January 14, 2025

AKSHARA KRAANTI

AKSHARA KRAANTI




ಪ್ಯಾಕ್ಸ್‍ಗಳಲ್ಲಿ ಗಣಕೀಕರಣ ಮತ್ತು ಸಾಮಾನ್ಯ ಸೇವೆಗಳ ಬಳಕೆ ಅತೀ ಅವಶ್ಯ: ಸಿ.ಬಿ. ದೊಡ್ಡಗೌಡ್ರ

ಗದಗ,: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಸಹಕಾರ ಇಲಾಖೆ, ಗದಗ ಹಾಗೂ ಕೆ.ಸಿ.ಸಿ. ಬ್ಯಾಂಕ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ಕೆ.ಸಿ.ಸಿ ಬ್ಯಾಂಕ್ ಲಿ., ಗದಗ ಇದರ ಸಭಾಭವನ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇದರ ನಿರ್ದೇಶಕರಾದ ಸಿ. ಬಿ. ದೊಡ್ಡಗೌಡ್ರ ರವರು ಉದ್ಘಾಟಿಸಿ ಮಾತನಾಡಿ, ಪ್ಯಾಕ್ಸಗಳನ್ನು ಬಹುಸೇವಾ ಕೇಂದ್ರಗಳಾಗಿ ರೂಪಿಸುವುದರ ಜೊತೆಗೆ ಗಣಕೀಕರಣ ವ್ಯವಸ್ಥೆ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯ ಸೌಲಭ್ಯಗಳನ್ನು ಅಳವಡಿಕೊಂಡು ಸಹಕಾರಿಗಳಿಗೆ ಅನುವು ಮಾಡಿಕೊಡುವುದು ಅತೀ ಅವಶ್ಯ ಹಾಗೂ ರಾಷ್ಟ್ರದ 8.5 ಲಕ್ಷ ಸಹಕಾರ ಸಮಸ್ಥೆಗಳ ಮಾಹಿತಿಗಳನ್ನು ಕ್ರೂಢೀಕರಿಸಿ ಮಾಹಿತಿ ಕಣಜವನ್ನಾಗಿ (ಡೇಟಾ ಬೇಸ್ ಸೆಂಟರ್) ಮಾಡಿರುವುದು, ರಾಷ್ಟೀಯ ಮಟ್ಟದಲ್ಲಿ ಸಾವಯವ ಸಹಕಾರ ಸಂಸ್ಥೆ, ರಫ್ತು ಸಹಕಾರ ಸಂಸ್ಥೆ ಮತ್ತು ಬಿತ್ತನೆ ಬೀಜ ಸಹಕಾರ ಸಂಸ್ಥೆಗಳನ್ನು ಹುಟ್ಟುಹಾಕಿರುವುದು ವಿಶೇಷವಾಗಿದೆ. ಅಲ್ಲದೆ, ಸಹಕಾರ ಇಲಾಖೆಯಲ್ಲಿ 54 ವಿಶೇಷ ಯೋಜನೆಗಳ ಅನುಷ್ಠಾನಕ್ಕೆ ಕ್ರಮಕೈಗೊಂಡಿರುವುದು ಹಾಗೂ ರಾಷ್ಟ್ರೀಯ ಸಹಕಾರ ನೀತಿ ಸಮಿತಿ ರಚಿಸಲಾಗಿದ್ದು, ಉಪಯುಕ್ತವಾಗಿದೆ.

ಎಸ್. ಕೆ. ಇಟಗಿ, ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಕೋಟುಮಚಗಿ ನಂ.1 ಇವರು ಮಾತನಾಡಿ, ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಹಾಗೂ ಕೃಷಿ ಕಾರ್ಯಗಳಿಗೆ ಆದ್ಯತೆ ನೀಡುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು, ರೈತರಿಗೆ 5 ಲಕ್ಷ ರೂ. ತನಕ ಬಡ್ಡಿ ಸಾಲ ಹಾಗೂ ರೈತರ ಮಿತಿಗೆ ಅನುಸಾರವಾಗಿ ಶೇ.3 ರಂತೆ 10 ಲಕ್ಷ ರೂ. ತನಕ ಸಾಲ ದೊರೆತಂತಾಗುವುದರಿಂದ ಕೃಷಿಗೆ ಉತ್ತೇಜನ ದೊರೆಯಲಿದೆ ಎಂದರು.

ಎಸ್.ಜಿ. ಆಲದಕಟ್ಟಿ ಜಿಲ್ಲಾ ನಿಯಂತ್ರಣಾಧಿಕಾರಿಗಳು, ಕೆ.ಸಿ.ಸಿ. ಬ್ಯಾಂಕ್ ಲಿ., ಗದಗ ರವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ಯಾಕ್ಸಗಳ ಬಲವೃದ್ದಿಗೆ ರಾಷ್ಟ್ರದಾದ್ಯಂತ ವಿಶೇಷ ಪ್ರಯತ್ನಗಳು ನಡೆಯುತ್ತಿವೆ. ಪ್ಯಾಕ್ಸಗಳು ಆರ್ಥಿಕವಾಗಿ ಸಬಲಗೊಂಡು ಲಾಭದಾಯಕವಾಗಿ ಕೆಲಸ ನಿರ್ವಹಿಸಿದರೆ ಸಹಕಾರ ಚಳುವಳಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂಬ ಭಾವನೆಗೆ ಅವಕಾಶವಾಗಿದೆ. ಆರ್ಥಿಕ ಸಮಾನತೆ, ದುರ್ಬಲ ಜನರ ಏಳಿಗೆಗೆ ಮತ್ತು ಸಮಾಜದ ಪ್ರಗತಿಯ ರೂವಾರಿಯಾಗಿರುವ ಸಹಕಾರ ಕ್ಷೇತ್ರ ಇಂದು ಜೀವನದ ಎಲ್ಲಾ ಪ್ರಕಾರಗಳನ್ನು ಆವರಿಸಿಕೊಂಡು ಮಾನವ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಸಹಕಾರ ತತ್ವಗಳು ಸಮಾಜದಲ್ಲಿ ಸಮಾನತೆ, ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ ಎಂದರು.

ಬಸವರಾಜ ನಿಡಗುಂದಿ ಮಾರಾಟಾಧಿಕಾರಿಗಳು, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, ಗದಗ ಇವರು ಮಾತನಾಡಿ, ಸಹಕಾರ ತತ್ವಗಳು ಸಮಾಜದಲ್ಲಿ ಸಮಾನತೆ, ಆರ್ಥಿಕತೆ ಸಬಲೀಕರಣಕ್ಕೆ ಪೂರಕವಾಗಿವೆ. ಇದರಿಂದ ಸಾರ್ವಜನಿಕ ವಲಯ ಮತ್ತು ಖಾಸಗಿ ಕ್ಷೇತ್ರಗಳ ನಡುವೆ ಸಹಕಾರಿ ಕ್ಷೇತ್ರದ ಪೈಪೋಟಿಯನ್ನು ಎದುರಿಸಲು ಸಾಧ್ಯವಾಗುತ್ತದೆ. ಹಾಗೂ ಅತಿ ಸಣ್ಣ ಹಿಡುವಳಿದಾರರು, ಸಣ್ಣ ರೈತರು, ಸಣ್ಣ ವ್ಯಾಪಾರಿಗಳು, ಚಿಲ್ಲರೆ ಮಾರಾಟಗಾರರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತಿದೆ. ಎಂದು ಅಭಿಪ್ರಾಯಪಟ್ಟರು.

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಅಧಿಕಾರಿಗಳಾದ ಎಲ್.ಎನ್. ಬೇವಿನಕಟ್ಟಿ, ರೋಣ ಕೆ.ಸಿ.ಸಿ.ಬ್ಯಾಂಕಿನ ಮ್ಯಾನೇಜರ ವ್ಹಿ.ಎಸ್. ಪಾಟೀಲ, ಬ್ಯಾಂಕ್ ನಿರೀಕ್ಷಕರಾದ ಎ.ಎ. ಶಾಬಾದಿ, ಗದಗ ಕೆ.ಸಿ.ಸಿ ಬ್ಯಾಂಕ ನಿರೀಕ್ಷಕರಾದ ವ್ಹಿ.ಬಿ. ಚಿಕ್ಕನಗೌಡ್, ಸುನೀಲ ಚಳಗೇರಿ, ವಿಶ್ವನಾಥ ಲಮಾಣಿ, ಎಸ್. ಸುರೇಶಕುಮಾರ ಉಪಸ್ಥಿತರಿದ್ದರು.

ತರಬೇತಿ ಕಾರ್ಯಾಗಾರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಅಳವಡಿಸಿಕೊಳ್ಳಬಹುದಾದ ಸಾಮಾನ್ಯ ಸೇವಾ ಕೇಂದ್ರಗಳ ಸೌಲಭ್ಯಗಳ ಕುರಿತು ಪ್ರವೀಣ ನವಲಗುಂದ, ಜಿಲ್ಲಾ ವ್ಯವಸ್ಥಾಪಕರು, ಸಾಮಾನ್ಯ ಸೇವಾ ಕೇಂದ್ರ (ಅSಅ) ಗದಗ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗಣಕೀಕರಣ ಅಳವಡಿಸುವ ಕುರಿತು, ಬಸವರಾಸ ಎಂ. ಮುಧೋಳ, ಸಮನ್ವಯ ಅಧಿಕಾರಿಗಳು, ಪ್ಯಾಕ್ಸ್ ಗಣಕೀಕರಣ ಕೋಶ, ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಹಾಗೂ ಸಹಕಾರಿ ಕಾಯಿದೆ ಮುಖ್ಯಾಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳ ಕುರಿತು ರೋಣ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ ಮುಧೋಳ ಇವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಮೊದಲಿಗೆ ಕಣಗಿನಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ವ್ಹಿ.ಆಯ್. ಹಿರೇಮಠ ಇವರು ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು, ನಂತರ ಯೂನಿಯನ್‍ದ ಮಹಿಳಾ ಸಹಕಾರ ಶಿಕ್ಷಕಿ ಶ್ರೀಮತಿ ರಶೀದಾಬಾನು ಸಿ. ಯಲಿಗಾರ ವಂದಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!