ಕೊಪ್ಪಳ,: ನಗರದ ಡಾ.ಸಿಂಪಿ ಲಿಂಗಣ್ಣ ರಸ್ತೆಯ ಶ್ರೀ ಗಜಾನನ ಗೆಳೆಯರ ಬಳಗದಿಂದ ಈಚೆಗೆ ಸಭೆ ನಡೆಸಲಾಯಿತು. 2024ರ ಗಣೇಶೋತ್ಸವ ನಿಮಿತ್ತ ಪ್ರತಿ ವರ್ಷದಂತೆ ಈ ಸಲವೂ ಶ್ರೀಗಜಾನನ ಗೆಳೆಯರ ಬಳಗಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ವರ್ಷದ ಗೌರವಾಧ್ಯಕ್ಷರಾಗಿ ಶಿವಕುಮಾರ್ ಕೋಣಂಗಿ, ಅಧ್ಯಕ್ಷರಾಗಿ ಬಸವರಾಜ ಕರುಗಲ್, ಉಪಾಧ್ಯಕ್ಷರಾಗಿ ಪ್ರತಾಪ್‌ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅಮಿತ್ ಮಾಲಗಿತ್ತಿ, ಸಹ ಕಾರ್ಯದರ್ಶಿಗಳಾಗಿ ರಾಘವೇಂದ್ರ ಕಟ್ಟಿಮನಿ, ಮಧುಸೂದನ್ ಕುಲಕರ್ಣಿ, ಖಜಾಂಚಿಯಾಗಿ ಆನಂದ್ ವಿಭೂತಿಮಠ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
2024ರ ಗಣೇಶೋತ್ಸವ ಆಚರಣೆ ಕುರಿತು ಸಿದ್ಧತಾ ಕಾರ್ಯಗಳ ಕುರಿತು ಪ್ರಾಥಮಿಕ ಸಭೆಯಲ್ಲಿ ಚರ್ಚಿಸಲಾಯಿತು.
ಈ ವೇಳೆ ಮುಖಂಡರಾದ ಬಸವರಾಜ ನೀರಲಗಿ, ಜಗನ್ನಾಥಗೌಡ್ರ, ಜಗದೀಶ ಗುತ್ತಿ, ಶಿವಕುಮಾರ್ ನಾಲ್ವಾಡ, ವಿಶ್ವನಾಥ ಪೂಜಾರ, ಯಲಪ್ಪ ಚಿತ್ರಗಾರ, ಮಂಜುನಾಥ, ರಾಹುಲ್ ಹಕ್ಕಂಡಿ, ರಾಕೇಶ್, ರುದ್ರೇಶ್, ಅಮರೇಶ ಕೋರಿ ಮತ್ತಿತರರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ