ಕುಕನೂರು,: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪಾಲ್ಗೊಳ್ಳುವ ಎಲ್ಲ ಕೂಲಿಕಾರರು ಆರೋಗ್ಯ ವಂತರಾಗಿರಬೇಕು, ಮತ್ತು ಆರೋಗ್ಯ ತಪಾಸಣೆ ಈಗ ಕಾಮಗಾರಿ ಸ್ಥಳದಲ್ಲಿಯೇ ಮಾಡುವುದರಿಂದ ಕೂಲಿಕಾರರು, ಹಿರಿಯ ನಾಗರೀಕರು, ಮಹಿಳಾ ಕೂಲಿಕಾರರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಸಬಹಂಚಿನಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೈಜನಾಥ ಸಾರಂಗಮಠ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾವರಾಳ ಗ್ರಾಮದಲ್ಲಿ ನಡೆದ ಮಹಾತ್ಮಗಾಂಧಿ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಬಿರ, ವಿಶ್ವ ಜನಸಂಖ್ಯಾ ದಿನಾಚರಣೆ, ಮಲೇರಿಯಾ ವಿರೋಧಿ ಮಾಸಾಚರಣೆ, ರೋಜಗಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈದ್ಯಾಧಿಕಾರಿ ಪ್ರಕಾಶ ಮಾತನಾಡಿ, ಮಳೆಗಾಲ ಸಮಯದಲ್ಲಿ ಮಲೇರಿಯಾ, ಡೆಂಗ್ಯೂ , ಜ್ವರ, ನೆಗಡಿ ಇಂಥ ಕಾಯಿಲೆಗಳು ಬರುವುದು ಸಾಮಾನ್ಯವಾಗಿದೆ ಅದಕ್ಕಾಗಿ ದುಡಿಯುವ ಕೂಲಿಕಾರರು ಮುನ್ನೆಚ್ಚರಿಕೆ ವಹಿಸಬೇಕು, ಕಾಯಿಸಿ ಆರಿಸಿದ ನೀರು ಕುಡಿಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಗಾವರಾಳ, ವೈದ್ಯಕೀಯ ಸಿಬ್ಬಂದಿಗಳು, ಐ.ಇ.ಸಿ ಸಂಯೋಜಕರು, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಕೂಲಿಕಾರರು ಹಾಜರಿದ್ದರು.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ