December 23, 2024

AKSHARA KRAANTI

AKSHARA KRAANTI




ಸಜ್ಜನರ ಸಂಗದಿಂದ ಜೀವನ ಸಾರ್ಥಕ : ವಿವೇಕಾನಂದಗೌಡ ಪಾಟೀಲ

ಗದಗ,: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಸಾಧು ಸಂತರು, ಶರಣರು, ಗುರುಗಳ ಸಂಪರ್ಕದಲ್ಲಿ ಇರಬೇಕು. ಒಬ್ಬ ವ್ಯಕ್ತಿ ಅಥವಾ ಒಂದು ವಸ್ತು ಬದಲಾಗಬೇಕಾದರೆ ಸಂಘ ಅತೀ ಮುಖ್ಯ ದುಂಬಿಯು ಹೂವಿನ ಸಂಗ ಮಾಡಿದಾಗ ಸಿಹಿಯಾದ ಜೇನುತುಪ್ಪ ಲಭಿಸುತ್ತದೆ. ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಬದುಕಿನಲ್ಲಿ ಒಳ್ಳೆಯ ಜನರ ಸಹವಾಸ ಮಾಡಬೇಕು. ಆಲದಮರದ ಬೀಜ ಸಾಸಿವೆ ಕಾಳಿನಷ್ಟು ಇದ್ದರೂ ಅದರ ಗಿಡ ಬೃಹತ್ ಪ್ರಮಾಣದಲ್ಲಿ ಇರುತ್ತದೆ. ಮಳೆ ಹನಿ ಸಮುದ್ರದಲ್ಲಿ ಹುಟ್ಟಿ ಸಮುದ್ರಕ್ಕೆ ಸೇರುವಂತೆ ಮಾನವ ಮಣ್ಣಿನಲ್ಲಿ ಹುಟ್ಟಿ ಮಣ್ಣಿನಲ್ಲಿ ಲೀನನಾಗುತ್ತಾನೆ. ಕಾರಣ ಮನುಷ್ಯನಿಗೆ ಸಂಪತ್ತು ಮುಖ್ಯವಲ್ಲ, ಸಂತೃಪ್ತಿ, ಸಂತೋಷ ಮುಖ್ಯ ಎಂದು ವಿವೇಕಾನಂದಗೌಡ ಪಾಟೀಲ ಸ್ವಾಮಿ ಹೇಳಿದರು.

ಅವರು ವಿವೇಕಾನಂದ ಸಾಂಸ್ಕೃತಿಕ ಸಮಿತಿಯಿಂದ ನಡೆಯುವ ಜೀವನ ದರ್ಶನ 38ನೇ ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಮಿತಿಯ ಅಧ್ಯಕ್ಷ ಪ್ರೊ. ಎಂ. ಎನ್. ಕಾಮನಹಳ್ಳಿ ಮಾತನಾಡಿ, ಮನುಷ್ಯ ಸಂತೃಪ್ತಿಯ ಜೀವನ ನಡೆಸಲು ಆರೋಗ್ಯ, ಆನಂದ, ತಾಳ್ಮೆ, ಮತ್ತು ಸಹನೆ ಮುಖ್ಯ ಇದನ್ನು ಧ್ಯಾನದ ಮುಖಾಂತರ ಪಡೆಯಬೇಕು. ಧ್ಯಾನ ಒಂದು ತಪಸ್ಸು ಭಾರತೀಯ ಸಂಪ್ರದಾಯ ತಮ್ಮ ಸಂಸ್ಕøತಿ ಮತ್ತು ಸಂಸ್ಕಾರದಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದ್ದು ಮಣ್ಣೆತ್ತಿನ ಅಮಾವಾಸ್ಯೆ ಇದು ಒಂದು ಹಬ್ಬ ಎಂದರು.ಕಾರ್ಯಕ್ರಮದಲ್ಲಿ ಪ್ರಸಾದ ಸೇವೆ ಮಾಡಿದ ಶ್ರೀಮತಿ ನೀಲಕ್ಕ ಯಲ್ಲಪ್ಪ ಸತ್ಯಪ್ಪನವರ ಅವರನ್ನು ಹಾಗೂ ಮುಖ್ಯ ಅತಿಥಿಗಳಾದ ವಿವೇಕಾನಂದಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಕಾಶೀ ವಿಶ್ವನಾಥನ ಪಾಲಿಕಿ ಸೇವೆ ಜರುಗಿತು. ಶ್ರೀಮತಿ ವರ್ಷಾ ಕೊಪ್ಪದ ಅವರಿಂದ ಸ್ವಾಗತ ಗೀತೆ, ಎಂ.ಬಿ. ಚನ್ನಪ್ಪಗೌಡರ ಇವರಿಂದ ಸ್ವಾಗತ ಮತ್ತು ಪರಿಚಯ ನೆರವೇರಿತು.

ವೇದಿಕೆಯ ಮೇಲೆ ಗೌರವಾಧ್ಯಕ್ಷರಾದ ಜಿ. ಜಿ. ಕುಲಕರ್ಣಿ, ಉಪಾಧ್ಯಕ್ಷರಾದ ಬಸವರಾಜ ಸುಂಕದ, ಶ್ರೀಮತಿ ನೀಲಕ್ಕ ಸತ್ಯಪ್ಪನವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಂ. ಕೆ. ಲಕ್ಕುಂಡಿ, ಆರ್. ಬಿ. ಒಡೆಯರ, ವ್ಹಿ. ಆರ್. ಕುಲಕರ್ಣಿ, ಅಂಬರೇಷ ಹಾದಿ, ಕಾರ್ತಿಕ ಮಡಿವಾಳರ, ಶ್ರೀಮತಿ ಮಹಾದೇವಿ ಗೋಗೇರಿ, ಶ್ರೀಮತಿ ರಾಧಿಕಾ ಬಂದಮ್, ಗರಡಿಮನಿ, ಎ.ಟಿ. ನರೇಗಲ್ಲ, ಕನಕೇರಿ, ತಿರ್ಲಾಪೂರ, ಮೇದರಗಿ, ಎಸ್.ಎಸ್.ಗೌಡರ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಕೆ.ಐ.ಕುರಗೋಡ, ವಂದನಾರ್ಪಣೆ ಬಿ. ಎನ್.ಯರನಾಳ ನಡೆಸಿಕೊಟ್ಟರು. ಪ್ರಭುಸ್ವಾಮಿಯವರಿಂದ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ನಂತರ ಪ್ರಸಾದ ಸೇವೆ ಜರುಗಿತು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!