ಗದಗ,: ಶ್ರೀಲಕ್ಕಮ್ಮದೇವಿ ಕಲಾ ಪೋಷಕ ಸಂಘ(ರಿ) ಬ್ಯಾಕೋಡ ತಾ.ರಾಯಭಾಗ ಜಿ. ಬೆಳಗಾವಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಾನಪದ ಲೋಕೋತ್ಸವವು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ಗದುಗಿನ ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಗೀತ ಕಲಾವಿದರಾದ ಶ್ರೀಮತಿ ಪೂಜಾ ಬೇವೂರ ಅವರಿಗೆ ನ್ಯಾಷನಲ್ ಅಚೀವ್ಮೆಂಟ್ ಗ್ಲೋಬಲ್ ಅವಾರ್ಡ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ೧೦೮ ಪ.ಪೂ. ಶ್ರೀ ಷ.ಬ್ರ. ಡಾ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಭೂಕೈಲಾಸ ಮೇಲುಗದ್ದುಗೆ ಹಿರೇಮಠ ಸಂಸ್ಥಾನ ಇಟಗಿ –ಚಿಕ್ಕಮ್ಯಾಗೇರಿ ವಹಿಸಿದ್ದರು. ಮಡ್ಡಿಕೆರೆ ಗೋಪಾಲ್ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು, ಅಧ್ಯಕ್ಷತೆಯನ್ನು ಶ್ರೀ ವಿ. ಗುರುಮೂರ್ತಿ ಸುನಾಮಿ ಮಾರಕಾಸ್ತ ಚಲನಚಿತ್ರದ ನಿರ್ದೇಶಕರು, ಜಿಲ್ಲಾಧ್ಯಕ್ಷರು, ಕನ್ನಡ ಫಿಲಂ ಚೇಂಬರ ಬಳ್ಳಾರಿ ವಹಿಸಿದ್ದರು. ನೇತೃತ್ವವನ್ನು ಸಿದ್ರಾಮ ಎಮ್. ನಿಲಜಗಿ ಅಧ್ಯಕ್ಷರು, ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ, ಬ್ಯಾಕೂಡ (ಬೆಳಗಾವಿ) ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಟಿ. ತ್ಯಾಗರಾಜು ಉಪಾಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು, ಡಾ. ಸಿದ್ದಣ್ಣ ಬಾಡಗಿ ರಾಜ್ಯ ಸಹಕಾರ್ಯದರ್ಶಿಗಳು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ, ಬೆಂಗಳೂರು, ಜಡೇಶ ಎಮ್ಮಿಗನೂರ ಖ್ಯಾತ ಜನಪದ ಕಲಾವಿದರು ಬಳ್ಳಾರಿ, ಆನಂದ ನಾಯಕ್ ಚಿಕ್ಕಣ್ಣ ಮಾಡ್ಲಿಂಗ್ ಕಲಾವಿದರು ಬೆಂಗಳೂರು, ಶ್ರೀ ಮ. ಗು. ಸದಾಶಿವಯ್ಯ ಅಧ್ಯಕ್ಷರು, ಶ. ಸಾ. ಪ. ನ. ಘ. ಮೈಸೂರು, ಸ್ವರೂಪ ನಾಯಕ ಧಾರವಾಹಿಗಳ ಸಹ ನಿರ್ದೇಶಕರು ಮೈಸೂರು, ಕು. ನಾಗೇಶ ಎಲ್.ಎಂ (ಅಥರ್ವ) ಸಹ ನಿರ್ದೇಶಕರು ಮತ್ತು ಕಿರುತೆರೆ ನಟರು ಮಂಡ್ಯ ಉಪಸ್ಥಿತರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ