December 23, 2024

AKSHARA KRAANTI

AKSHARA KRAANTI




ವಿಶೇಷ ವಸತಿ ಶಾಲೆಯಲ್ಲಿ ಯೋಗ ದಿನಾಚರಣೆ

ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂಧ್ಯ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಗದಗ,: ಮಂಜು ಶಿಕ್ಷಣ ಸಂಸ್ಥೆಯ ಗದಗ ಜಿಲ್ಲೆಯಲ್ಲಿರುವ ಬುದ್ಧಿಮಾಂಧ್ಯ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ವಿಶೇಷ ಮಕ್ಕಳು ವಿಶೇಷ ಶಿಕ್ಷಕರ ಮಾರ್ಗದರ್ಶನದೊಂದಿಗೆ ಯೋಗದ ಕೆಲವು ಆಸನಗಳನ್ನು ಮಾಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರು, ವಿಶೇಷ ಶಿಕ್ಷಕ/ಶಿಕ್ಷಕೇತರರು ಉಪಸ್ಥಿತರಿದ್ದರು. ಶಿಕ್ಷಕರಾದ ವಿನಾಯಕ್‍ಸಿಂಗ್ ರಜಪೂತ್ ಅವರು ಯೋಗದ ಮಹತ್ವ ಕುರಿತು ಮಕ್ಕಳು ಮಾಡಿದ ಯೋಗಾಸನಗಳನ್ನು ನೋಡಿ ಶ್ಲಾಘಿಸಿದರು. ಕೊನೆಯಲ್ಲಿ ವಂದನಾರ್ಪಣೆಯನ್ನು ಸಹ ಶಿಕ್ಷಕರಾದ ಎಚ್ .ಟಿ. ಕೊಪ್ಪದ ವಂದಿಸಿದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!