ಕೊಪ್ಪಳ,: ಬ್ಯಾಂಕಿಗೆ ಸಾಕಷ್ಟು ಪೈಪೋಟಿ ಹಾಗೂ ಹಲವಾರು ಒತ್ತಡಗಳು ನಡುವೆ ಕೂಡಾ ಈ ಒತ್ತಡಗಳನ್ನು ನಿಭಾಯಿಸಿ ಪೈಪೋಟಿಯನ್ನು ಎದುರಿಸಿ ಬ್ಯಾಂಕಿನ ವ್ಯವಹಾರಗಳು ಉತ್ತಮ ರೀತಿಯಲ್ಲಿ ಬೆಳೆಯಲು ಅತ್ಯಂತ ಅಗತ್ಯವಾಗಿ ಬೇಕಾಗಿರುವ ಗ್ರಾಹಕರ ಬೆಂಬಲ ನೆನಪಿನಲ್ಲಿಟ್ಟುಕೊಂಡು ಅವರ ಅಗತ್ಯಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಬ್ಯಾಂಕು ಸ್ಪಂದಿಸಿ ಪ್ರಗತಿ ಹೊಂದಿ ಎಲ್ಲ ರೀತಿಯ ಯಶಸ್ಸು ಗಳಿಸಿ ಮುನ್ನಡೆಯುತ್ತಿದೆ ಎಂದು ಶ್ರೀಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರಾಜಶೇಖರಗೌಡ ಆಡೂರ ಹೇಳಿದರು.
ರವಿವಾರ ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಶ್ರೀಗವಿಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 91ನೇ ವಾರ್ಷಿಕ ವರದಿ ವಾಚಿಸಿ ಅವರು ಮಾತನಾಡಿದರು.
ಗ್ರಾಹಕರೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿರುವುದು ಆದ್ಯ ಕರ್ತವ್ಯವೆಂದು ಅರಿತಿರುವ ಆಡಳಿತ ಮಂಡಳಿ, ಸಿಬ್ಬಂದಿಯವರು, ಸದಸ್ಯರು ಹಾಗೂ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿಕೊಂಡು ಉತ್ತಮ ಸೇವೆಯನ್ನು ನೀಡಲು ವಿಶೇಷ ಗಮನ ನೀಡುತ್ತಿದ್ದೇವೆ. ಗ್ರಾಹಕರ ಸೇವೆಯಲ್ಲಿ ತನ್ನನ್ನು ತಾನು ಪರಿಣಾಮಕಾರಿಯಾಗಿ ತೊಡಗಿಸಿಕೊಂಡ ಬ್ಯಾಂಕು ನಮ್ಮದು ಎಂದು ತಿಳಿಸಲು ಹೆಮ್ಮೆಯೆನಿಸುತ್ತದೆ. ಪ್ರಸಕ್ತ ಸಾಲಿಗೆ ಶೇ.13.00 ರಷ್ಟು ಡಿವಿಡೆಂಡ್ ಪಾವತಿಸಲು ಕಾರ್ಯಕಾರಿ ಮಂಡಳಿಯವರು ಶಿಫಾರಸ್ಸು ಮಾಡಿರುತ್ತಾರೆ. ಕಾರಣ ಇದು ಅಭಿವೃದ್ಧಿಯ ಸಂಕೇತವಾಗಿದ್ದು ಅನುಮತಿ ಕೊಡಲು ವಿನಂತಿಸುತ್ತೇನೆ, ಹಲವರು, ಹಲವು ವಿಧದಲ್ಲಿ ಬ್ಯಾಂಕಿನ ಪ್ರಯೋಜನವನ್ನು ಪಡೆಯುತ್ತಿದ್ದು, ಸಂತೋಷದ ಸಂಗತಿಯೆಂದರೆ ಬ್ಯಾಂಕಿನ ಆರ್ಥಿಕ ಸಹಾಯ ಪಡೆದ ಅನೇಕ ಗ್ರಾಹಕರು ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆಂದು ತಿಳಿಸಲು ಹರ್ಷವೆನಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ನಮ್ಮ ಬ್ಯಾಂಕಿನ ಸಾಲಗಾರ ಸದಸ್ಯರು ಅವಧಿಯೊಳಗಾಗಿ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದ ಪ್ರಯುಕ್ತ ದಿನಾಂಕ 31.03.2024ಕ್ಕೆ ಗ್ರಾಸ್ ಎನ್.ಪಿ.ಎ. ಶೇ. 1.77 ಹಾಗೂ ನಿವ್ವಳ ಎನ್ ಪಿ ಎ ಶೇ. 0.0 ಆಗಿರುತ್ತದೆ, ಪ್ರಾರಂಭದಿಂದಲೂ ಉತ್ತಮ ಪ್ರಗತಿಯ ಸಂಪ್ರದಾಯವನ್ನು ಹೊಂದಿರುವ ಬ್ಯಾಂಕು ಈ ವರ್ಷ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿ ಗ್ರಾಹಕರ, ಶೇರುದಾರರ ಹಾಗೂ ಕೊಪ್ಪಳ ಜನತೆಯ ಹೆಗ್ಗಳಿಕೆಯನ್ನು ಕಾಯ್ದುಕೊಂಡಿದೆ. ನಮ್ಮ ಬ್ಯಾಂಕು “ಕೋರ್ಬ್ಯಾಂಕಿಗ್” ವ್ಯವಸ್ಥೆಯನ್ನು ಹೊಂದಿದ್ದು, ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಲಾಗಿದೆ ಅಲ್ಲದೇ ಐಡಿಬಿಐ ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಂಡು ಐಎಫ್ಎಸ್ಸಿ ಕೋಡ್ IBKL01196SC ಪಡೆದು ಗ್ರಾಹಕರಿಗೆ RTGS/NEFT ಸೌಲಭ್ಯ ಒದಗಿಸಲಾಗುತ್ತಿದೆ. ಸಿ.ಟಿ.ಎಸ್.ಚೆಕ್ ಮತ್ತು ಎಟಿಎಂ, ಸೌಲಭ್ಯವನ್ನು ಸಹ ಹೊಂದಲಾಗಿದೆ, ಜಿಲ್ಲೆಯಲ್ಲಿ ಮಹಿಳಾ ಬ್ಯಾಂಕ್ ಸ್ಥಾಪನೆ ಮಾಡುವ ಗುರಿಯನ್ನು ಸಹ ಹೊಂದಲಾಗಿದೆ, ಬ್ಯಾಂಕ್ ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ನೀಡುವುದು ಎಂದರು.ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬ್ಯಾಂಕಿನ ಬಗ್ಗೆ ಅನೇಕ ಗ್ರಾಹಕರು ತಮ್ಮ-ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ವೇದಿಕೆಯ ಮೇಲೆ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ವಿಶ್ವನಾಥ ಅಗಡಿ, ಬಸವರಾಜ್ ಶಹಪೂರು, ರಾಜೇಂದ್ರಕುಮಾರ ಶೆಟ್ಟರ್, ಶಿವಕುಮಾರ ಪಾವಲಿಶೆಟ್ಟರ್, ಶಿವರಡ್ಡಿ ಭೂಮಕ್ಕನವರ್, ಗವಿಸಿದ್ದಪ್ಪ ತಳಕಲ್, ರಮೇಶ ಕವಲೂರು, ನಾಗರಾಜ್ ಅರಕೇರಿ, ಸುಮಂಗಲಾ ಸೋಮಲಾಪೂರ, ಸೈಯದಾ ಶೈನಾಜಬೇಗಂ, ಜಯಶ್ರೀ ಬಬಲಿ ಪ್ರಧಾನ ವ್ಯವಸ್ಥಾಪಕ ಪ್ರಭಾಕರ ಜೋಷಿ,ಬ್ಯಾಂಕಿನ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿದ್ದೆಕೊಪ್ಪ ಸೇರಿದಂತೆ ಸಿಬ್ಬಂದಿವರ್ಗದವರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ