December 23, 2024

AKSHARA KRAANTI

AKSHARA KRAANTI




ಮೆಣಸಗಿ ಗ್ರಾಮ ಪಂಚಾಯತಿ ಸಭೆ

ರೋಣ ತಾಲೂಕ ಮೆಣಸಗಿ ಗ್ರಾಮ ಪಂಚಾಯತಿಯಲ್ಲಿ ಸಭೆ

ಗದಗ,: ಜಿಲ್ಲಾ ರೋಣ ತಾಲೂಕ ಮೆಣಸಗಿ ಗ್ರಾಮ ಪಂಚಾಯತಿಯಲ್ಲಿ ಸಭೆ ನಡೆಯಿತು.

ಈ ಸಭೆಯು ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನವಿಲುತೀರ್ಥ ಜಲಾಶಯ ಯಾವುದೇ ಸಮಯದಲ್ಲಿ ತುಂಬುವ ಸಾಧ್ಯತೆ ಇದೆ ಜಲಾಶಯದಿಂದ ನೀರು ಹೊರಗೆ ಬಿಡಲಾಗುತ್ತದೆ. ರೋಣ ತಾಲೂಕಿನ ನದಿಪಾತ್ರದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಮೆಣಸಗಿ ಗ್ರಾಮದಲ್ಲಿ ಮಾಜಿ ಸಚಿವರು ನರಗುಂದ ಶಾಸಕರಾದ ಸಿ.ಸಿ. ಪಾಟೀಲರು ಮೆಣಸಿಗಿ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಭೇಟಿ ಮಾಡಿ ಪ್ರವಾಹದಿಂದ ತೊಂದರೆ ಆಗಬಾರದೆಂದು ಮುನ್ನೆಚ್ಚರಿಕೆಯಾಗಿ ದನಕರುಗಳು, ಜನರು ಎಲ್ಲರೂ ಹೊಸ ಊರಿಗೆ ಹೋಗಬೇಕೆಂದು ಸಭೆಯಲ್ಲಿ ಸೂಚಿಸಿದರು.
ಇವರ ಜೊತೆಗೆ ತಾಲೂಕ ಮಟ್ಟದ ಅಧಿಕಾರಿಗಳು ಇವರಿಗೆ ಸಲಹೆ ಸೂಚನೆ ನೀಡಿದರು. ಯಾವುದೇ ರೀತಿಯಿಂದ ನದಿಯ ದಡದಲ್ಲಿರುವ ಮೆಣಸಗಿ, ಹೊಳೆ ಆಲೂರ, ಹೊಳೆ ಮಣ್ಣೂರ, ಗಾಡಗೋಳಿ, ಕುರವಿನಕೊಪ್ಪ, ಅಮರಗೋಳ, ಬಿ.ಎಸ್. ಬೇಲೇರಿ, ಗ್ರಾಮದ ಹಿರಿಯರಿಗೆ, ಯುವಕರಿಗೆ, ಮುಂಜಾಗ್ರತವಾಗಿ ಇರಬೇಕೆಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಉಮೇಶಗೌಡ ಸಿ. ಪಾಟೀಲ ನರಗುಂದ ಲಾಯನ್ಸ್ ಕ್ಲಬ್ ಅಧ್ಯಕ್ಷರು, ನಾಗರಾಜ ತಹಶೀಲ್ದಾರ, ವಿಜಯಲಕ್ಷ್ಮಿ ಹಕಾರಿ ಕಾರ್ಯನಿರ್ವಾಹಕ ಅಧಿಕಾರಿ, ಈಶ್ವರ ಮುದೇನೂರು ಗ್ರಾಮ ಪಂಚಾಯತ ಅಧ್ಯಕ್ಷರು, ಶಿವಕುಮಾರ ನೀಲಗುಂದ, ಸುರೇಶ ಗುರಮ್ಮನವರ, ಮುದಿಗೌಡ ಫಕೀರಗೌಡ, ಅಶೋಕ ಹೆಬ್ಬಳ್ಳಿ, ಶ್ರೀಕಾಂತ ಗುರಮ್ಮನವರ, ಚೇತನಾ ಪಾಟೀಲ, ಶಂಕರಪ್ಪ ಎಲಿಗಾರ, ಪ್ರವೀಣ ಕುಲಕರ್ಣಿ, ಸುಭಾಸ ಜಾಧವ, ಸುಭಾಸ ಕಪಲಿ, ಹನಮಂತ ಮುದೇನೂರ, ಶೇಖಪ್ಪ ಗಡ್ಡಿ, ಮಲ್ಲಪ್ಪ ತುಪ್ಪದ, ನೂರಂದಪ್ಪ ಉಳ್ಳಾಗಡ್ಡಿ, ಕೇದರಗೌಡ ಮಣ್ಣೂರ, ಜಂಗಣ್ಣವರ ಅಭಿವೃದ್ಧಿ ಅಧಿಕಾರಿ, ಮುತ್ತಣ್ಣ ಜಂಗಣ್ಣವರ, ರಾಮನಗೌಡ ಪಾಟೀಲ, ಬಸವಂತಪ್ಪ ಎಚ್. ತಳವಾರ, ವೀರಸಂಗಯ್ಯ ಮೋಖಾಶಿ, ಹುಡೇದ ಸೋಮು, ಸುರೇಶ ಗಾನಗೇರ, ಮುತ್ತು ಪಾಟೀಲ, ಬಿ. ಬಿ. ಐನಾಪೂರ, ಶಿವಾನಂದ ಮುತವಾಡ, ಸಿದ್ದೇಶ ಹೂಗಾರ, ಸಂತೋಷ ಹಂಚಿನಾಳ ಸೇರಿದಂತೆ ಮೆಣಸಗಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!