ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಗದಗ,: ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ನಡೆದ ಪಂಚಮಸಾಲಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಪಂಚಮಸಾಲಿ ಸಮಾಜದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಧರ್ಮಪೀಠ ಕೂಡಲಸಂಗಮ ಹಾಗೂ ಶ್ರೀ ವಚನಾನಂದ ಸ್ವಾಮಿಗಳು ಧರ್ಮಪೀಠ ಹರಿಹರ ಪೂಜ್ಯರುಗಳವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು.
ಅಧ್ಯಕ್ಷತೆಯನ್ನು ಮೋಹನ ಮಾಳಶೆಟ್ಟಿ ವಹಿಸಿದ್ದರು.
ಕಾನೂನು, ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಉದ್ಘಾಟನೆಯನ್ನು
ನೆರವೇರಿಸಿ ಮಾತನಾಡಿದ ಅವರು, ಸಮಾಜ ಬಾಂಧವರು ಒಂದೆಡೆ ಸೇರಿ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಗಣ್ಯ ಉದ್ದಿಮೆದಾರರಾದ ಅಶೋಕ ಸಂಕಣ್ಣವರ ಶ್ರೀ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಧರ್ಮಪೀಠ ಕೂಡಲಸಂಗಮ ಹಾಗೂ ಶ್ರೀ ಶ್ರೀ ವಚನಾನಂದ ಸ್ವಾಮಿಗಳು ಧರ್ಮಪೀಠ ಹರಿಹರ ಪೂಜ್ಯರನ್ನು ಪಂಚಮಸಾಲಿ ಸಮಾಜದ ಪರವಾಗಿ ಸನ್ಮಾನಿಸಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಹಾಲಿ ಶಾಸಕರಾದ ಸಿ ಸಿ. ಪಾಟೀಲ, ಪ್ರೊ.ಎಸ್.ವ್ಹಿ. ಸಂಕನೂರ ವಿಧಾನಪರಿಷತ ಸದಸ್ಯರು, ಗಂಗಣ್ಣ ಮಹಾಂತಶೆಟ್ಟರ ಮಾಜಿ ಶಾಸಕರು ಶಿರಹಟ್ಟಿ, ಪಂಚಮಸಾಲಿ ಸಮಾಜ ಸೇವಾ ಟ್ರಸ್ಟಿಗಳಾದ ಶಾಂತಪ್ಪ ಮುಳವಾಡ, ಬಾಲಚಂದ್ರ ಭರಮಗೌಡ್ರ, ಅಶೋಕ ಸಂಕಣ್ಣವರ, ಪ್ರಕಾಶ ಮ್ಯಾಗೇರಿ, ಮಾಲತೇಶ ಪಾಟೀಲ, ಸಿದ್ದನಗೌಡ ಪಾಟೀಲ, ಮಹಾಂತೇಶಗೌಡ ಹಿರೇಮನಿಪಾಟೀಲ, ಶಂಕರ ಕರಿಬಿಷ್ಠಿ, ಸುರೇಶ ಚಿತ್ತರಗಿ, ವಿಶ್ವನಾಥ ಹಳ್ಳಿಕೇರಿ, ಶಿವರಾಜಗೌಡ ಹಿರೇಮನಿಪಾಟೀಲ, ಸಿದ್ದಲಿಂಗೇಶ ಕರಿಬಿಷ್ಠಿ, ಸಂತೋಷ ಅಕ್ಕಿ, ಸಂಗಮೇಶ ಕವಳಿಕಾಯಿ, ವಸಂತ ಪಡಗದ, ಶರಣಪ್ಪ ಬೋಳಣ್ಣವರ, ಸಂತೋಷ ಕಬಾಡಿ, ಗದಗ ಜಿಲ್ಲಾ ಎಲ್ಲಾ ನಗರ ಹಾಗೂ ಗ್ರಾಮಗಳ ಗುರು-ಹಿರಿಯರು ಹಾಗೂ ಸಮಸ್ತ ಪಂಚಮಸಾಲಿ ಸಮಾಜದ ಬಾಂಧವರು, ಸಮಾಜದ ಗುರುಹಿರಿಯರು, ಯುವಕರು, ಮಹಿಳೆಯರು, ಪಾಲಕರು ಪಾಲ್ಗೊಂಡಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ