December 23, 2024

AKSHARA KRAANTI

AKSHARA KRAANTI




ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಾನೂನು ಜ್ಞಾನ ಹೊಂದಿರಬೇಕು : ಪಿಐ ಟಿ. ಗುರುರಾಜ

ಕುಕನೂರ,: ವೈಜ್ಞಾನಿಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆ ಕಾನೂನಿನ ಜ್ಞಾನವನ್ನು ಹೊಂದಿರಬೇಕು ಎಂದು ಕುಕನೂರ ಪೋಲಿಸ್ ಠಾಣೆಯ ಪಿಐ ಟಿ. ಗುರುರಾಜ ಹೇಳಿದರು.

ಶನಿವಾರ ಪಟ್ಟಣದ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ತೆರೆದಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದಿನ ಯುವ ಪೀಳಿಗೆ ಮೊಬೈಲ್ ಗಿಳಿನಿಂದ ಹಾಳಾಗುತ್ತಿದ್ದು, ದುಶ್ಚಟಗಳ ದಾಸರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರದೊಂದಿಗೆ ಬೆಳೆದು ದೇಶದ ಸತ್ಪ್ರಜೆಗಳಾಗುವದರ ಜೊತೆಗೆ, ಕಲಿತ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತರುವಂತಾಗಬೇಕು ಎಂದು ಕರೆ ನೀಡಿದರು.

ನಂತರ ಪೋಲಿಸ್ ಇಲಾಖೆಯ ದೈನಂದಿನ ಕರ್ತವ್ಯದ ಬಗ್ಗೆ ಹಾಗೂ ಎಫ್ಐಆರ್, ಚಾರ್ಜಶಿಟ್ ದಾಖಲಿಸುವ ಕುರಿತು ಯುಡಿ ಆರ್ ಹಾಗೂ ಪೋಸ್ಕೋ, ಬಾಲ್ಯ ವಿವಾಹ ಕಾಯ್ದೆಗಳ ಬಗ್ಗೆ ತಿಳಿಸಿದರು.ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ, ಮಕ್ಕಳ ಕಳ್ಳ ಸಾಗಾಣಿಕೆ, ಅಮಲು ಬರಿಸುವ ಮಧ್ಯ ಮಾದಕಗಳು, ತಂಬಾಕು ಉತ್ಪನ್ನಗಳ ಬಗ್ಗೆ ಸದಾ ಮಹಿಳೆಯರು ಮಕ್ಕಳು ಜಾಗೃತರಾಗಿರಬೇಕು. ಬಾಲ್ಯ ವಿವಾಹಗಳು ನಡೆದಲ್ಲಿ ಮಕ್ಕಳ ಸಹಾಯವಾಣಿ 1098, ಇಲ್ಲವೇ ಪೋಲಿಸ್ ಸಹಾಯವಾಣಿ 112 ಕರೆ ಮಾಡಿ ಬಾಲ್ಯ ವಿವಾಹ ನಡೆಯುವುದನ್ನು ತಡೆಗಟ್ಟಬೇಕು ಎಂದು ತಿಳಿಸಿದರು.

ಮದುವೆಗೆ ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21ವರ್ಷ ಕಡ್ಡಾಯವಾಗಿರಬೇಕು, ಹಾಗೂ ಸಾಮೂಹಿಕ ವಿವಾಹಗಳಲ್ಲಿ ದಾಖಲಾತಿಗಳನ್ನು ಸಮರ್ಪಕವಾಗಿ ತೆಗೆದುಕೊಂಡು ವಿವಾಹಗಳನ್ನು ನಡೆಸಬೇಕು ಎಂದು ತಿಳಿಸಿದರು.
ಬಾಲ ಕಾರ್ಮಿಕರು ಯಾವುದೇ ಅಂಗಡಿ ಮುಂಗಟ್ಟು ಅಥವಾ ಜೀತ ಪದ್ದತಿಯಲ್ಲಿ ಕೆಲಸ ಮಾಡುತ್ತಿದ್ದರೇ ಇಲಾಖೆ ಗಮನಕ್ಕೆ ತರಬೇಕು, ಪ್ರಾಥಮಿಕ ಹಂತದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು. ಬಂದೂಕು, ಗುಂಡುಗಳನ್ನು ಬಳಸುವ ವಿಧಾನ ಹಾಗೂ ಅವುಗಳನ್ನು ಉಪಯೋಗಿಸಲು ಕಾನೂನಿನ ಚೌಕಟ್ಟುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕುಕನೂರ ಪೋಲಿಸ್ ಠಾಣೆಯ ಎಎಸ್ಐ ಟಿ.ನಿರಂಜನ್, ಪೋಲಿಸ್ ಪೇದೆಗಳಾದ ಮಂಜುನಾಥ ಮ್ಯಾಳಿ, ಅಬ್ದುಲ್ ಖಾದರ್, ಹನುಮಂತಪ್ಪ, ಬಸಯ್ಯ, ಮಾರುತಿ, ಮಹಿಳಾ ಪೇದೆ ವಿದ್ಯಾವತಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಇನ್ನಿತರ ಸಿಬ್ಬಂದಿಯವರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!