ಕೊಪ್ಪಳ,: ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಬಿಸರಳ್ಳಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕೊಪ್ಪಳ ಜಿಲ್ಲೆಯ ರಂಗಭೂಮಿ ಕಲಾವಿದರು ಹಾಗೂ ಬಿಸರಳ್ಳಿ ಗ್ರಾಮಸ್ಥರು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರ ಘೋಷಿಸಿರುವ ಕೊಪ್ಪಳ ಜಿಲ್ಲೆಯ ನಾಟಕ ಅಕಾಡೆಮಿ ಪ್ರಶಸ್ತಿಗೆ ಪುರಸ್ಕೃತರಾದ ಸಂಗೀತ ನಿರ್ದೇಶಕ ಹುಸೇನಸಾಬ ಮನ್ನಾಪೂರ, ರಂಗ ಕಲಾವಿದರಾದ , ಕೊಟ್ರಯ್ಯಸ್ವಾಮಿ ಹಿರೇಮಠ ಹುಲಗಿ, ತೋಟಪ್ಪ ಕಾಮನೂರ, ಹ್ಯಾಟಿ, ಹಾಗೂ ವಿಜಯನಗರ ಜಿಲ್ಲೆಯ ರೇಣುಕಾ ಬಾವಳ್ಳಿ ರವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಕಲಾವಿದ ರುದ್ರಪ್ಪ ಬೃಂಗಿ ಹಾಗೂ ನಿವೃತ್ತ ಶಿಕ್ಷಕ ಎನ್.ಎಂ. ಹಾರುಗೇರಿ , ನಿವೃತ್ತ ಯೋಧ ಗುರಯ್ಯ ಬೃಹನ್ಮಠ ರವರನ್ನು ಜಿಲ್ಲೆಯ ಕಲಾವಿದರ ಬಳಗ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಹಿರಿಯ ರಂಗಕಲಾವಿದ ಚಾಂದಪಾಷ ಕಿಲ್ಲೇದಾರ, ಕಲಾವಿದರಾದ ಶಿವಪುತ್ರಪ್ಪ ಶಿವಸಿಂಪಿ, ಪರಮೇಶಗೌಡ್ರ ಹನುಮನಟ್ಟಿ, ಬಸವರಾಜ ಇಳಿಗೇರ, ಶಿವು ಹನುಮನಹಳ್ಳಿ, ಮುತ್ತಣ್ಣ ವಿಶ್ವಕರ್ಮ, ಪ್ರಕಾಶ ಸಶಿ ಕಬಲಾಹುಸೇನ, ಮರ್ಧಾನಲಿ, ಚಂದ್ರು ಬಡಿಗೇರ, ಶಂಕ್ರಪ್ಪ ಭಜನಾ ಕಲಾವಿದರು, ಪರಶುರಾಮ ಡಂಬಳ ಇದ್ದರು. ಕಾರ್ಯಕ್ರಮ ಪರಶುರಾಮ ಡಂಬಳ ನಿರೂಪಿಸಿ, ಮುತ್ತಣ್ಣ ವಿಶ್ವಕರ್ಮ ವಂದಿಸಿದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ