December 23, 2024

AKSHARA KRAANTI

AKSHARA KRAANTI




ಸರಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿಯ ಯೋಜನೆಯ ಭಾಗ್ಯ: ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ,: ಸರಕಾರಿ ನೌಕರರಿಗೆ ಹಾಗೂ ಅವರ ಅವಲಂಭಿತ ಕುಟುಂಬದವರಿಗೆ ಜ್ಯೋತಿ ಸಂಜೀವಿನಿ ಯೋಜನೆಯ ಭಾಗ್ಯ ಎಲ್ಲರಿಗೂ ಲಭ್ಯವಾಗುವಂತಾಗಲಿ ಎಂದು ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ ಎಂ.ಪಿ.ಪ್ಯಾಲೆಸ್ ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಜ್ಯೋತಿ ಸಂಜೀವಿನಿ ಕಾರ್ಡ ವಿತರಣೆ ಹಾಗೂ ತಾಲೂಕ ಮಟ್ಟದ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಸರಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ತೀವ್ರ ತರಹದ ಖಾಯಿಲೆಗೆ ಒಳಗಾದ ಸಮಯದಲ್ಲಿ ಅವರು ಗುಣಮುಖರಾಗಲು ಹೆಚ್ಚಿನ ಹಣವನ್ನು ವೆಚ್ಚ ಮಾಡಬೇಕಿತ್ತು. ವೆಚ್ಚ ಮಾಡಿದ ಹಣವನ್ನು ಹಿಂಬರಿಸಬೇಕಾದರೆ ಅನೇಕ ತೊಂದರೆಗಳ ಜೊತೆಯಲ್ಲಿ ಕಡಿಮೆ ಮೊತ್ತ ಹಣ ಸಂದಾಯವಾಗಿತ್ತಿತ್ತು. ಇದನ್ನು ಅರಿತ ಸರಕಾರ 7 ತೀವ್ರ ತರಹದ ಖಾಯಿಗಳಿಗೆ ನೌಕರರ ಒಳಗಾದ ಸಮಯದಲ್ಲಿ ನೌಕರರನಿಗೆ ತೊಂದರೆಯಾಗಬಾರದು ಜೊತೆಯಲ್ಲಿ ಚಿಕಿತ್ಸೆಯು ಕೂಡಾ ಬೇಗನೆ ದೊರೆಯಲ್ಲಿ ಎಂಬ ನಿಟ್ಟನಲ್ಲಿ ಸರಕಾರ ಜ್ಯೋತಿ ಸಂಜೀವಿನಿಯ ಕಾರ್ಡನ ಭಾಗ್ಯ ನೀಡಿದೆ. ಪ್ರಸ್ತುತವಾದ ದಿನಮಾನಗಳಲ್ಲಿ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ತಮ್ಮದೇಯಾದ ಸಾಧನೆ ಮಾಡಿದ್ದಾರೆ. ಸಂವಿಧಾನವು ಕೂಡಾ ಅವರಿಗೆ ವಿಶೇಷವಾದ ಸೌಲಭ್ಯವನ್ನು ನೀಡುವುದರ ಜೊತೆಯಲ್ಲಿ ಅವರ ಸಬಲೀಕರಣಕ್ಕಾಗಿ ಸರಕಾರ ಶ್ರಮಿಸುತ್ತಿದೆ. 10ನೇ ತರಗತಿ ಸೇರಿದಂತೆ ವಿವಿಧ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯು ಮೊದನೇಯ ಸ್ಥಾನ ಬರುವ ಹಾಗೇ ಕಠಿಣವಾದ ಪರಿಶ್ರಮವನ್ನು ಶಿಕ್ಷಕರು ಪಡಬೇಕು. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ , ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಶೋಧ ವಂಟಗೊಡಿ, ವಿಧಾನ ಪರಿಷತ್ತಿನ ಸದಸ್ಯರಾದ ಹೇಮಲತ ನಾಯಕ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಡಿಸಿಸಿ ಬ್ಯಾಂಕ್ ಕಲಬುರಗಿಯ ಉಪಾಧ್ಯಕ್ಷ ಸುರೇಶ ಸಜ್ಜನ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಯ್ಯಾ.ಟಿ.ಎಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಅಮ್ಜದ್ ಪಟೇಲ್‌, ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನ್ನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಹೋಳಿಬಸಯ್ಯ, ಮಹಿಳಾ ಹೋರಾಟಗಾರ್ತಿ ಸಾವಿತ್ರಿ ಮುಜಮದಾರ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಅಕ್ಷರ ದಾಸೋಹ ತಾಲೂಕ ಅಧಿಕಾರಿ ಹನುಮಂತಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ತಗಡಿನಮನಿ, ನೌಕರರ ಸಂಘದ ರಾಜ್ಯ ಪರಿಷತ್ತಿನ ಸದಸ್ಯ ಗೋಪಾಲ, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಮಿಯ ಸದಸ್ಯ ನಿಂಗಪ್ಪ, ಕನಕಗಿರಿ ತಾಲೂಕ ಅಧ್ಯಕ್ಷ ಶಂಶಾದಬೇಗಂ, ಕುಷ್ಟಗಿ ತಾಲೂಕ ಅಧ್ಯಕ್ಷ ಮಲ್ಲಪ್ಪ ಕುದರಿ, ಕಾರ್ಯದರ್ಶಿ ಹೈದರಲಿ ಜಾಲಿಹಾಳ, ಕಳಕಮಲ್ಲೇಶ, ರಾಮಣ್ಣ ಕಳ್ಳಿಮನಿ, ನಫೀಜಖಾನ ಪಠಾನ, ಪೂರ್ಣಿಮಾ ತುಪ್ಪದ ಸೇರಿದಂತೆ ಅನೇಕರು ಇದ್ದರು.

ಕಾರ್ಯಕ್ರಮವನ್ನು ಬಹದ್ದೂರಬಂಡಿ ಕ್ಲಸ್ಟರ್ ಸಿ.ಆರ್.ಪಿ. ಹನುಮಂತಪ್ಪ ಕುರಿ ನಿರೂಪಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಕಾರ್ಯದರ್ಶಿ ಬಾಳಪ್ಪ ಕಾಳೆ ಸ್ವಾಗತಿಸಿ, ರಾಮಣ್ಣ ಶ್ಯಾವಿ ವಂದಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!