ಗದಗ,: ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಡೆಂಘಿ ಅಬ್ಬರ ರಾಜ್ಯಾಧ್ಯಂತ ಜೋರಾಗಿದ್ದು, ಸಾರ್ವಜನಿಕರು ಸ್ವಚ್ಚತೆಗೆ ಹೆಚ್ಚು ಮಹತ್ವ ನೀಡಬೇಕು. ನೀರನ್ನು ಬಹಳ ದಿನಗಳ ಕಾಲ ಸಂಗ್ರಹಿಸಿಡಬಾರದು. ನೀರು ಸಂಗ್ರಹಣೆಯಿಂದ ಸೊಳ್ಳೆಗಳ ಸಂತಾನ ಹೆಚ್ಚಾಗಿ ಡೆಂಘಿ ಹರಡುವ ಸಾಧ್ಯತೆ ಇರುತ್ತದೆ ಎಂದು ಗದಗ-ಬೆಟಗೇರಿ ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ, ಹಾಲಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು.
ಅವಳಿ ನಗರದ ವಾರ್ಡ್ ನಂ. 7ರಲ್ಲಿ ಭಾನುವಾರ ಸೊಳ್ಳೆಗಳ ನಿಯಂತ್ರಣಕ್ಕೆ ಮಿಲಾತಿನ್ ಆಯಿಲ್ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡೆಂಘಿ ಹೆಚ್ಚಾಗುತ್ತಿರುವ ಕಾರಣ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಜನತೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಡೆಂಘಿ ಮಹಾಮಾರಿ ಈಗಾಗಲೇ ಜಿಲ್ಲೆಯಾಧ್ಯಂತ ಅಬ್ಬರ ಮಾಡುತ್ತಿದೆ. ಸುಮಾರು 1300ಕ್ಕೂ ಹೆಚ್ಚು ಸೊಂಕಿನ ಶಂಕಿತರಿದ್ದು, 50ಕ್ಕೂ ಹೆಚ್ಚು ಜನರಿಗೆ ಸೊಂಕು ದೃಢಪಟ್ಟಿದೆ. ಅದರಲ್ಲಿಯೂ ಮಕ್ಕಳಲ್ಲಿ ಈ ಸೋಂಕು ಹೆಚ್ಚು ಕಾಣುತ್ತಿದ್ದು ತಮ್ಮ ಮಕ್ಕಳ ಆರೋಗ್ಯದ ಕಡೆ ಪಾಲಕರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಗದಗ-ಬೆಟಗೇರಿ ಅವಳಿ ನಗರದಾಧ್ಯಂತ ಸ್ವಚ್ಛತೆ ಕಾಪಾಡುವಲ್ಲಿ ನಮ್ಮ ಪೌರಕಾರ್ಮಿಕರು ಸಾಕಷ್ಟು ಶ್ರಮವನ್ನು ಪ್ರತಿನಿತ್ಯ ವಹಿಸುತ್ತಿದ್ದಾರೆ. ಇದರ ಜೊತೆಗೆ ಸಾರ್ವಜನಿಕರು ಅವರ ಜೊತೆ ಕೈಜೋಡಿಸಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕು. ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಹಾಗೂ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಇದರಿಂದ ಡೆಂಘಿಯಂತಹ ಮಾರಕ ರೋಗವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಪೌರಕಾರ್ಮಿಕರು ಕೂಡ ನಗರದ ಸ್ವಚ್ಚತೆಯ ಜೊತೆ ತಮ್ಮ ಹಾಗೂ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಓಣಿಯ ಹಿರಿಯರಾದ ಶಿವರುದ್ರಪ್ಪ ಮಡಿವಾಳರ, ಚಿನ್ನಪ್ಪ ನೆಗಳೂರ, ತುಕಾರಾಮ ಪತಂಗಿ, ಶ್ರೀನಿವಾಸ ಬಂಡಾ, ಈಶ್ವರ ಮಾಳೋದೆ, ಧಪೇದಾರ, ವಾಸು ಹಾದಿಮನಿ ಹಾಗೂ ನಗರಸಭೆಯ ಪೌರಕಾರ್ಮಿಕರು ಸೇರಿದಂತೆ ಏಳನೇ ವಾರ್ಡಿನ ಹಿರಿಯರು ಉಪಸ್ಥಿತರಿದ್ದರು.
ಡೆಂಘಿ ಜ್ವರದಿಂದ ಜಿಲ್ಲೆಯ ಸಿರುಂಜ ಗ್ರಾಮದ ಐದು ವರ್ಷದ ಚಿರಾಯಿ ಮಂಜುನಾಥ ಹೊಸಮನಿ ಎನ್ನುವ ಮಗು ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ನೋವಿನ ದುಃಖ ಭರಿಸುವ ಶಕ್ತಿಯನ್ನು ರಾಯರು ಅವರ ಕುಟುಂಬಕ್ಕೆ ಕರುಣಿಸಲಿ. ದಯವಿಟ್ಟು ಸಾರ್ವಜನಿಕರು ವಿಶೇಷವಾಗಿ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಣಜಿ ವಹಿಸಬೇಕು. ರಾತ್ರಿ ಮಲಗುವ ವೇಳೆ ಎಲ್ಲರೂ ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಬೇಕು.
– ರಾಘವೇಂದ್ರ ಯಳವತ್ತಿ
ನಗರಸಭೆ ಸದಸ್ಯ, ಗದಗ
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ