ಗದಗ,: ಸ್ಥಳೀಯ ಮುಂಡರಗಿ ರಸ್ತೆಯಲ್ಲಿರುವ ಮಹೇಶ್ ಪಬ್ಲಿಕ್ ಸ್ಕೂಲ್‍ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲಾ ಮಕ್ಕಳು ಶ್ರೀ ಕೃಷ್ಣನ ವೇಷಧಾರಿಯಾಗಿ ಹಾಗೂ ರಾಧೆಯ ವೇಷಧಾರಿಯಾಗಿ ಜನಮನ ಸೆಳೆದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಶ್ರೀ ಕೃಷ್ಣನ ಮೂರ್ತಿಗೆ ಪೂಜೆ ನೆರವೇರಿಸುವುದರ ಮೂಲಕ ಹಾಗೂ ತೊಟ್ಟಿಲು ಪೂಜಿಸುವ ಮೂಲಕ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ವಿಜಯಲಕ್ಷ್ಮಿ, ಸಹ ಶಿಕ್ಷಕಿರಾದ ಶ್ರೀಮತಿ ಸವಿತಾ ಲಲಿತ, ಸಿರಿಗೌರಿ, ಐಶ್ವರ್ಯ ಸವಿತಾ ಗದ್ದಿಗೌಡರ್, ಭಾಗ್ಯಶ್ರೀ ಹಿರೇಮಠ, ಶಾರದಾ, ತ್ರಿವೇಣಿ ಹಾಗೂ ಸಹಶಿಕ್ಷಕರಾದ ಸಚಿನ್ ಖೋಡೆ ಭಾಗವಹಿಸಿದ್ದರು. ಮಕ್ಕಳು ರಾಧಾಕೃಷ್ಣರ ವೇಷ ಧರಿಸಿ ಸಂಭ್ರಮಿಸಿದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ