December 23, 2024

AKSHARA KRAANTI

AKSHARA KRAANTI




ವಿಶ್ವ ಛಾಯಾಗ್ರಹಣ ದಿನಾಚರಣೆ

ಕೊಪ್ಪಳ,: ತಾಲೂಕ ಫೋಟೋ ಮತ್ತು ವಿಡಿಯೋಗ್ರಾಫರ ಸಂಘದಿಂದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಬಾಲಾಜಿ ಪಂಕ್ಷನ್ ಹಾಲ್ ನಲ್ಲಿ ಸೋಮವಾರ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ಜಿಲ್ಲಾ ಛಾಯಾಗ್ರಹಾಕರ ಸಂಘದ ಅಧ್ಯಕ್ಷರಾದ
ಕೆ. ಟಿ ಶ್ರೀನಿವಾಸ್ ಮಾಡಿದರು, ಕೊಪ್ಪಳ ತಾಲೂಕ ಫೋಟೋ ಹಾಗೂ ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷರಾದ ಬಸವರಾಜ ಕಂಪ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಸುಧಾ ಸಿ ಗದಗ್, ಜಿಲ್ಲಾ ಪಂಚಾಯತ್ ಸಿಎಓ ಅಮೀನ್ ಎಂ ಅತ್ತಾರ್, ಜಿಲ್ಲಾ ಛಾಯಾಗ್ರಹಣ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ವಸ್ತ್ರದ, ಕೊಪ್ಪಳ ತಾಲೂಕು ಫೋಟೋ ಹಾಗೂ ವಿಡಿಯೋ ಗ್ರಾಪರ್ ಸಂಘದ ಗೌರವ ಅಧ್ಯಕ್ಷರಾದ ಅಶೋಕ ಹುಣಸಿಗಿಡದ ಭಾಗವಹಿಸಿದ್ದರು.

ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಮೊದಲಿಗೆ ಬೈಕ್ ರ್‍ಯಾಲಿ ಮಾಡಲಾಯಿತು.
ಆ. 11 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಏರ್ಪಡಿಸಲಾಗಿತ್ತು. ಕ್ರಿಕೆಟ್ ನಲ್ಲಿ ಪಂದ್ಯದಲ್ಲಿ ವಿಜೇತರಾದವರಿಗೆ ಛಾಯಾ ಚಾಂಪಿಯನ್ ತಂಡಕ್ಕೆ ಪ್ರಶಸ್ತಿ ನೀಡಲಾಯಿತು. ಹಿರಿಯ ಛಾಯಾಗ್ರಹಾಕರಿಗೆ ಸನ್ಮಾನ ಮತ್ತು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

ಬಿಸರಹಳ್ಳಿ ಹಿರಿಯ ಛಾಯಾಗ್ರಹಕರಾದ ರುದ್ರಯ್ಯ ಬ್ರಹ್ಮನಮಠ, ಪಂಡಿತಾರಾಧ್ಯ ಹಿರೇಮಠ್ ಕೊಪ್ಪಳ ರವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!