲಿಮಠ, ಹುಸೇನ್ಸಾಬ್ ಗುಡಿಹಿಂದಿನ ಉಪನ್ಯಾಸಕರು, ಶೇಖರ್ ಎಲ್. ಮಹಾಂತ್ , ತಬಲವಾದಕರು, ಮಾಲತೇಶ್ ಖಾನಾವಳಿಯ ಶಿವನಗೌಡ ಎಲ್. ಶಾಂತಗಿರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕಾರ್ಯಕ್ರಮದ ಮೊದಲಿಗೆ ಕು.ಪೂಜಾ ಗಂಟಿ ಪ್ರಾರ್ಥನಾ ಗೀತೆಯನ್ನು ಹಾಡಿದರು, ಸ್ವಾಗತ ಮತ್ತು ಪೂಜಾ ಕಾರ್ಯಕ್ರಮವನ್ನು ಶ್ರೀಮತಿ ಗೀತಾ ಎಸ್. ಜಿ. ಮತ್ತು ಶ್ರೀಮತಿ ನವ್ಯಾ ಎಂ.ಎನ್ ನೆರವೇರಿಸಿದರು. ಮಹಾಂತೇಶ ಬಿ ನೆಲಾಗಣಿ ನಿರೂಪಿಸಿ, ಲಿಂಗರಾಜ್ ಎಸ್. ಶಾಂತಗಿರಿ ವಂದಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!