ಕೊಪ್ಪಳ,: ಗಾನಯೋಗಿ, ಶಿವಯೋಗಿ ಲಿಂ.ಪಂ.ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯಸ್ಮರಣೆ ಹಾಗೂ ಪದ್ಮಭೂಷಣ ಲಿಂ.ಡಾ||ಪಂ.ಪುಟ್ಟರಾಜ ಗವಾಯಿಗಳವರ 14ನೇ ಪುಣ್ಯ ಸ್ಮರಣೋತ್ಸವವನ್ನು ಗದಗನ ವೀರೇಶ್ವರ ಪುಣ್ಯಾಶ್ರಮದಲ್ಲಿ ದಿ.22 ರಿಂದ 26ವರೆಗೆ ಹಮ್ಮಿಕೊಳ್ಳಲಾಗಿದ್ದು, ಇದೇ ಸಂದರ್ಭದಲ್ಲಿ ಮಹಾರಥೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದರ ಪ್ರಯುಕ್ತ 5 ದಿನಗಳವರೆಗೆ ವಿವಿಧ ಧಾಮಿಕ ಮತ್ತು ಕೀರ್ತನ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಮಠದ ಉತ್ತರಾಧಿಕಾರಿಗಳಾದ ಡಾ||ಕಲ್ಲಯ್ಯಜ್ಜನವರು ವಹಿಸುವರು. ದಿನಾಂಕ 24 ರಂದು ನಡೆಯುವ ಸ್ವರ ಸಮಾರಾಧನಾ ಸಂಗೀತ ಕಾರ್ಯಕ್ರಮದ ನಿರೂಪಣೆಯನ್ನು ಕೊಪ್ಪಳದ ಪುರಾಣ ಪ್ರವಚನಕಾರರು ಹಾಗೂ ಸಂಗೀತ ಶಿಕ್ಷಕರಾದ ಮಹಾಂತಯ್ಯಶಾಸ್ತ್ರಿಗಳು ಹಿರೇಮಠ, ಹಿರೇಬಗನಾಳ ನೆರವೇರಿಸುವರು. ಅಂದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಡೆಯುವ ಕಾರ್ಯಕ್ರಮ ನಿರೂಪಣಿಯನ್ನು ನಿರ್ವಹಿಸುವರು. ಹರ-ಚರ ಗುರುಗಳ ದಿವ್ಯ ಸಾನಿಧ್ಯದಲ್ಲಿ ಕೊಪ್ಪಳದ ಪುರಾಣ ಪ್ರಚನಕಾರರಾದ ಮಹಾಂತಯ್ಯಶಾಸ್ತ್ರಿಗಳು ನಿರ್ವಹಣೆಗೆ ಅವಕಾಶ ದೊರಕಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸ್ಥಳೀಯ ಕಲಾವಿದರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ