ಮೂರುವರೆ ದಶಕಗಳ ಬಳಿಕ ಅಲ್ಪಸಂಖ್ಯಾತ ಸಮುದಾಯದ ನಗರಸಭೆ ಸದಸ್ಯನಿಗೆ ಅಧ್ಯಕ್ಷ ಪಟ್ಟ
ಕೊಪ್ಪಳ,: ನಗರಸಭೆ ಕೊಪ್ಪಳದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಬುಧವಾರ ಜರುಗಿತು.
ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 3ನೇ ವಾರ್ಡ್ ಸದಸ್ಯರಾದ ಅಮ್ಮದ್ ಪಟೇಲ್ ಅಧ್ಯಕ್ಷರಾದರೆ, ಬಿಜೆಪಿ ಪಕ್ಷದ 2ನೇ ವಾರ್ಡ್ ಸದಸ್ಯರಾದ ಅಶ್ವಿನಿ ಗದಗಿನಮಠ ಉಪಾಧ್ಯಕ್ಷರಾದರು.ಕೊಪ್ಪಳ ನಗರಸಭೆ ಸದಸ್ಯರ ಒಟ್ಟು 31 ಪೈಕಿ, ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದು, ಒಟ್ಟು 29. ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿ ನಗರಸಭೆ ಬಲ 32 ಇತ್ತು. 2ನೇ ವಾರ್ಡ್ ಬಿಜೆಪಿ ಪಕ್ಷದ ಸದಸ್ಯರಾದ ಅಶ್ವಿನಿ ಗದಗಿನಮಠ ಕಾಂಗ್ರೆಸ್ ಬೆಂಬಲಿಸಿ ಉಪಾಧ್ಯಕ್ಷ ಸ್ಥಾನ ಪಡೆಯುವ ಮಾಹಿತಿ ತಿಳಿದು ಬಿಜೆಪಿ ಪಕ್ಷ,16ನೇ ವಾರ್ಡ್ ಸದಸ್ಯರಾದ ಸೋಮಣ್ಣ ಹಳ್ಳಿ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ 26ನೇ ವಾರ್ಡ್ ಸದಸ್ಯರಾದ ದೇವಕ್ಕ ಕಂದಾರಿ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿ ತನ್ನ 9 ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು.
ಆದರೆ, ಬುಧವಾರ ವಿಪ್ ಗೆ ಕ್ಯಾರೆ ಎನ್ನದೆ ಬಿಜೆಪಿ ಪಕ್ಷದ 3 ಮಹಿಳಾ ಸದಸ್ಯರಾದ 2ನೇ ವಾರ್ಡ್ ಅಶ್ವಿನಿ ಗದಗಿನಮಠ, 9ನೇ ವಾರ್ಡ್ ಬಸಮ್ಮ ದಿವಟರ್, 30ನೇ ವಾರ್ಡ್ ಅನ್ನಪೂರ್ಣಮ್ಮ ಕಾಂಗ್ರೆಸ್ ಪಕ್ಷ ಬೆಂಬಲಿಸಿದರು. ಇದರಿಂದ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬಲ 6 ಮತ್ತು ವಿಧಾನ ಪರಿಷತ್ ಸದಸ್ಯರು ಹೇಮಲತಾ ನಾಯಕ ಮತ ಸೇರಿ ಬಿಜೆಪಿ ಅಭ್ಯರ್ಥಿಗಳು 7 ಮತ ಪಡೆದು ಪರಾಭವಗೊಂಡರು. ಕಾಂಗ್ರೆಸ್ ಪಕ್ಷ 14 ಸದಸ್ಯರು, ಜೆಡಿಎಸ್ ನ 2, ವೆಲ್ಪೆರ್ ಪಾರ್ಟಿ, 3 ಪಕ್ಷೇತರ ಸೇರಿ 4, ಶಾಸಕರು ಸಂಸದರು ಸೇರಿ ಒಟ್ಟು 25 ಮತ ಪಡೆದು ಅಧ್ಯಕ್ಷರಾಗಿ ಅಮ್ಮದ್ ಪಟೇಲ್, ಉಪಾಧ್ಯಕ್ಷರಾಗಿ ಅಶ್ವಿನಿ ಗದಗಿನಮಠ ಆಯ್ಕೆಯಾಗಿದ್ದಾರೆ.
– ಶಿವಕುಮಾರ್ ಹಿರೇಮಠ, ಪತ್ರಕರ್ತರು, ಕೊಪ್ಪಳ
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ