ಪಲ್ಸ್ ಪೋಲಿಯೋ ಕಾರ್ಯಕ್ರಮ
ಯಲಬುರ್ಗಾ,: ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು 1994ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೊ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯೊಂದಿಗೆ ಬೀಕರಪರಿಣಾಮಗಳನ್ನು ಬೀರಬಹುದಾದ ಈ ಮಾರಕ ರೋಗವನ್ನು ತಡೆಗಟ್ಟಲು ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ತಪ್ಪದೆ ಹಾಕಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು.
ಪಟ್ಟಣದ 15ನೇ ವಾರ್ಡಿನ ಕುದ್ರಿಕೊಟಗಿ ರಸ್ತೆ ಆಶ್ರಯ ಕಾಲೋನಿಯಲ್ಲಿರುವ 21ನೇ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಲ್ಸ್ ಪೋಲಿಯೊ ಎಂಬುದು ಸರ್ಕಾರದಿಂದ ಸ್ಥಾಪಿಸಲ್ಪಟ್ಟ ರೋಗನಿರೋಧಕ ಶಿಬಿರವಾಗಿದೆ. ಪೋಲಿಯೊ ವೈರಸ್ ವಿರುದ್ಧ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಭಾರತದಲ್ಲಿ ಪೋಲಿಯೊವನ್ನು ತೊಡೆದುಹಾಕಲು ಉತ್ತಮ ಪ್ರಯತ್ನವಾಗಿದೆ .ಮನೆ, ಶಾಲೆಗಳು ಮತ್ತು ಬಸ್ ನಿಲ್ದಾಣ ಸೇರಿದಂತೆ ಪ್ರತಿ ಕಡೆಗೆ ಸಿಬ್ಬಂದಿಗಳು ಹಾಜರಿದ್ದು ಪೋಲಿಯೊ ಹಾಕುತ್ತಾರೆ ಅದರಿಂದ ಪಾಲಕರು ತಮ್ಮ ಮಕ್ಕಳಿಗೆ ಪೋಲಿಯೊ ಹಾಕಿಸಿ ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ವಸಂತಕುಮಾರ ಭಾವಿಮನಿ, ಮುಖಂಡರಾದ ಸುರೇಶ ಜಮಾದಾರ. ನರ್ಸಿಂಗ್ ಅಧಿಕಾರಿ ಸಂಗಮೇಶ ಆರೋಗ್ಯ ಸಹಾಯಕಿಯರಾದ ಶಿಲ್ಪಾ ಭಜಂತ್ರಿ, ಶ್ರೀದೇವಿ, ಅಂಗನವಾಡಿ ಕಾರ್ಯಕರ್ತೆ ಅಕ್ಕಮಹಾದೇವಿ ಕಂಬಳಿ, ಸಹಾಯಕಿ ಸುಜಾತ ಛಲವಾದಿ, ಎನ್ ಜಿಓದ ಪ್ರವೀಣ ಎಮ್ಮಿಗುಡ್ಡದ ಸೇರಿದಂತೆ ಮಕ್ಕಳು ಹಾಗೂ ತಾಯಂದಿರು ಹಾಜರಿದ್ದರು.
More Stories
ಬ್ರಿಟಿಷರ ವಿರುದ್ದ ದಂಗೆ ಎದ್ದ ಮೊದಲ ವೀರ ಮಹಿಳೆ ಕಿತ್ತೂರ ಚೆನ್ನಮ್ಮ
ಶರಣಬಸವೇಶ್ವರ ಶಾಲೆಯಲ್ಲಿ ಗಾಂಧೀಜಿ- ಶಾಸ್ತ್ರಿಜಿ ಜಯಂತಿ ಆಚರಣೆ
ಶ್ರೀ ಶರಣಬಸವೇಶ್ವರ ಶಾಲೆಯಲ್ಲಿ 78ನೇ ಸ್ವಾತಂತ್ರ ದಿನಾಚರಣೆ