ಗದಗ,: ತಾಲೂಕ ಕಳಸಾಪೂರ ಗ್ರಾಮದ ಬಸವ ಕೇಂದ್ರ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಗ್ರಾಮದ ಹಿರಿಯರಾದ ಶರದರಾವ ಚ. ಹುಯಿಲಗೋಳ ಇವರು ನೆರವೇರಿಸಿಕೊಟ್ಟರು.
ಮೊದಲಿಗೆ ರಾಷ್ಟ್ರಗೀತೆ ಜರುಗಿತು. ವೇದಿಕೆ ಮೇಲೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕರ ಸಿಬ್ಬಂದಿ ಹಾಗೂ ಶಾಲೆಯ ಮಕ್ಕಳು ಪಥಸಂಚಲನ ಜೊತೆಗೆ ಭಾರತ ಮಾತಾಕೀ ಜೈ, ವಂದೇ ಮಾತರಂ ಎಂಬ ದಾರಿ ಉದ್ದಕ್ಕೂ ಘೋಷಣೆ ಕೂಗುತ್ತ ಜನಮನಸೆಳೆದರು.
ನಂತರ ವೇದಿಕೆಯ ಮೇಲೆ ಉಪಸ್ಥಿತರಾದ ಬಸವಕೇಂದ್ರದ ಕಾರ್ಯಾಧ್ಯಕ್ಷರು, ಕನ್ನಡ ಅಭಿಮಾನಿಗಳು, ರಾಷ್ಟ್ರಾಭಿಮಾನಿಗಳಾದ ಮಲ್ಲಿಕಾರ್ಜುನ ಗ. ಖಂಡಮ್ಮನವರ ಮಾತನಾಡಿ, ಇಂದಿನ ಮಕ್ಕಳು ದೇಶಕ್ಕಾಗಿ ಭಾವನಾತ್ಮಕವಾಗಿ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ನಮ್ಮ ನಾಡಿನ ಯೋಧರು, ವೈದ್ಯರು, ರೈತರು, ದೇಶದ ಬೆನ್ನೆಲುವಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸುತ್ತಾರೆ. ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ ನಾಯಕರುಗಳಾದ ವೀರರಾಣಿ ಕಿತ್ತೂರ ಚನ್ನಮ್ಮ, ಓನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಭಗತಸಿಂಗ್, ಸರ್ದಾರ ವಲ್ಲಭಬಾಯಿ ಪಟೇಲ, ಬಾಲಗಂಗಾಧರ ತಿಲಕ, ಸುಭಾಸಚಂದ್ರಭೋಸ್, ಲಾಲಬಹದ್ದೂರಶಾಸ್ತ್ರಿ ಡಾ. ಬಿ. ಆರ್. ಅಂಬೇಡ್ಕರ ಸೇರಿದಂತೆ ಇನ್ನೂ ಅನೇಕ ಮಹನೀಯರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಮ. ಖಂಡಮ್ಮನವರ, ಚಂದ್ರಶೇಖರ ಮ. ಖಂಡಮ್ಮನವರ, ಜಯಶ್ರೀ ಚ. ಖಂಡಮ್ಮನವರ, ಶ್ರೀಮತಿ ಶಿಲ್ಪ ಬ. ಖಂಡಮ್ಮನವರ, ಶ್ರೀಮತಿ ಅನಸೂಯಾ ಎಂ. ಸಂತೋಷ ನಾಯ್ಕರ, ಶರಣಪ್ಪ ಹುಯಿಲಗೋಳ, ಶಾಲಾ ಮಕ್ಕಳು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ