December 23, 2024

AKSHARA KRAANTI

AKSHARA KRAANTI




ನೀರಿನ ದಾಹ ನೀಗಿಸುವುದು ಪುಣ್ಯದ ಕಾರ್ಯ

ಕೊಪ್ಪಳ,: ಈ ಉರಿ ಬಿಸಿಲಿನಲ್ಲಿ ಪ್ರಯಾಣಿಕರ,‌ ಸಾರ್ವಜನಿಕರ ನೀರಿನ ದಾಹ ತಿರಿಸುವುದು ಪುಣ್ಯದ ಕಾರ್ಯ ಎಂದು ಕೆಎಸ್ ಆರ್ ಟಿಸಿ ಕೊಪ್ಪಳ ಘಟಕ ವ್ಯವಸಾಪಕ ಬಸವರಾಜ ಬಟ್ಟೂರು ಹೇಳಿದರು.
ಅವರು ನಗರದ ಕೇಂದ್ರೀಯ ಬಸ್ ನಿಲ್ದಾಣದ ಹತ್ತಿರ ಆಟೋ ಮಾಲಕರ ಹಾಗೂ ಚಾಲಕರ ಸಂಘದ ವತಿಯಿಂದ ನಿರ್ಮಿಸಿದ್ದ ಕುಡಿಯುವ ನೀರಿನ ಅರವಟಿಕೆ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಸ್ಥಳೀಯ ಸಂಘಟನೆ ಕಳೆದ ಹಲವು ವರ್ಷಗಳಿಂದ ಈ ಒಂದು ಮಹತ್ತರ ಕಾರ್ಯವನ್ನು ಚಾಚು ತಪ್ಪದೇ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ನಂತರ ನಗರ ಠಾಣೆ ಸಿಪಿಐ ಜಯಪ್ರಕಾಶ ಮಾತನಾಡಿ, ಇದೊಂದು ಜವಬ್ದಾರಿಯುತವಾದ ಪುಣ್ಯದ ಕಾರ್ಯ, ಸಾರ್ವಜನಿಕರು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದ ಅವರು, ತಪ್ಪದೇ ಪ್ರತಿಯೊಬ್ಬರು ಸಮರ್ಪಕವಾಗಿ ಸಂಚಾರಿ ಸಾರಿಗೆ ನಿಯಮಗಳನ್ನು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಆಟೋ ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ನಗರಸಭೆ ಸದಸ್ಯ ಮಾನ್ವಿ ಪಾಷಾ, ಸಂಘದ ಅಧ್ಯಕ್ಷ ಮೌಲಾಹುಸೇನ್, ಉಪಾಧ್ಯಕ್ಷರಾದ ಮಹಿಬೂಬು ಪಾಷಾ, ವಸಂತ, ಮಾಜಿ ಅಧ್ಯಕ್ಷರಾದ ಶರಣಪ್ಪ ಅಂಗಡಿ, ನಜೀರ್ ಅಹಮ್ಮದ್,ಸದಸ್ಯ ಪರಶುರಾಮ ಆಲೂರು ಸೇರಿದಂತೆ ಅನೇಕರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!