December 23, 2024

AKSHARA KRAANTI

AKSHARA KRAANTI




ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮುಖ್ಯ : ಬಸವರಾಜ ಮಾಲಗಿತ್ತಿ

ಯಲಬುರ್ಗಾ,: ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಜ್ಞಾನ ಹೊಂದಿರಬೇಕು ಎಂದು ಯಲಬುರ್ಗಾ ಆರಕ್ಷಕ ಠಾಣೆಯ ಎಎಸ್ಐ ಪಿಎಸ್ ಬಸವರಾಜ ಮಾಲಗಿತ್ತಿ ವಿದ್ಯಾರ್ಥಿಗಳಿಗೆ ಹೇಳಿದರು.

ಪಟ್ಟಣದ ಜ್ಞಾನ ಸಾಗರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಲಬುರ್ಗಾ ಆರಕ್ಷಕ ಠಾಣೆ ವತಿಯಿಂದ ಠಾಣಾ ಪಿಎಸ್ ಐ ವಿಜಯ ಪ್ರತಾಪ್ ಇವರ ನೇತೃತ್ವದಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ತೆರೆದಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಲಿಸ್ ಇಲಾಖೆಯ ದೈನಂದಿನ ಕರ್ತವ್ಯದ ಬಗ್ಗೆ ಹಾಗೂ ಎಫ್ಐಆರ್, ಚಾರ್ಜಶಿಟ್ ದಾಖಲಿಸುವ ಕುರಿತು ಯುಡಿ ಆರ್ ಹಾಗೂ ಪೋಸ್ಕೋ, ಬಾಲ್ಯ ವಿವಾಹ ಕಾಯ್ದೆಗಳ ಬಗ್ಗೆ ತಿಳಿಸಿದರು.ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಮಕ್ಕಳ ಕಳ್ಳ ಸಾಗಾಣಿಕೆ, ಅಮಲು ಬರಿಸುವ ಮಧ್ಯ ಮಾದಕಗಳು, ತಂಬಾಕು ಉತ್ಪನ್ನಗಳ ಬಗ್ಗೆ ಸದಾ ಮಹಿಳೆಯರು ಮಕ್ಕಳು ಜಾಗೃತರಾಗಿರಬೇಕು. ಬಾಲ್ಯ ವಿವಾಹಗಳು ನಡೆದಲ್ಲಿ ಮಕ್ಕಳ ಸಹಾಯವಾಣಿ 1098, ಇಲ್ಲವೇ ಪೋಲಿಸ್ ಸಹಾಯವಾಣಿ 112 ಕರೆ ಮಾಡಿ ಬಾಲ್ಯ ವಿವಾಹ ನಡೆಯುವುದನ್ನು ತಡೆಗಟ್ಟಬೇಕು. ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21ವರ್ಷ ತುಂಬಿರಬೇಕು ಎಂದು ತಿಳಿಸಿದರು.

ಬಾಲ ಕಾರ್ಮಿಕ ಪದ್ದತಿಯನ್ನು ಹೊಗಲಾಡಿಸಿ ಮಕ್ಕಳು ಓದುವ ಹಂತದಲ್ಲಿ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಹಾಗೂ ಮದ್ದು, ಬಂದೂಕು, ಗುಂಡುಗಳ ಮಹತ್ವ ಅರಿತಿರಬೇಕು ಎಂದು ಅದರ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪೋಲಿಸ್ ಮಹಿಳಾ ಪೇದೆ ಹುಸೇಂಬಿ, ಶಾಲಾ ಸಹ ಶಿಕ್ಷಕರಾದ ವಿನಯ್ ಹಿರೇಮಠ, ಶ್ರೀಮತಿ ನಿರ್ಮಲಾ ಶ್ರೀಗಿರಿ ಇನ್ನಿತರ ಸಿಬ್ಬಂದಿಯವರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!